ನವದೆಹಲಿ
ಭಾರತದ ರಾಜಧಾನಿ ದೆಹಲಿಯಲ್ಲೀಗ ವಾಯುಮಾಲಿನ್ಯ ಮಟ್ಟ ಮಿತಿ ಮೀರಿದ್ದು, ವಾತಾವರಣ ಪೂರ್ಣ ಹದಗೆಟ್ಟಿದೆ ಪರಿಣಾಮ ಉಸಿರಾಟವೂ ಕಷ್ಟವಾಗುತ್ತಿದೆ, ಇದೆ 5ರವರೆಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಏರ್ ಕ್ವಾಲಿಟಿ ಅಂಡ್ ವೆದರ್ ಪೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (ಎಸ್‌ಎಎಫ್‌ಆರ್) ಸೆಂಟರ್ ಬಿಡುಗಡೆ ಮಾಡಿರುವ ಪ್ರಕಾರ ಪ್ರಕಾರ ಲ್ಲಿ ಉಸಿರಾಟಕ್ಕೂತೊಂದರೆ ಉಂಟಾಗುತ್ತಿದೆ . ಅಲ್ಲದೇ ವಿಪರೀತ ವಾಯುಮಾಲಿನ್ಯದಿಂದ ಮುಂಜಾನೆಯಿAದ ಲೆ ಬೆಳಿಗ್ಗೆಯೇ ದಟ್ಟವಾದ ಹೊಗೆ ಕಾಣಿಸಿಕೊಂಡು ಕತ್ತಲೂ ಆವರಿಸಿದೆ. ಇದರ ಪರಿಣಾಮ ದೆಹಲಿಗೆ ಬರಬೇಕಿದ್ದ 37 ವಿಮಾನಗಳ ಮಾರ್ಗ ಗಳನ್ನು ಬದಲಿಸಲಾಗಿದೆ.ನಗರದಲ್ಲಿ ಬೆಳಿಗ್ಗೆಯಿಂದಲೂ ಭಾರೀ ಮಳೆಯಾಗುತ್ತಿದೆ. ಇತ್ತ ವಿಪರೀತ ವಾಯುಮಾಲಿನ್ಯಕ್ಕೆ ದಟ್ಟ ಹೊಗೆಯೂ ಆವರಿಸಿಕೊಂಡಿದೆ. ಹಾಗಾಗಿಯೇ ವಿಮಾನಗಳು ಇಳಿಯಲು ತೀರಾ ಸಮಸ್ಯೆಯಾಗುತ್ತಿದೆ ಎಂದು ದೆಹಲಿ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ನಗರಾದ್ಯಂತ ಕಲುಷಿತ ಗಾಳಿ ತುಂಬಿಕೊAಡಿದ್ದು, ಉಸಿರಾಟಕ್ಕೆ ಅತೀವ ತೊಂದರೆಯಾಗಿದೆ. ನಾವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಬೇರೆ ಏನಾದರೂ ಪರಿಹಾರ ಕಂಡು ಹಿಡಿಯಬೇಕೆಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ. ಜೊತೆಗೆ ಇದೆ 5ರವರೆಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
