ಚಿಕ್ಕನಾಯಕನಹಳ್ಳಿ
ನಿರುದ್ಯೋಗಿಗಳಿಗೆ ವೃತ್ತಿಪರ ಕೌಶಲ್ಯವನ್ನು ರೂಢಿಸಿಕೊಳ್ಳಲು ತರಬೇತಿ ನೀಡಲೆಂದು ಕಟ್ಟಿದ ಸಾಮಥ್ರ್ಯ ಸೌಧ ಪಾಳು ಬಿದ್ದು ಹಾದಿಬೀದಿ ಜನರ ಅಕ್ರಮ ಚಟುವಟಿಕೆಗಳ ಕೇಂದ್ರವಾಗಿದೆ. ಕಟ್ಟಡದಲ್ಲಿನ ವಸ್ತುಗಳು ಹಾಳಾಗುತ್ತಿವೆ, ಕಳೆದ ಆರು ವರುಷಗಳಿಂದ ಧೂಳು ತಿನ್ನುತ್ತಿದೆ.
ಸಾರ್ಮಥ್ಯ ಸೌಧ ತಾಲ್ಲೂಕು ಪಂಚಾಯಿತಿ ವತಿಯಿಂದ 25 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಿ, 2013ರ ಫೆಬ್ರವರಿ ತಿಂಗಳಿನಲ್ಲಿ ಉದ್ಘಾಟನೆಯನ್ನು ಮಾಡಲಾಗಿತ್ತು. ಅಂದಿನಿಂದ ಈ ಕಟ್ಟಡ ಪಾಳು ಬಿದ್ದಿದೆ, ಕಟ್ಟಡ ನಿಮಾರ್ಣವಾಗಿ 6 ವರ್ಷ 5 ತಿಂಗಳು ಕಳೆದರೂ ಇದುವರೆಗೂ ಯಾವ ಇಲಾಖೆಯೂ ಇದನ್ನು ಬಳಸಿಕೊಂಡಿಲ್ಲ. ಯಾವುದೆ ಸಭೆ, ಸಮಾರಂಭಗಳಿಗೆ ಕಟ್ಟಡ ಬಳಕೆಯಾಗುತ್ತಿಲ್ಲ.
ಕಟ್ಟಡದಲ್ಲಿ ಶೌಚಾಲಯ ಸೇರಿದಂತೆ ವ್ಯವಸ್ಥಿತವಾದ ಕೊಠಡಿಗಳಿವೆ.
ಆದರೆ ಯಾರೂ ಉಪಯೋಗಿಸದೆ ಕಿಟಕಿ ಗಾಜುಗಳು ಪುಡಿಯಾಗಿವೆ, ಸರಿಯಾದ ನಿರ್ವಹಣೆಯಿಲ್ಲದೆ ಜಾಗ ಕೊಳಚೆಯಾಗಿದೆ. ಸಾಮಥ್ರ್ಯ ಸೌಧ ಕಾಂಪೌಂಡ್ ಸುತ್ತಮುತ್ತ ಗಿಡಗಂಟೆ ಬೆಳೆದು ಅಲ್ಲಿನ ಸ್ಥಳ ಅನೈರ್ಮಲ್ಯದ ಸ್ಥಳವಾಗಿ ಮಾರ್ಪಾಡಾಗುತ್ತಿದೆ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಸದಸ್ಯರು ಸಾಮಥ್ರ್ಯ ಸೌಧ ಉಪಯೋಗಕ್ಕೆ ಬರುವಂತೆ ಒತ್ತಾಯ ಮಾಡಿದ್ದರು.