ಬೆಂಗಳೂರು
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಪ್ರಮುಖ ಕಂಪನಿಗಳಾದ ಏರ್ ಟೆಲ್ , ವೊಡಾಫೋನ್ ಕರೆ, ಡೇಟಾ ದರಗಳನ್ನು ಏರಿಕೆ ಮಾಡುವುದಾಗಿ ಘೋಷಿಸಿವೆ.
ಪರಿಷ್ಕೃತ ದರಗಳು ಡಿಸೆಂಬರ್ 3ರಿಂದ ಜಾರಿಗೆ ಬರಲಿದ್ದು. ಏರ್ಟೆಲ್ ದರದಲ್ಲಿ ಶೇ 42ರಷ್ಟನ್ನು ಹಾಗೂ ವೋಡಾ ಫೋನ್ ಐಡಿಯಾ ದರದಲ್ಲಿ ಶೇ 50ರಷ್ಟು ದರ ಏರಿಕೆ ಮಾಡಲಿವೆ ಎಂದು ತಿಳಿಸಿವೆ. ಏರ್ಟೆಲ್, ವೊಡಾಫೋನ್ ಐಡಿಯಾ ಡೇಟಾ ಕರೆ ದರಗಳನ್ನು ಪರಿಷ್ಕರಿಸಲಾಗಿದ್ದು, ಅದೇ ರೀತಿ ಜಿಯೋ ಕೂಡ ದರ ಏರಿಕೆ ಪ್ರಕಟಿಸಲಿದೆ ಎಂದು ಹೇಳಲಾಗಿದೆ.
ವೋಡಾಫೋನ್ ಐಡಿಯಾ ಲಿಮಿಟೆಡ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಹೊರ ಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸುತ್ತಿದೆ. ಪ್ರೀಪೇಯ್ಡ್ ಸೇವೆಗಳು ಎರಡು ದಿನ, 28 ದಿನ, 84 ದಿನ, 365 ದಿನದ ವ್ಯಾಲಿಡಿಟಿಯೊಂದಿಗೆ ಹೊಸ ಪ್ಲಾನ್ ಪರಿಚಯಿಸಲಾಗಿದೆ. ಹಳೆಯ ಪ್ಲಾನ್ ಗಳಿಗಿಂತ ಹೊಸ ಯೋಜನೆಗಳು ಶೇ 50ರಷ್ಟು ದುಬಾರಿಯಾಗಲಿವೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ