ಕೃಷಿ ತಜ್ಞರು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ನಡೆಸಬೇಕಾದ ಅಗತ್ಯವಿದೆ: ಬಿ ಎಸ್ ಯಡಿಯೂರಪ್ಪ

ಬೆಂಗಳೂರು

    ದೇಶದಲ್ಲಿ ವಾರ್ಷಿಕವಾಗಿ ೫೦ ಸಾವಿರ ಕೋಟಿ ಆಹಾರ ಧಾನ್ಯಗಳ ಬಳಕೆಯಲ್ಲಿ ನಷ್ಟ ಉಂಟಾಗುತ್ತಿದ್ದು, ಇದನ್ನು ಶಾಶ್ವತವಾಗಿ ತಪ್ಪಿಸಲು ಕೃಷಿ ತಜ್ಞರು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ನಡೆಸಬೇಕಾದ ಅಗತ್ಯವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿಪಾದಿಸಿದ್ದಾರೆ.

   ದೇಶದ ಕೃಷಿ ಆಹಾರ ಉತ್ಪಾದನೆ ಸಂಗ್ರಹಣೆ ಬಳಕೆಯಲ್ಲಿ ಶೇ. 4೦ ರಷ್ಟು ಪೋಲಾಗುತ್ತಿದೆ. ಇದರಿಂದ ೨೦ ದಶಲಕ್ಷ ಟನ್ ಆಹಾರ ನಷ್ಟ ಉಂಟಾಗುತ್ತಿದ್ದು, ಇದನ್ನು ತಪ್ಪಿಸಲು ಕೃಷಿ ವಲಯದಲ್ಲಿ ವೈಜ್ಞಾನಿಕ ಅಧ್ಯಯನ ನಡೆಯಬೇಕಿದೆ ಎಂದು ಹೇಳಿದರು.ಎಫ್‌ಕೆಸಿಸಿಐನ ಏ.22 ರಿಂದ 26ರವರೆಗೆ ನಗರದಲ್ಲಿ ಆಯೋಜಿಸಿರುವ ಎಫ್‌ಕೆಸಿಸಿಐ ಆಗ್ರೋ ಫುಡ್ ಟೆಕ್ ಎಕ್ಸ್‌ಪೋ 2020 ಪ್ರದರ್ಶನ ಪೂರ್ವಭಾವಿ ಸಮಾರಂಭದಲ್ಲಿ ಮಾತನಾಡಿದ ಅವರು .

   ವಿಶ್ವದಲ್ಲಿ ಭಾರತ ಹಸಿವಿನ ಸೂಚ್ಯಾಂಕದಲ್ಲಿ ೧೦೦ನೇ ೨ನೇ ಸ್ಥಾನದಲ್ಲಿದೆ. ಒಂದೆಡೆ ಜನ ಹಸಿವಿನಿಂದ ಬಳಲುತ್ತಿದ್ದಾರೆ. ಮತ್ತೊಂದೆಡೆ ಕೃಷಿ ಆಹಾರ ಧಾನ್ಯ ಎಗ್ಗಿಲ್ಲದೆ ಪೋಲಾಗುತ್ತಿದೆ. ಕೃಷಿ ವಲಯ ಲಾಭದಾಯಕವಾಗಿರಬೇಕಾದರೆ ಆಹಾರ ಉತ್ಪಾದನೆ ಪೂರೈಕೆ ಬಳಕೆಯಲ್ಲಿ ಯಾವುದೇ ನಷ್ಟ ಉಂಟಾಗಬಾರದು ಎಂದು ಹೇಳಿದರು.

    ಮನುಷ್ಯ ಬದುಕಲು ನೀರು, ಗಾಳಿ ಹೇಗೆ ಅಗತ್ಯವಿದೆಯೋ ಅದೇ ರೀತಿ ಆಹಾರವೂ ಮುಖ್ಯವಾಗಿದೆ. ಪ್ರದಾನಿ ನರೇಂದ್ರ ಮೋದಿಯವರು ಕೈಗೊಂಡ ಸುಧಾರಣಾ ಕ್ರಮಗಳಿಂದ ಶೇ. 1೦೦ ರಷ್ಟು ವಿದೇಶಿ ಕಂಪನಿಗಳು ಆಹಾರ ಸಂಸ್ಕರಣೆ ಬಗ್ಗೆ ಹೆಚ್ಚು ಒಲವು ತೋರಿದೆ. ಇದರಿಂದ ದೇಶದಲ್ಲಿ ೮.೭ ಮಿಲಿಯನ್ ವಿದೇಶಿ ಬಂಡವಾಳ ಹರಿದು ಬಂದಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

    ವಿದೇಶಿ ಬಂಡವಾಳ ಮುಂದೆ ಮುಖ್ಯವಲ್ಲ. ಜೊತೆಗೆ ತಂತ್ರಜ್ಞಾನವು ಅತಿಮುಖ್ಯವಾಗಿದೆ. ಆಹಾರ ಸಂಸ್ಕರಣಾ ಘಟಕಗಳಿಗೆ ಹೆಚ್ಚು ಒತ್ತು ನೀಡಬೇಕು ರಾಜ್ಯ ಸರ್ಕಾರ ರೈತ ಪರ ಸರ್ಕಾರವಾಗಿದ್ದು, ರೈತರ ಸಮಸ್ಯೆಗಳನ್ನು ಅರಿತುಕೊಂಡಿದೆ. ಇದಕ್ಕೆ ರೈತರ ಆತಂಕಗಳಿಗೆ ಸ್ಪಂದಿಸುತ್ತಿದ್ದು, ಶಾಶ್ವತ ಪರಿಹಾರವನ್ನು ಒದಗಿಸುವ ಮೂಲಕ ರೈತರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಸಹ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದರು.

   ಸದ್ಯದಲ್ಲಿ ಆಹಾರ ಸಂಸ್ಕರಣಾ ಘಟಕಗಳನ್ನು ಉತ್ತೇಜಿಸುವ ಜೊತೆಗೆ ಹೊಸ ತಂತ್ರಜ್ಞಾನಿಗಳಿಗೂ ಸರ್ಕಾರ ಒತ್ತು ನೀಡಿದೆ ೨೦೧೨ರಲ್ಲಿ ೨೬ ಸಾವಿರ ಕೃಷಿ ಭೂಮಿಗೆ ಹನಿನೀರಾವರಿ ಪದ್ಧತಿಯನ್ನು ಒದಗಿಸಲಾಗಿತ್ತು. ರೈತರ ಬದುಕು ಹಸನಾಗಿಸಲು ಏನೇನು ಸಾಧ್ಯವಿದೆಯೋ ಅದನ್ನೆಲ್ಲವನ್ನು ಒದಗಿಸುವಲ್ಲಿ ಸರ್ಕಾರ ಬದ್ಧವಿದೆ ಎಂದರು.

    ಶಿವಮೊಗ್ಗದಲ್ಲಿ ಸಾವಯವ ಕೃಷಿ ಪದ್ಧತಿಗೆ ಹೆಚ್ಚು ಒತ್ತು ನೀಡಲಾಗಿದೆ. ಇದಕ್ಕಾಗಿಯೇ ತಿಂಗಳಿಗೊಮ್ಮೆ ರೈತರನ್ನು ಒಂದೆಡೆ ಸೇರಿಸಿ ಸಾವಯವ ಕೃಷಿ ಪದ್ಧತಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.ಎಫ್‌ಕೆಸಿಸಿಐ ಕೃಷಿ ಆಗ್ರೋ ಫುಡ್ ಟೆಕ್ ಎಕ್ಸ್‌ಪೋ ಆಯೋಜಿಸಿರುವುದಕ್ಕೆ ಪ್ರಶಂಶಿಸಿದ ಮುಖ್ಯಮಂತ್ರಿಗಳು ಸಮಾವೇಶದಲ್ಲಿ ಚರ್ಚೆಯಾಗುವ ಕೃಷಿ ಉತ್ತೇಜಕ ಅಂಶಗಳನ್ನು ಸರ್ಕಾರ ಅಳವಡಿಸಿಕೊಳ್ಳಲಿದೆ ಎಂದು ಹೇಳಿದರು.

     ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ಧನ ಅವರು ಪ್ರಾಸ್ತಾವಿಕ ಭಾಷಣ ಮಾಡಿ, ಎ. 22 ರಿಂದ 26ರವರೆಗೆ ಅರಮನೆಯ ತ್ರಿಪುರ ವಾಸಿನಿ ವಿಧಾನದಲ್ಲಿ ಆಗ್ರೋ ಫುಡ್ ಟೆಕ್ ಎಕ್ಸ್‌ಪೋ ನಡೆಯಲಿದೆ. ಈಗಾಗಲೇ ಇಸ್ರೇಲ್, ನೆದರ್‌ಲ್ಯಾಂಡ್, ಜೆಕ್ ರಿಪಬ್ಲಿಕ್, ಆಸ್ಟ್ರೇಲಿಯಾ ದೇಶಗಳು ಭಾಗವಹಿಸಲು ತಮ್ಮ ಒಪ್ಪಿಗೆ ಸೂಚಿಸಿದೆ.೨೦೦೦ ಪ್ರತಿನಿಧಿಗಳು ೧ ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ೪೫೦ ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ ಎಂದು ಹೇಳಿದರು. ಸಮಾರಂಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಎಫ್‌ಕೆಸಿಸಿಐನ ಹಿರಿಯ ಉಪಾಧ್ಯಕ್ಷ ಪೆರಿಕಲ್ ಎಂ. ಸುಂದರ್, ಸಿ.ಎ. ಐ.ಎಸ್. ಪ್ರಸಾದ್, ಮಾಜಿ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ, ಆಗ್ರೋ ಫುಡ್ ಟೆಕ್‌ನ ಸಮಾವೇಶದ ಅಧ್ಯಕ್ಷ ಬಿ.ವಿ. ರವಿ, ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap