ನೊಂದ ಮಹಿಳೆಗೆ ಒಂದೇ ಸೂರಿನಡಿ ಹತ್ತಾರು ಪರಿಹಾರ

ಹಾವೇರಿ

    ಸಮಾಜದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಎಲ್ಲಾ ರೀತಿಯ ದೌರ್ಜನ್ಯಗಳಿಗೆ ಸೂಕ್ತ ಕಾನೂನು ಹಾಗೂ ಸಾಂಸ್ಥಿಕ ನೆರವು ಒದಗಿಸಲು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಗೆಳತಿ ಚಿಕಿತ್ಸಾ ಘಟಕ ಕಾರ್ಯ ನಿರ್ವಹಿಸುತ್ತಿದೆ.

    ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಅನೇಕ ದೌರ್ಜನ್ಯಗಳಿಗೆ ಒಳಗಾಗುವ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಸೂಕ್ತ ಚಿಕಿತ್ಸೆಗಾಗಿ, ಕಾನೂನಿನ ನೇರವಿಗೆ, ಸಮಾಲೋಚನೆಗೆ, ಸೇವೆಗಳನ್ನು ಪಡೆಯಲು ಬೇರೆ ಬೇರೆ ಸ್ಥಳಗಳಿಗೆ ಹೋಗಲು ಸಮಸ್ಯೆ ಎದುರಿಸುವ ಮಹಿಳೆಯರಿಗೆ ಒಂದೇ ಸೂರಿನಡಿ ಶೀಘ್ರ ನೆರವನ್ನು ಒದಗಿಸಲು ಮಹಿಳಾ ವಿಶೇಷ ಚಿಕಿತ್ಸಾ ಘಟಕವು ಸಹಕಾರಿಯಾಗಿದೆ.

     ಏನಿದು ಗೆಳತಿ ಚಿಕಿತ್ಸಕಾ ಘಟಕ: 2014 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಅತ್ಯಾಚಾರ, ಲೈಂಗಿಕ ಕಿರುಕುಳ ನೀಡುವರ ವಿರುದ್ದ ಕ್ರಮ ಕೈಗೊಳ್ಳಲು ಸರಕಾರ ಫೋಕ್ಸೋ ಕಾಯಿದೆಯಡಿ ಶಿಕ್ಷೆ ನೀಡಲು ಆರಂಭವಾದ ಘಟಕ, ನಂತರ 2017-18ರಲ್ಲಿ ಗೆಳತಿ ಚಿಕಿತ್ಸಕಾ ಘಟಕ ಪ್ರಾರಂಭಿಸಿದೆ, 2020 ಜನೇವರಿಯಿಂದ ಸಖಿ (ಒನ್ ಸ್ಟಾಪ್ ಸೆಂಟರ್) ಘಟಕ ತಾತ್ಕಾಲಿಕವಾಗಿ ಪ್ರಾರಂಭಿಸಿದೆ. ಸಾರ್ವಜನಿಕರಿಗೆ ವಿವಿಧ ಕ್ಷೇತ್ರಗಳಲ್ಲಿ ಅವರಿಗೆ ಸೂಕ್ತವಾದ ನ್ಯಾಯ ಸಿಗದೇ ಕಂಗಾಲಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿದವರು ಗೆಳತಿ ಮಹಿಳಾ ಚಿಕಿತ್ಸಾ ಘಟಕದಲ್ಲಿ ನ್ಯಾಯ ದೊರಕಿಸಿಕೊಡುವ ಕೆಲಸ ಇದರದ್ದಾಗಿದೆ.

   ಮೂಲ ಉದ್ದೇಶ: ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರುನಡಿ ವೈದ್ಯಕೀಯ ಚಿಕಿತ್ಸೆ, ಪೋಲೀಸ್ ನೇರವು, ಕಾನೂನು ನೆರವು, ಸಮಾಲೋಚನೆ ಮತ್ತು ಮಹಿಳಾ ಸಹಾಯವಾಣಿ ಮುಂತಾದ ಸೌಲಭ್ಯಗಳನ್ನು ಒದಗಿಸುವುದು.
ಮಹಿಳಾ ವಿಶೇಷ ಚಿಕಿತ್ಸಾ ಘಟಕದ ಮೂಲಕ ಸಮಗ್ರವಾದ ಸೇವೆಗಳನ್ನು ಒದಗಿಸುವ ಹಾಗೂ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಯನ್ನು ಸಂಪರ್ಕಿಸಿ ಮುಖ್ಯವಾಗಿ ಸಾರ್ವಜಿನಿಕ ಆರೋಗ್ಯ ಸೇವೆಗಳ ಮೂಲಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸುವುದಾಗಿದೆ. ಸರಕಾರ ಇಂತಹ ಯೋಜನೆಗಳನ್ನು ಅನುಷ್ಟಾನಕ್ಕೆ ತಂದಿರುವುದು ನ್ಯಾಯ ಕಲ್ಪಿಸುವ ಉದ್ದೇಶದಿಂದ. ಇದನ್ನು ತಾತ್ಕಾಲಿಕವಾಗಿ ಬಾಹ್ಯ ಮೂಲದ ಏಜೆನ್ಸಿಯಿಂದ ಮಾನವ ಸಂಪನ್ಮೂಲದ ನಿರ್ವಹಣೆಯನ್ನು ಮಾಡಲಾಗುತ್ತಿದೆ.

   .ನೆರವು: ಲೈಂಗಿಕ ಅತ್ಯಾಚಾರಕ್ಕೊಳಗಾದ ಮಹಿಳೆಗೆ ವೈದ್ಯಾಧಿಕಾರಿಗಳಿಂದ ವೈದ್ಯಕೀಯ ನೆರವು, ಕಾನೂನು ನೆರವು ನೀಡಿ ನ್ಯಾಯ ಒದಗಿಸಿಕೊಡಲಾಗುವುದು, ನುರಿತ ಸಮಾಲೋಚಕರಿಂದ ಅಗತ್ಯ ಸಮಾಲೋಚನೆ ನಡೆಸಿ ಮಾನಸಿಕ ಸ್ಥೈರ್ಯ ಹೆಚ್ಚಿಸಲಾಗುವುದು.

    ಮಹಿಳಾ ಪೋಲೀಸ್ ಅಧಿಕಾರಿಯು ಪ್ರಕರಣ ದಾಖಲಿಸಿಕೊಂಡು ಸಂಬಂಧಪಟ್ಟ ಪೋಲೀಸ್ ಠಾಣೆಗೆ ವರ್ಗಾಯಿಸುವುದು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನೇಮಿಸಲ್ಪಟ್ಟ ಕಾನೂನು ಸಲಹೆಗಾರರಿಂದ ಅಗತ್ಯ ಕಾನೂನು ನೇರವು ಒದಗಿಸುವರು. ಸರಕಾರದಿಂದ ಗುರುತಿಸಲ್ಪಟ್ಟ ಸ್ವಯಂ ಸೇವಾ ಸಂಸ್ಥೆಗಳು, ಸರಕಾರಿ ಗೃಹಗಳಲ್ಲಿ ಮಹಿಳೆಯರಿಗೆ ಆಶ್ರಯ ಮತ್ತು ರಕ್ಷಣೆ ಒದಗಿಸಲಾಗುವುದು.

      ನೊಂದ ಮಹಿಳೆಯರಿಗೆ ತುರ್ತು ಚಿಕತ್ಸಾ ಘಟಕ, ಐ.ಸಿ.ಯುನ ವ್ಯವಸ್ಥೆ ಮಾಡಲಾಗುವು. ಅಷ್ಟೇ ಅಲ್ಲದೇ ಚಿಕಿತ್ಸೆಗೆ ದಾಖಲಾದ ಮಹಿಳೆಯರಿಗೂ ಗೆಳತಿ ಘಟಕದ ಬಗ್ಗೆ ಮಾಹಿತಿ ನೀಡಿ ಸೌಲಭ್ಯವನ್ನು ಮಾಡಿಕೊಡಲಾಗುವುದು. ಚಿಕಿತ್ಸೆಗೆ ಅಗತ್ಯವಿದ್ದಲ್ಲಿ ಶುಶ್ರೂಷಕರನ್ನು ನೇಮಿಸಿ ಒ.ಪಿ.ಡಿಯ ಸ್ಥಳಾವಕಾಶ ಕಲ್ಪಿಸಲಾಗುವುದು ಗೆಳತಿ ಕೇಂದ್ರದ ಕಾರ್ಯವಾಗಿದೆ.

      ಸಮಾಜದಲ್ಲಿ ನಮ್ಮ ದೈನಂದಿನ ಬದುಕಿನಲ್ಲಿ ಇಂತಹ ಅನೇಕ ಘಟನಾವಳಿಗಳು ನಡೆಯುತ್ತಿರುತ್ತವೆ, ಕೆಲವೊಂದು ಸಮಸ್ಯೆಗಳು ಬಗೆ ಹರಿಯದೇ ಸೋತು ಸುಮ್ಮನ್ನಾಗಿರುತ್ತಾರೆ, ಈ ಘಟಕದ ಮೂಲಕ ಸಮಾಜದಲ್ಲಿ ಮಹಿಳೆಯರ ಮೇಲೆ ಆಗುವಂತಹ ದೌರ್ಜನ್ಯಗಳು, ಅತ್ಯಾಚಾರ, ಮಾನಸಿಕ ಕಿರುಕುಳ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದರು ನ್ಯಾಯ ಸಿಕ್ಕಿರುವುದಿಲ್ಲ, ಅಷ್ಟೇ ಅಲ್ಲದೇ ಬಾಲ್ಯ ವಿವಾಹ, ಮಕ್ಕಳ ಮೇಲೆ ಅತ್ಯಾಚಾರಗಳು, ಕಿರುಕುಳ ಇಂತಹ ಸಮಸ್ಯೆಗಳಿಗೆ ಗೆಳತಿ ಕೇಂದ್ರ ಪರಿಹಾರ ಒದಗಿಸಬಲ್ಲದು. ದೌರ್ಜನ್ಯಕ್ಕೆ ಒಳಗಾದವರು ಅಥವಾ ಕಾಳಜಿ ಯುಳ್ಳವರು, ನೊಂದ ಮಹಿಳೆಯರು ನೆರವಿಗಾಗಿ ಉಚಿತ ಮಹಿಳಾ ಸಹಾಯವಾಣಿ 181 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಅಥವಾ ಗೆಳತಿ ಕೇಂದ್ರದ ಕಚೇರಿಯ ದೂರವಾಣಿ ಸಂಖ್ಯೆ:8375-236726ನ್ನು ಸಂಪರ್ಕಿಸಬಹುದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link