ತಾಲ್ಲೂಕಿನ ಜಾನಪದ ಕಲಾವಿರದಿಗೆ ಶೀಘ್ರದಲ್ಲೇ ಸರ್ಕಾರದಿಂದ ಮಾಶಸಾನ : ಅಕಾಡೆಮೆ ಸದಸ್ಯ ಚಂದ್ರಪ್ಪ ಭರವಸೆ

ಚಳ್ಳಕೆರೆ

     ಕಳೆದ ಸಾವಿರಾರು ವರ್ಷಗಳಿಂದ ಶೋಷಿತ ಸಮುದಾಯದ ಹೃದಯದಲ್ಲಿ ಉದಯವಾದ eನಪದ ಕಲೆ ವ್ಯಕ್ತಿಯಿಂದ ವ್ಯಕ್ತಿಗೆ ಪ್ರಚಾರ ಪಡೆಯಿತು. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ನಡೆಯುವ ಸಂಪ್ರದಾಯ ಬದ್ದ ಮದುವೆ ಹಾಗೂ ಇತರೆ ಧಾರ್ಮಿಕ ಕಾರ್ಯಗಳಿಗೆ ಹಳ್ಳಿಯ ಮುಗ್ಧ ಜನರೇ ತಮ್ಮ ಬಾಯಿಂದ ಬರುವ ಅನೇಕ ಜನಪದ ಗೀತೆಗಳನ್ನು ಹಾಡುವ ಮೂಲಕ ಎಲ್ಲರಲ್ಲೂ ಆಸಕ್ತಿ ಮೂಡಿಸುತ್ತಿದ್ದರು. ಇಂತಹ ಜನಪದ ಕಲೆಯಿಂದ ಬದುಕನ್ನು ರೂಪಿಸಿಕೊಂಡಿರುವ ನೂರಾರು ಕಲಾವಿದರ ಈ ತಾಲ್ಲೂಕಿನಲ್ಲಿದ್ದು, ಅವರ ಮಾಹಿತಿ ಪಡೆದು ಅವರಿಗೆ ಸರ್ಕಾರದ ವರಿಯಿಂದ ಮಾಶಾಸನ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಾನಪದ ಅಕಾಡೆಮೆಯ ಸದಸ್ಯರು, ಜಾನಪದ ಸ್ಥಾಯಿ ಸಮಿತಿ ಅಧ್ಯಕ್ಷರೂ ಆದ ಚಂದ್ರಪ್ಪ ತಿಳಿಸಿದರು.

       ಅವರು, ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಜನಪದ ಕಲಾವಿದರ ಮಾಹಿತಿ ಸಂಗ್ರಹಣೆ ಹಾಗೂ ಸರ್ಕಾರಿ ಸೌಲಭ್ಯ ನೀಡುವ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಲ್ಲೂಕಿನ 20ಕ್ಕೂ ಹೆಚ್ಚು ಕಲಾವಿದರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು ಸಹ ನೀಡಿದರು. ರಾಜ್ಯ ಜಾನಪದ ಅಕಾಡೆಮೆ ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿ ಜಾನಪದ ಕಲಾವಿದರನ್ನು ಪತ್ತೆ ಹಚ್ಚಿ ಅವರಿಗೆ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರವಾಸ ಪ್ರಾರಂಭಿಸಿದ್ದೇನೆ.

        ತಾಲ್ಲೂಕಿನ ಎಲ್ಲಾ ಜಾನಪದ ಕಲಾವಿದರಿಗೆ ಹಲವಾರು ಜನಪದ ಕಲೆಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಬರುವ ಅಕ್ಟೋಬರ್ ಮಾಹೆಯಲ್ಲಿ ಒಂದು ದಿನದ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ತಾಲ್ಲೂಕಿನಲ್ಲಿ ಜಾನಪದ ಕಲಾವಿದರನ್ನು ಗುರುತಿಸಿ ಗೌರವಿಸವ ಕಾರ್ಯವನ್ನು ಜಾನಪದ ಸಾಹಿತ್ಯ ಮತ್ತು ಗ್ರಾಮೀಣಾಭಿವೃದ್ಧಿ ಶಿಕ್ಷಣ ಟ್ರಸ್ಟ್ ಮಾಡಿದ್ದು, ಅಧ್ಯಕ್ಷ ನಗರಂಗೆರೆ ಶ್ರೀನಿವಾಸ್‍ರವರನ್ನು ಅಭಿನಂದಿಸುವುದಾಗಿ ತಿಳಿಸಿದರು. ತಾಲ್ಲೂಕಿನ ಹಿರಿಯ ಜಾನಪದ ಕಲಾವಿದೆ. ಹನುಮಕ್ಕರವರಿಗೆ ರಾಜ್ಯ ಜಾನಪದ ಪ್ರತಿಷ್ಠಿತ ಪ್ರಶಸ್ತಿ ನೀಡಲು ಶಿಫಾರಸ್ಸು ಮಾಡಿರುವುದಾಗಿ ತಿಳಿಸಿದರು.

       ತಾಲ್ಲೂಕಿನ ಜಾನಪದ ಸಾಹಿತ್ಯ ಮತ್ತು ಗ್ರಾಮೀಣಾಭಿವೃದ್ಧಿ ಶಿಕ್ಷಣ ಟ್ರಸ್ಟ್ ಮಾಡಿದ್ದು, ಅಧ್ಯಕ್ಷ ನಗರಂಗೆರೆ ಶ್ರೀನಿವಾಸ್, ಜಾನಪದ ಕಲಾವಿದರಾದ ನಿಂಗಮ್ಮ, ದುರುಗಮ್ಮ, ಗೌರಮ್ಮ, ತಿಮ್ಮಕ್ಕ, ಲಕ್ಷ್ಮಕ್ಕ, ತಿಮ್ಮಕ್ಕ, ಕಮಲಕ್ಕ, ಕೆಂಚಮ್ಮ, ಶಿವಾನುಪೂರ್ಣ, ಓಬಕ್ಕ, ಶಾರದಮ್ಮ, ಮೀನಾಕ್ಷಿ ಮುಂತಾದವರು ಸಭೆಯಲ್ಲಿ ಹಾಜರಿದ್ದರು. ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ, ರಾಜು, ಓಬಳೇಶ್, ಹನುಮಂತರಾಯ, ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link