ರಾಜ್ಯ ಸರ್ಕಾರ ವಾಯು ಗುಣಮಟ್ಟ ನಿಗಾ ಸಮಿತಿ ರಚನೆ

ಬೆಂಗಳೂರು

        ರಾಜ್ಯದ 4 ನಗರಗಳಲ್ಲಿ ಸೂಚಿತ ನಿಯಮಾವಳಿಗಳಡಿ ವಾಯು ಗುಣಮಟ್ಟ ಸುಧಾರಿಸಲು ಕಾರ್ಯ ಯೋಜನೆ ರೂಪಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಾಯು ಗುಣಮಟ್ಟ ನಿಗಾ ಸಮಿತಿಯನ್ನು ರಚಿಸಿದೆ.

        2011ರಿಂದ 2015ರವರೆಗೆ ಅಧ್ಯಯನವೊಂದನ್ನು ನಡೆಸಿದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯದ ಬೆಂಗಳೂರು, ದಾವಣಗೆರೆ, ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ವಾಯು ಗುಣಮಟ್ಟ ಸರಿಯಿಲ್ಲ ಎಂಬ ವರದಿಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯ ಯೋಜನೆ ರೂಪಿಸಲು 2 ತಿಂಗಳಲ್ಲಿ ವಾಯು ಗುಣಮಟ್ಟ ನಿಗಾ ಸಮಿತಿ ರಚಿಸಿ, ಅದನ್ನು ಆರು ತಿಂಗಳೊಳಗೆ ಅನುಷ್ಠಾನಗೊಳಿಸುವಂತೆ ನ್ಯಾಯಾಧೀಕರಣ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.ಪರಿಸರ ಮತ್ತು ಜೀವವಿಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಸಮಿತಿ ಅಧ್ಯಕ್ಷರಾಗಿರುತ್ತಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link