ಬೆಂಗಳೂರು
ನಾಲ್ಕು ಪಥದ ಮುಖ್ಯರಸ್ತೆಯನ್ನು ಹತ್ತು ಪಥಗಳಾಗಿ ವಿಸ್ತರಣೆ ಮಾಡುವ ಕಾಮಗಾರಿ ಅರಂಭಿಸುವ ಹಿನ್ನಲೆಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಮುಖ ರಸ್ತೆ ಜೂನ್ 10 ರಿಂದ ಬಂದ್ ಆಗಲಿದ್ದು ವಾಹನ ಸಂಚಾರ ಸ್ಥಗಿತಗೊಳ್ಳಲಿದೆ.
ವಿಮಾನ ನಿಲ್ದಾಣದ ನಾಲ್ಕು ಪಥದ ಮುಖ್ಯರಸ್ತೆಯನ್ನು ಹತ್ತು ಪಥಗಳಾಗಿ ವಿಸ್ತರಣೆ ಕಾಮಗಾರಿಗಾಗಿ ಮುಖ್ಯ ಸಂಪರ್ಕ ರಸ್ತೆಯನ್ನು ಬಂದ್ ಮಾಡಲಾಗುತ್ತಿದೆ. ಇದಲ್ಲದೆ ಕಾರ್ಗೋ ಟರ್ಮಿನಲ್ ಕಡೆಗೆ ಸಾಗುವ ಮತ್ತೊಂದು ರಸ್ತೆಯನ್ನು ಇದೇ ವರ್ಷದಲ್ಲಿ ನಾಲ್ಕು ಪಥದ ರಸ್ತೆಯಾಗಿ ವಿಸ್ತರಣೆ ಮಾಡಲು ಸರ್ಕಾರ ಮುಂದಾಗಿದೆ.
ನಗರದಿಂದ ವಿಮಾನ ನಿಲ್ದಾಣ ಪ್ರವೇಶಿಸುವ ವಾಹನಗಳು ಟ್ರಂಪೇಂಟ್ ಇಂಟರ್ ಚೇಂಜ್ ನಂತರ ಮೊದಲ ವೃತ್ತದಲ್ಲಿ ಬಲಕ್ಕೆ ತಿರುಗಿ ಎಸ್‍ಎಆರ್ ಪ್ರವೇಶದ ಮೂಲಕ ಎರಡನೇ ಟರ್ಮಿನಲ್ ಕಡೆಗೆ ತೆರಳಿ ನೂತನವಾಗಿ ನಿರ್ಮಾಣ ಆಗಿರುವ ಆರು ಪಥದ ರಸ್ತೆ ಮೂಲಕ ವಿಮಾನ ನಿಲ್ದಾಣ ಪ್ರವೇಶಿಸಬಹುದಾಗಿದೆ.ಜೂನ್ 10 ರಿಂದ ನೂತನ ಮಾರ್ಗದ ಬದಲಾವಣೆಗಳು ಜಾರಿಗೆ ಬರಲಿವೆ. 2021ಕ್ಕೆ 10 ಪಥದ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ