ಬೆಂಬಲ ಬೆಲೆಗೂ ಕಡಿಮೆ ದರಕ್ಕೆ ಖರೀದಿಸಿದರೆ ಕ್ರಮ

ದಾವಣಗೆರೆ

   ಕೇಂದ್ರ ಸರ್ಕಾರ ಈ ಬಾರಿ ಮೆಕ್ಕೆಜೋಳ ಕ್ವಿಂಟಾಲ್‌ಗೆ 1760 ರೂ.ಗಳನ್ನು ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡಿದ್ದು, ಇದಕ್ಕಿಂತ ಕಡಿಮೆ ದರಕ್ಕೆ ಮೆಕ್ಕೆಜೋಳ ಖರೀದಿಸುವ ದಾಲ್ಲಾಲರು, ವರ್ತಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ ಎಚ್ಚರಿಸಿದರು.

  ಭಾನುವಾರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 1760 ರೂ. ಕನಿಷ್ಟ ಬೆಂಬಲ ನಿಗದಿ ಮಾಡಿ, ಇದನ್ನು ಖರೀದಿಸಿ ಪಡಿತರ ವ್ಯವಸ್ಥೆಯಲ್ಲಿ ವಿತರಿಸುಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಆದರೆ, ನಮ್ಮ ರಾಜ್ಯದ ಆಹಾರ ಪದ್ಧತಿಯಲ್ಲಿ ಮೆಕ್ಕೆಜೋಳದ ಬಳಕೆ ಇಲ್ಲ. ಹೀಗಾಗಿ ಪಡಿತರ ವ್ಯವಸ್ಥೆಯಲ್ಲಿ ವಿತರಿಸಲಾಗುವುದಿಲ್ಲ.

   ಗುಣಮಟ್ಟದ ಮಕ್ಕೆಜೋಳಕ್ಕೆ ಪ್ರಸ್ತುತ 1800-2000 ರೂ. ದರವಿದ್ದು, ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮೆಕ್ಕೆಜೋಳ ಖರೀದಿಸುವವರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಒಂದು ಅಂದಾಜಿನ ಪ್ರಕಾರ ಮುಸುಕಿನ ಜೋಳದಲ್ಲಿ ಇಡೀ ರಾಜ್ಯದಲ್ಲಿ ಶೇ.30 ರಷ್ಟು ಬೆಳೆ ಏರಿಕೆ ಆಗುವ ಸಾಧ್ಯತೆಗಳಿದ್ದು, ಇಲಾಖೆಯ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಶೇ.34 ರಷ್ಟು ಉತ್ಪಾದನೆ ಏರಿಕೆ ಯಾಗುವ ಸಾಧ್ಯತೆ ಇದಕ್ಕೆ ಕಾರಣ ಮಳೆ, ಬೆಳೆ, ಉತ್ತಮವಾಗಿದೆ ಎಂದು ಹೇಳಿದರು.

    ರಾಜ್ಯದಲ್ಲಿರುವ ಅನ್ನಭಾಗ್ಯ ಯೋಜನೆಯಡಿ ಪಡಿತರ ಅಕ್ಕಿ ವಿತರಣೆ ಮಾಡಲು ತಿಂಗಳಿಗೆ ಮೂರು ಲಕ್ಷ ಟನ್ ಅಕ್ಕಿ ಬೇಕಾಗಿದೆ. ಇದನ್ನು ಬೆಳೆಯಲು ಸುಮಾರು 50 ಲಕ್ಷ ಎಕರೆ ಜಮೀನು ಬೇಕಾಗಿದೆ. ಹೀಗಾಗಿ ಪಡಿತರ ವ್ಯವಸ್ಥೆಯಲ್ಲಿ ಇತರೆ ಅಹಾರ ಪದಾರ್ಥವನ್ನು ವಿತರಿಸಲು ಯೋಜನೆ ರೂಪಿಸುವ ಚಿಂತನೆ ಇದೆ ಎಂದರು.

    ಅನ್ಯಭಾಗ್ಯ ಯೋಜನೆಯಡಿ ಸಾರ್ವತ್ರಿಕವಾಗಿ ಅಕ್ಕಿ ವಿತರಣೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಒಂದೊAದು ಭಾಗದಲ್ಲಿ ಒಂದೊAದು ರೀತಿಯ ಆಹಾರ ಪದ್ಧತಿ ಇದೆ. ಕೆಲವರಿಗೆ ಭತ್ತ, ರಾಗಿ ಮತ್ತು ಜೋಳದ ಅಗತ್ಯವಿದೆ. ಆಯಾಯ ಪ್ರದೇಶದ ಜನರಿಗೆ ಅವರ ಪದ್ಧತಿಯಂತೆ ಧಾನ್ಯಗಳನ್ನು ಬೆಳೆಯಬೇಕು. ರೈತರು ಇದಕ್ಕೆ ಒಪ್ಪಬೇಕು. ಹೀಗಾಗಿ, ಇಂತಹ ಒಂದು ಪ್ರಾಯೋಗಿಕ ಪ್ರಯತ್ನವನ್ನು ಆಯೋಗ ಮಾಡಲಿದೆ ಎಂದು ಹೇಳಿದರು.

ಅಡಮಾನ ಸಾಲ :

     ರೈತರು ಬೆಳೆಗಾಗಿ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆಯುತ್ತಾರೆ. ನಂತರ ಬೆಳೆ ಬಂದಾಗ ಅವರಿಗೆ ನೀಡುತ್ತಾರೆ. ಇದರಿಂದ ರೈತನಿಗೆ ನಿಜವಾದ ಬೆಲೆ ದೊರಕದಂತಾಗುತ್ತದೆ ಮತ್ತು ಸಂಷ್ಟಕ್ಕೆ ಸಿಲುಕಬೇಕಾಗುತ್ತದೆ. ಇದನ್ನೆಲ್ಲಾ ನೋಡಿದರೆ ರೈತರಿಗೆ ಬೆಳೆ ಬೆಳೆಯಲು ಬ್ಯಾಂಕ್‌ಗಳಲ್ಲಿ ಸಾಲ ನೀಡಬೇಕು. ಕೇಂದ್ರ ಸರ್ಕಾರದ ಅಡಮಾನ ಸಾಲ ಯೋಜನೆ ರಾಜ್ಯದಲ್ಲಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.

      ಬೆಳೆ ಸಾಲಕ್ಕೆ ರಾಜ್ಯ ಸರ್ಕಾರವು ಶೂನ್ಯ ಬಡ್ಡಿದರ, ಕೇಂದ್ರ ಸರ್ಕಾರವು ಶೇ.7ರ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ, ಆದರೆ ಅಡಮಾನ್ ಸಾಲ ಯೋಜನೆಯಲ್ಲಿ ಶೇ.10ರಿಂದ 12ರ ಬಡ್ಡಿದರ ಇರುವುದರಿಂದ ಇದರ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.ರೈತ ಮುಖಂಡರಾದ ಆರ್.ಜಿ.ಬಸವರಾಜ್ ರಾಂಪುರ, ಅವರಗೆರೆಯ ಇಟಗಿಬಸಪ್ಪ, ಈಚಗಟ್ಟದ ಕರಿಬಸಪ್ಪ, ಅವರಗೆರೆಯ ಕಲ್ಲಪ್ಪ, ಜಯಣ್ಣ, ತಾಲ್ಲೂಕು ಕೃಷಿ ಅಧಿಕಾರಿ ರೇವಣಸಿದ್ದನಗೌಡ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link