ಶ್ರೀ ಭದ್ರಕಾಳಿ ಮತ್ತು ಶ್ರೀ ವೀರಭದ್ರಸ್ವಾಮಿಯವರ ಅಗ್ನಿಕೊಂಡ ಜಾತ್ರಾ ಮಹೋತ್ಸವ

ತುರುವೇಕೆರೆ:

      ಇತಿಹಾಸ ಪ್ರಸಿದ್ದ ಶ್ರೀ ಭದ್ರಕಾಳಿ ಮತ್ತು ಶ್ರೀ ವೀರಭದ್ರಸ್ವಾಮಿಯವರ ಅಗ್ನಿಕೊಂಡ ಜಾತ್ರಾ ಮಹೋತ್ಸವವು ತಾಲೂಕಿನ ಸೂಳೇಕೆರೆಯ ಮೂಲಸ್ಥಾನದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಬೆಳಗಿನ ಜಾವದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.

       ಅಗ್ನಿಕೊಂಡದ ಅಂಗವಾಗಿ ಮಂಗಳವಾರ ಸಂಜೆ ಮೂಲದೇವರಿಗೆ ಅಕ್ಕಿಪೂಜೆ ಏರ್ಪಡಿಸಲಾಗಿತ್ತು. ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ, ಕುಂಕುಮಾರ್ಚನೆಯೊಂದಿಗೆ ಕಳಸ ಪೂಜೆ, ಗಂಗಾಪೂಜೆ, ಮಡಿ ಸಂತರ್ಪಣೆ ನೆಡೆದು, ಶ್ರೀ ವೀರಭದ್ರ ಸ್ವಾಮಿಯವರಿಗೆ ಬೆಳ್ಳಿ ಕಿರೀಟಧಾರಣೆಯನ್ನು ಧಾರ್ಮಿಕ ವಿದಿವಿಧಾನಗಳೊಂದಿಗೆ ಭಕ್ತರು ನೆರವೇರಿಸಿದರು. ನಂತರ ವಿದ್ಯುತ್ ದೀಪಗಳಿಂದ ಅಲಂಕೃತವಾದ ಮುತ್ತಿನ ಪಲ್ಲಕ್ಕಿಯಲ್ಲಿ ಸ್ವಾಮಿಯವರನ್ನು ಕೂರಿಸಿ ಧ್ವಜಕುಣಿತ, ಲಿಂಗದ ವೀರರ ಕುಣಿತ, ವೀರಗಾಸೆ, ಕಹಳೆವಾದ್ಯ ಸೇರಿದಂತೆ ಅನೇಕ ಜಾನಪದ ಕಲಾ ಪ್ರಕಾರಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಉತ್ಸವ ನೆಡೆಯಿತು.

       ಬುಧವಾರ ಮುಂಜಾನೆ 5 ಗಂಟೆಗೆ ಅಗ್ನಿಕೊಂಡ ಪ್ರಾರಂಭವಾಗಿ ಮೊದಲು ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀ ಭದ್ರಕಾಳಿದೇವರನ್ನು ಸಾವಿರಾರು ಭಕ್ತರ ಜಯಘೋಷದೊಂದಿಗೆ ಅಗ್ನಿಕೊಂಡ ಹಾಯಲಾಯಿತು. ಈ ಬಾರಿಯೂ ಸಹಾ ಅಗ್ನಿಕೊಂಡ ಮಹೋತ್ಸವಕ್ಕೆ ತಾಲೂಕು ಆಡಳಿತ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರಿಂದ ಸಾವಿರಾರು ಭಕ್ತರು ಶಾಂತಿಯುತವಾಗಿ ಸರದಿಯಲ್ಲಿ ಕೊಂಡಹಾಯ್ದರು.

        ಸ್ಥಳದಲ್ಲಿ ಅಗ್ನಿಶಾಮಕ ದಳ, ಆಂಬುಲೆನ್ಸ್ ಹಾಗೂ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಿದ್ದು ಯಾವುದೇ ಅಹಿತಕರ ಘಟನೆಗೆ ಆಸ್ಪದವಿಲ್ಲದಂತೆ ಶಾಂತಿಯುತವಾಗಿ ನೆರವೇರಿತು. ಸಿಪಿಐ ಮಹಮದ್ ಸಲೀಂ, ಪಿಎಸ್‍ಐ ರಾಜು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಹರಕೆ ಹೊತ್ತ ಸಾವಿರಾರು ಭಕ್ತರು ಶಾಂತಿಯುತವಾಗಿ ಮುಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟಿದ್ದರು. ನೂರಾರು ತೆಂಗಿನಕಾಯಿ ಒಡೆಯುವ ಮೂಲಕ ಭಕ್ತರು ತಮ್ಮ ಹರಕೆ ತೀರಿಸಿದರು. ಬಂದಂತ ಎಲ್ಲಾ ಭಕ್ತರಿಗೂ ಅನ್ನಧಾನ ಹಾಗೂ ಬೆಳಗಿನ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

        ಈ ಬಾರಿಯೂ ಅಗ್ನಿಕೊಂಡೊತ್ಸವ ಶಾಂತಿಯುತವಾಗಿ ನೆರವೇರಿದ್ದು ಪ್ರತಿ ವರ್ಷ ಹೆಚ್ಚು ಹೆಚ್ಚು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುತ್ತಿದ್ದು ಇದಕ್ಕೆ ಸಹಕರಿಸಿದ ಭಕ್ತಾದಿಗಳಿಗೆ ಹಾಗೂ ಆಡಳಿತ ಮಂಡಳಿಗೆ ಸಮಿತಿವತಿ ಪರವಾಗಿ ಅರ್ಚಕ ಸಿದ್ದಲಿಂಗಸ್ವಾಮಿ ಧನ್ಯವಾದಗಳನ್ನು ತಿಳಿಸಿದರು

         ಈ ಸಂಧರ್ಭದಲ್ಲಿ ಶಾಸಕ ಮಸಾಲಜಯರಾಮ್, ಕನ್ವೀನರ್ ಶಂಕರೇಗೌಡ, ಅರ್ಚಕ ಷಡಾಕ್ಷರಿಸ್ವಾಮಿ, ಟಿ.ಆರ್. ಮಂಜುನಾಥ್, ಪಟ್ಟಣದ ಶ್ರಿ ಬಸವೇಶ್ವರ ಯುವಕ ಸಂಘ, ಸೂಳೇಕೆರೆ ಮತ್ತು ಸೂಳೇಕೆರೆ ಪಾಳ್ಯ ಗ್ರಾಮಸ್ಥರು, ಆಜುಬಾಜು ಗ್ರಾಮಸ್ಥರು ಹಾಗೂ ತುರುವೇಕೆರೆ ಪಟ್ಟಣದ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link