ನವದೆಹಲಿ
2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕ್ಷಿಪ್ರಗತಿಯಲ್ಲಿ ಗ್ರಾಮ ನೈರ್ಮಲೀಕರಣ ವೇಗ ಪಡೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.
ಮಹಾತ್ಮಗಾಂಧಿ ಅವರ 150 ಜಯಂತಿ ಅಂಗವಾಗಿ ಕುಡಿಯುವ ನೀರು ಮತ್ತು ನೈರ್ಮಲೀಕರಣ ಸಚಿವಾಲಯದ ಆಯೋಜಿಸಿದ್ದ ಅಂತಾರಾಷ್ಟ್ರೀಯ ನೈರ್ಮಲ್ಯ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
2014ಕ್ಕೂ ಮುಂಚೆ ಶೇ, 34 ರಷ್ಟಿದ್ದ ಗ್ರಾಮ ನೈರ್ಮಲೀಕರಣ ಈಗ ಶೇ, 94ರಷ್ಟು ಹೆಚ್ಚಾಗಿದೆ. ಐದು ಲಕ್ಷ ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತಗೊಂಡಿದ್ದು, ಅವರು, 25 ಕ್ಕೂ ಹೆಚ್ಚು ರಾಜ್ಯಗಳು ಬಯಲು ಬಹಿರ್ದೆಸೆಯಿಂದ ಮುಕ್ತಗೊಂಡಿರುವುದಾಗಿ ಘೋಷಿಸಿಕೊಂಡಿವೆ ಎಂದು ತಿಳಿಸಿದರು.
ನಾಲ್ಕು ವರ್ಷಗಳ ಹಿಂದೆ ದೇಶದಲ್ಲಿ ಶೇ,60 ರಷ್ಟು ಮಂದಿ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದರು. ಆದರೆ, ಈಗ ಇದು, ಶೇ. 20 ರಷ್ಟು ಕಡಿಮೆಯಾಗಿದೆ. ತಮ್ಮ ಸರ್ಕಾರದ ಅವಧಿಯಲ್ಲಿ ಗ್ರಾಮ, ನಗರ ಪ್ರದೇಶಗಳಲ್ಲೂ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು, ಶೇ. 90 ಕ್ಕೂ ಹೆಚ್ಚು ಮಂದಿ ಶೌಚಾಲಯ ಬಳಸುತ್ತಿದ್ದಾರೆ ಎಂದು ಹೇಳಿದರು.
ಗಾಂಧೀಜಿ ಅವರ ತತ್ವ ಆದರ್ಶಗಳು ಆಳವಾಗಿ ಅರ್ಥಮಾಡಿಕೊಂಡಿಲ್ಲ. ಆದರೆ. ಅವರಿಂದ ಸ್ಪೂರ್ತಿಗೊಂಡು ಸ್ವಚ್ಛ ಭಾರತ ಅಭಿಯಾನವನ್ನು ಚಾಲನೆಗೊಳಿಸಲಾಯಿತು. ಸುಸ್ಥಿರ ಅಭಿವೃದ್ದಿ ಸಾಧನೆಯತ್ತ ಭಾರತ ಮುನ್ನುಗುತ್ತಿದೆ ಎಂದು ತಿಳಿಸಿದರು.ಜಗತ್ತನ್ನು ಸ್ವಚ್ಛಗೊಳಿಸಲು ರಾಜಕೀಯ ನಾಯಕತ್ವ, ರಾಜಕೀಯ ನಿಧಿ, ಸಹಭಾಗಿತ್ವ ಮತ್ತು ಜನರ ಸಹಭಾಗಿತ್ವ ಎಂಬ ನಾಲ್ಕು ಪಿಎಸ್ ಗಳು ಅತ್ಯಗತ್ಯವಾಗಿದೆ ಎಂದು ನರೇಂದ್ರಮೋದಿ ಹೇಳಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ