ಅಗಲಿದ ಸಿಕೆಗೆ ಒಡನಾಡಿಗಳ ನುಡಿ ನಮನ

ದಾವಣಗೆರೆ:

   ನಗರದ ತ್ರಿಶೂಲ್ ಕಲಾಭವನದಲ್ಲಿ ಭಾನುವಾರ ನಡೆದ ಹಿರಿಯ ಪತ್ರಿಕೋಧ್ಯಮಿ, ಹಿರಿಯ ರಾಜಕಾರಣಿ ಸಿ.ಕೇಶವಮೂರ್ತಿ ಅವರ ನುಡಿ ನಮನ ಕರ್ಯಕ್ರಮದಲ್ಲಿ ಅವರ ಒಡ ನಾಡಿಗಳ ಸಿಕೆ ಅವರ ಜನಪರ ಕಾರ್ಯಗಳನ್ನು ಶ್ಲಾಘಿಸಿ ಕೊಂಡಾಡಿದರು.

    ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ‘1969ರಲ್ಲಿ ನಾನು ಮತ್ತು ಅವರು ರಾಜಕೀಯ ಜೀವನ ಆರಂಭಿಸಿದ್ದೇವು. ಸಿಕೆ ನನಗಿಂತ ಆರು ತಿಂಗಳು ದೊಡ್ಡವರು, ನನಗಿಂತ ಮೊದಲೇ ರಾಜಕೀಯ ಆರಂಭಿಸಿದ್ದರು. ಅವರು ಮೂರು ವರ್ಷ ನಗರಸಭೆ ಅಧ್ಯಕ್ಷರಾಗಿ ನಂತರ ನನಗೆ ಬಿಟ್ಟುಕೊಟ್ಟರು. ಅಂದು ಊರು ಚಿಕ್ಕದಾಗಿದ್ದರೂ ಪಕ್ಷ ಪಾರ್ಟಿಗಳು ದೊಡ್ಡದಾಗಿದ್ದವು. ಅಂಥಹ ಸಂದರ್ಭದಲ್ಲೂ ಗೆದ್ದು ನಗರದ ಅಭಿವೃದ್ಧಿಗೆ ನೀಡಿರುವ ಕಾರಣಿಕೆ ಅತ್ಯಂತ ಸ್ಮರಣೀಯವಾಗಿದೆ ಎಂದರು.

    ಖ್ಯಾತ ಲೆಕ್ಕ ಪರಿಶೋಧಕ ಅಥಣಿ ವೀರಣ್ಣ ಮಾತನಾಡಿ, ದಾವಣಗೆರೆಯಲ್ಲಿ ಮೊಟ್ಟಮೊದಲು ನಗರಾಭಿವೃದ್ಧಿಯ ಪರಿಕಲ್ಪನೆ ಹಾಕಿದ ಕೀರ್ತಿ ಕೇಶವಮೂರ್ತಿಯವರಿಗೆ ಸಲ್ಲುತ್ತದೆ ಎಂದು ನುಡಿದರು.ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಕೇಶವಮೂರ್ತಿಯವರು ಬಿಟ್ಟು ಹೋಗಿರುವ ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುವ ಅವಶ್ಯಕತೆ ಇದೆ. ಅವರ ವಿಚಾರವಂತಿಕೆ, ದೂರದೃಷ್ಟಿ ನಮ್ಮಂಥಹ ರಾಜಕಾರಣಿಗಳಿಗೆ ಮಾದರಿ ಆಗಬೇಕಿದೆ. ಅವರ ಜನಮಾನಸದಲ್ಲಿ ಉಳಿಯಬೇಕಾದರೆ, ನಗರದ ಯಾವುದಾದರು ರಸ್ತೆ ಅಥವಾ ಬಡಾವಣೆಗೆ ಕೇಶವಮೂರ್ತಿ ಹೆಸರು ಇಡಬೇಕು ಅಥವಾ ದಾವಣಗೆರೆಯನ್ನೇ ಬೆಸೆಯುವ ರಿಂಗ್ ರಸ್ತೆಗೆ ಅವರ ಹೆಸರು ನಾಮಕರಣ ಮಾಡಬೇಕೆಂದು ಸಲಹೆ ನೀಡಿದರು.

    ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ದಾವಣಗೆರೆಯಲ್ಲಿ ಪಂಪಣ್ಣ, ಕೇಶವಣ್ಣ, ಶಂಕ್ರಣ್ಣ ಮತ್ತು ಕೆ.ಮಲ್ಲಣ್ಣ ಈ ನಾಲ್ಕು ಅಣ್ಣಂದಿರು ಕೂಡ ಸಮಾಜಸೇವೆಗೆ ತಮ್ಮ ಬದುಕನ್ನು ಮುಡುಪಾಗಿಟ್ಟವರು. ಈ ಪೈಕಿ ಇಬ್ಬರು ಅಣ್ಣಂದಿರು ನಮ್ಮನ್ನು ಅಗಲಿದ್ದಾರೆ. ಪಂಪಾಪತಿಯವರು ನಗರದಲ್ಲಿ ಗಿಡಮರಗಳ ಅಭಿವೃದ್ಧಿಗೆ ಕಾರಣೀಭೂತರಾದರೆ, ಸಿ.ಕೇಶವಮೂರ್ತಿಯವರು ಸಿಮೆಂಟ್ ರಸ್ತೆ, ಹೊಸ ಬಡಾವಣೆ, ಸ್ಟೇಡಿಯಂ ನಿರ್ಮಾಣ ಮಾಡುವ ಮೂಲಕ ದಾವಣಗೆರೆಯನ್ನು ಇಡೀ ರಾಜ್ಯಕ್ಕೆ ಪರಿಚಯಿಸಿದ್ದಾರೆ, ಶಂಕ್ರಣ್ಣನರು ದಾವಣಗೆರೆಯನ್ನು ವಿದ್ಯಾಕಾಶಿಯನ್ನಾಗಿ ಮಾಡಿದ್ದಾರೆ. ಕೆ.ಮಲ್ಲಣ್ಣನವರು ಕುಸ್ತಿ ಮತ್ತು ಕ್ರೀಡಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

      ಮಾಜಿ ಸಚಿವೆ ನಾಗಮ್ಮ ಕೇಶಮೂರ್ತಿ, ಮಾಜಿ ಶಾಸಕ ಬಸವರಾಜನಾಯ್ಕ, ಶ್ರೀಮತಿ ಮಂಜುಳಾ ಬಸವಲಿಂಗಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ಆರ್.ಎಸ್.ನಾರಾಯಣಸ್ವಾಮಿ, ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿಯೋಗಿಸ್ವಾಮಿ, ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ್, ಸಿಕೆ ಅವರ ಹಿರಿಯ ಸಹೋದರ ಚನ್ನಗಿರಿ ವಿರೂಪಾಕ್ಷಪ್ಪ, ಕುಸುಮಶೆಟ್ರು, ಕಾಂಗ್ರೆಸ್ ಮುಖಂಡ ನಾಸೀರ್ ಅಹಮದ್, ಆನಗೋಡು ನಂಜುಂಡಪ್ಪ, ಶಿವನಕೆರೆ ಬಸವಲಿಂಗಪ್ಪ, ಕೆ.ಎನ್.ಸ್ವಾಮಿ, ಶಿವಾಜಿರಾವ್, ಸಿ.ಆರ್.ಸತ್ಯನಾರಾಯಣ, ಮೋತಿ ಶಂಕ್ರಣ್ಣ, ವಸಂತಕುಮಾರ್, ಅರುಣಾಚಲ ಶ್ರೇಷ್ಟಿ, ದೇವರ ಮನೆ ಶಿವಕುಮಾರ್, ಡಾ.ಶಾರದ ಶೆಟ್ಟಿ, ದಿನೇಶ್‍ಕೆ ಶೆಟ್ಟಿ, ಸಿ.ಆರ್.ಚಂದ್ರಶೇಖರ್, ಎ.ನಾಗರಾಜ್, ಮಲ್ಲಿಕಾ ರಾಮಮೂರ್ತಿ, ಆರ್.ಟಿ.ಅರುಣಕುಮಾರ್, ಡಾ.ಶೀಲಾ ಜಯಂತ್ ಮತ್ತಿತರರು ಹಾಜರಿದ್ದರು. ಸಿಕೆ ಅವರ ಪುತ್ರ ಡಾ.ಜಯಂತ್ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap