ಹರಪನಹಳ್ಳಿ:
ಪಟ್ಟಣದ ಐತಿಹಾಸಿಕ ಪ್ರಸಿದ್ದ ಸಾರಿಬಯಲು ವೀರಭದ್ರೇಶ್ವರ ದೇವರ ಅಗ್ನಿಕುಂಡ ತುಳಿಯುವ ಮೂಲಕ ಭಕ್ತರು ಭಕ್ತಿ ಸಮರ್ಪಿಸಿದರು.
ಸಮಾಳ, ನಂದಿಕೋಲು ಸೇರಿದಂತೆ ಸಕಲ ವಾದ್ಯಗಳೊಂದಿಗೆ ವೀರಭದ್ರದೇವರ ಉತ್ಸವಮುರ್ತಿಯ ಹೂವಿನ ಪಲ್ಲಕ್ಕಿಯೊಂದಿಗೆ ಪುರವಂತರು, ದೇವರು ಧರಿಸಿದರುವರು ಭಕ್ತರು ಬೆಳಿಗ್ಗೆ 9ಗಂಟೆಗೆ ಹಿರೇಕೆರಿ ಬಳಿಗೆ ತೆರಳಿ ಗಂಗೆ ಪೂಜೆ ನೇರವೇರಿಸಿ ನಂತರ ದೇವಸ್ಥಾನ ಆವರಣದಲ್ಲಿ ಅಗ್ನಿಕುಂಡದ ಬಳಿಗೆ ಆಗಮಿಸಿದರು.
ನಂತರ ಅಗ್ನಿಗೆ ಅಷ್ಟಪಾಲಕರಿಗೆ ಮತ್ತು ಪಾದೋದಕ ಪೂಜೆ ಸಲ್ಲಿಸಿದರು ಇದಾದ ಬಳಿಕ ದೇವರು ಧರಿಸಿದ ಪುರವಂತರು ಮೊದಲಿಗೆ ಅಗ್ನಿ ತುಳಿಯುವ ಮೂಲಕ ಚಾಲನೆಗೊಂಡಿತು.
ಮಹಿಳೆಯರು, ಯುವಕರು, ಮಕ್ಕಳು ಎನ್ನದೇ ಸರ್ವಜನಾಂಗದವರು ಮಡಿಯಿಂದ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಅಗ್ನಿಕೆಂಡವನ್ನು ಹಾಯ್ದು ಭಕ್ತಿ ಮೇರೆದರು.
ಈ ಸಂದರ್ಭದಲ್ಲಿ ಧರ್ಮಕರ್ತ ಪ್ರವೀಣಕುಮಾರ, ಪರಮೇಶ್ವರಗೌಡ, ನೀಲಗುಂದ ಈರಣ್ಣ, ಕೌಟಿ ಶಂಕ್ರಪ್ಪ, ತೆಗ್ಗಿನಮಠದ ವಿಶ್ವನಾಥ, ವೀರಯ್ಯ, ಪೂಜಾರ ಮಲ್ಲಪ್ಪ,ಪಂಡ್ರಹಳ್ಳಿ ಹಾಲಪ್ಪ, ಪಾಟೀಲ್ ಬೆಟ್ಟನಗೌಡ, ಪಿಬಿಗೌಡ, ಎಚ್.ಮಲ್ಲಿಕಾರ್ಜುನ, ಮಂಜುನಾಥಚಾರ್ಯ, ಶಿವಕುಮಾರ, ಎಂ.ಶಂಕರ, ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ