ಬೆಂಗಳೂರು
ಕುಡಿತಕ್ಕೆ ಹಣ ನೀಡಲು ನಿರಾಕರಿಸಿದ ಗರ್ಭಿಣಿಯ ಮೇಲೆ ಆ್ಯಸಿಡ್ ಹಾಕಿ ಪರಾರಿಯಾಗಿರುವ ಪಾಪಿ ಪತಿಯ ಸುಳಿವು ಪತ್ತೆಯಾಗಿದ್ದು ಆತನ ಬಂಧನಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.ಎಂಟು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿ ತಪಸಿ ಬಿಸ್ವಾತ್ 10 ಸಾವಿರ ಹಣ ಕೊಡಲಿಲ್ಲ ಎನ್ನುವ ಕಾರಣಕ್ಕೆ ಆ್ಯಸಿಡ್ ಎರಚಿ ಪರಾರಿಯಾಗಿರುವ ಪತಿ ಚೀರಂಜಿತ್ ಬಿಸ್ವಾಸ್ ಸುಳಿವು ಪತ್ತೆಹಚ್ಚಿರುವ ಪೊಲೀಸರು ಆತನನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿಚೆನ್ನಣ್ಣವರ್ ತಿಳಿಸಿದ್ದಾರೆ.
ಆ್ಯಸಿಡ್ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ತಪಸಿ ಬಿಸ್ವಾತ್ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಮೂಲದ ತಪಸಿ ಹಾಗೂ ಚೀರಂಜೀತ್ ಬಿಸ್ವಾಸ್ ಎಂಟು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿವೆ.
ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ದಂಪತಿ ನಗರದ ನಾಗರಬಾವಿ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಕುಡಿತದ ಚಟ ಅಂಟಿಸಿಕೊಂಡಿದ್ದ ಚೀರಂಜೀತ್ ಬಿಸ್ವಾಸ್ ಕಳೆದೊಂದು ವರ್ಷದಿಂದ ಮಧ್ಯಪಾನಕ್ಕೊಳಗಾಗಿ ಬೇರೆ ಯಾವುದೇ ಕೆಲಸಕ್ಕೆ ಹೋಗಿರಲಿಲ್ಲ. ಇದೇ ವೇಳೆ ಪರಿಚಿತ ವ್ಯಕ್ತಿಯೋರ್ವ ನಾಗರಭಾವಿಯ ವರದಾ ಫರ್ಟಿಲಿಟಿ ಪ್ರೈವೈಡ್ ಕಂಪೆನಿಗೆ ಕರೆದುಕೊಂಡು ಬಾಡಿಗೆ ತಾಯ್ತಾನದಿಂದ ಹಣ ಸಂಪಾದಿಸಬಹುದು ಎಂದು ಹೇಳಿದ್ದಾರೆ.
ಅದರಂತೆ ತಪಸಿಯ ಗರ್ಭಕೋಶದಲ್ಲಿರುವ ಅಂಡಾಣು ಹೊರ ತೆಗೆದು 15 ದಿನಗಳ ನಂತರ ಮತ್ತೆ ಬರುವಂತೆ ಹೇಳಿ ಕಳುಹಿಸಿದ್ದಾರೆ. ಇದಾದ ಬಳಿಕ ಹೆಂಡತಿಯನ್ನು ಫರ್ಟಿಲಿಟಿ ಕೇಂದ್ರಕ್ಕೆ ಬಿಟ್ಟು ಊರಿಗೆ ಹೋಗಿದ್ದ. ಹಲವು ದಿನಗಳ ನಂತರ ಪತ್ನಿಗೆ ಫೋನ್ ಮಾಡಿ ಹಣ ಕಳುಹಿಸುವಂತೆ ಕೇಳಿದ್ದಾನೆ. ಅದಕ್ಕೆ ಪತ್ನಿ ನನಗೆ ಇಲ್ಲಿ ಕೆಲಸ ಇಲ್ಲ. ಹೀಗಾಗಿ ಹಣ ಕೂಡಲ್ಲ ಎಂದಿದ್ದಾಳೆ.
ಫೆ.20 ರಂದು ಬೆಂಗಳೂರಿಗೆ ಬಂದ ಚೀರಂಜೀತ್, ಹೆಂಡತಿ ಇರುವ ಫರ್ಟಿಲಿಟಿ ಕೇಂದ್ರಕ್ಕೆ ಮಾತನಾಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ಕಲಾಣ್ಯ ನಗರ ಬ್ರಿಡ್ಜ್ ಬಳಿ ಹಣ ನೀಡುವಂತೆ ಕೇಳಿದ್ದಾನೆ. ಆದರೆ ಆಕೆ ನಿರಾಕರಿಸಿದ್ದರಿಂದ ಬಾಟಲ್‍ನಿಂದ ಆ್ಯಸಿಡ್ ತೆಗೆದು ಆಕೆಯ ಬೆನ್ನು, ಎದೆ ಹಾಗೂ ಮುಖಕ್ಕೆ ಎರಚಿ ಸಾಯಿ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ.ಈ ಸಂಬಂಧ ಪ್ರಕರಣ ದಾಖಲಿಸಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
