ಆದಿಜಾಂಬವ ಅಭಿವೃದ್ದಿ ನಿಗಮ ಸ್ಥಾಪನೆ ಕಾರ್ಯಕ್ರಮ

ತಿಟೂರು :

          ಕರ್ನಾಟಕ ಸರ್ಕಾರ ಮಾದಿಗ ಜನಾಂಗದ ಬಹುದಿನಗಳ ಬೇಡಿಕೆಯಾದ ಆದಿಜಾಂಭವ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿದ್ದು ಇದೇ ತಿಂಗಳ 17 ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದ್ದು ತಾಲೋಕಿನಲ್ಲಿ ಹೆಚ್ಚಿನ ಆದಿಜಾಂಭವ ಬಂಧುಗಳು ಭಾಗವಹಿಸಬೇಕಾಗಿ ತಿಪಟೂರು ಆದಿಜಾಂಬವ ಮಹಾ ಸಭಾ ತಾಲ್ಲೂಕು ಅದ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

           ನಗರದ ಪ್ರವಾಸಿ ಮಂದಿರದಲ್ಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು ಆದಿ ಜಾಂಬವ ಜನಾಂಗ ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಜನಾಂಗವಾಗಿದ್ದು ಪರಿಶಿಷ್ಟ ಜಾತಿಯೆಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದರು, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಷೋಷಣೆಗೆ ಒಳಗಾಗುತ್ತಿದ್ದು ಒಳಮೀಸಲಾತಿ ಜಾರಿಗೆ ತರಬೇಕು ಎನ್ನುವ ಹೋರಾಟ ನರಂತರವಾಗಿ ನೆಡೆಯುತ್ತಿದೆ,

         ಅದರ ಹೋರಾಟದ ಮೊದಲ ಗೆಲುವು ಎಂಭಂತೆ ಹಿಂದಿನ ಸಿದ್ದರಾಮಯ್ಯನವರ ಸರ್ಕಾರ ಆದಿಜಾಂಬವ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿತ್ತು, ಪಸಕ್ತ ಕುಮಾರಸ್ವಾಮಿಯವರ ಸರ್ಕಾರ ನಿಗಮಕ್ಕೆ ಅನುಧಾನ ನಿಗಧಿ ಮಾಡಿ ಲೋಕಾರ್ಪಣೆಯನ್ನು ಇದೇ ಜನವರಿ 17 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಆದಿಜಾಂಬವ ಜನಾಂಗದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ಹಾಗೂ ಆರ್ಥಿಕವಾಗಿ ಸಧೃಡರಾಗಿ ಸಮಾಜದಲ್ಲಿ ಮುಂದೆ ಬರಬೇಕು, ಅಸ್ಟೇ ಅಲ್ಲದೇ ರಾಜಕೀಯವಾಗಿ ಮುಂದೆ ಬರಬೇಕು ಎಂದು ಕರೆಕೊಟ್ಟರು, 

        ಸಭೆಯಲ್ಲಿ ಡಿಎಸ್‍ಎಸ್ ಮುಖಂಡರಾದ ಕುಪ್ಪಾಳು ರಂಗಸ್ವಾಮಿ, ಟಿ ಕೆ ಕುಮಾರ್,ಜಗದಾರ್ಯ ಸ್ವಾಮಿ. ಈಚನೂರು ಮಹಾದೇವ್, ನಾಗತೀಹಳ್ಳಿ ಕೃಷ್ಣಮೂರ್ತಿ, ಅಶೋಕ್ ಗೌಡನಕಟ್ಟೆ ಕಲ್ಲೇಶ್ ಶೆಟ್ಟಿಹಳ್ಳಿ, ಶಿವಣ್ಣ, ಮಹಲಿಂಗಯ್ಯ, ಲಿಂಗರಾಜು, ಶ್ರೀನಿವಾಸ್ ಮೂಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap