ಕುಡಿದ ಅಮಲಿನಲ್ಲಿ ಖಾಕಿ ಜೊತೆಯಲ್ಲಿ ನಟ ಹರ್ಷ ಕಿರಿಕ್..!

ಬೆಂಗಳೂರು

    ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಪ್ರಕರಣ ಹೊಗೆಯಾಡುತ್ತಿರುವ ಬೆನ್ನಲ್ಲೇ ನಟನೋರ್ವ ಕುಡಿದ ಮತ್ತಿನಲ್ಲಿ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ರಾಜಾಹುಲಿ, ವರ್ಧನ ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಸ್ಯಾಂಡಲ್ ವುಡ್ ನಟ ಹರ್ಷ ಖಾಸಗಿ ಅಪಾರ್ಟ್​ಮೆಂಟ್​​​ ಬಳಿ ಗೆಳೆಯರೊಂದಿಗೆ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಬೀಟ್ ನಲ್ಲಿದ್ದ ಬಾಗಲಗುಂಟೆ ಪೊಲೀಸರು ಓಪನ್ ಏರಿಯಾದಲ್ಲಿ ಮದ್ಯ ಕುಡಿಯದಂತೆ ಸೂಚಿಸಿದ್ದರು. ಇದೇ ವಿಚಾರಕ್ಕೆ ಕುಡಿದ ಮತ್ತಿನಲ್ಲಿದ್ದ ನಟ ಹರ್ಷ, ಅವರ ಜೊತೆಗಿದ್ದ ಸ್ನೇಹಿತರರು ಪೊಲೀಸರಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ.ಈ ಸಂದರ್ಭದಲ್ಲಿ ತಕ್ಷಣವೇ ಪೊಲೀಸರು ನಟ ಹರ್ಷ ಹಾಗೂ ಆತನ ಗೆಳೆಯರನ್ನು ವಶಕ್ಕೆ ಪಡೆದು, ನಂತರ ಮತ್ತೊಮ್ಮೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap