ಅಕ್ರಮ ಗಣಿಗಾರಿಕೆಯನ್ನು ಬಯಲಿಗೆಳೆದ ತಹಶೀಲ್ದಾರ್ ತಿಮ್ಮಪ್ಪ ಉಜ್ಜಿನಿ

ಜಗಳೂರು :

      ತಾಲ್ಲೂಕಿನ ಹಾಲೇಕಲ್ಲು ಗ್ರಾಮದ ಸಮೀಪ ನೂರಾರೂ ಕೋಟಿ ಮೌಲ್ಯದ ಆಕ್ರಮ ಮ್ಯಾಂಗನೀಸ್, ಅಲ್ಯೂಮಿನಿಯಂ, ಕಾಫರ್ ಮತ್ತಿತರರ ಅಮೂಲ್ಯ ಅಧಿರನ್ನು ಅಕ್ರಮವಾಗಿ ತೆಗೆಯುತ್ತಿದ್ದ ಗಣಿಗಾರಿಕೆಯನ್ನು ಪತೆಹಚ್ಚುವಲ್ಲಿ ಇಲ್ಲಿನ ತಹಶೀಲ್ದಾರ್ ತಿಮ್ಮಪ್ಪ ಉಜ್ಜಿನಿ ಯಶಸ್ವಿಯಾಗಿದ್ದಾರೆ.

         ತಾಲೂಕಿನ ಹಾಲೇಕಲ್ಲು ಗ್ರಾಮದ ಸಮೀಪ ಹಲವಾರು ವರ್ಷಗಳಿಂದ ಸರಕಾರದಿಂದ ಯಾವುದೇ ಅನುಮತಿ ಪಡೆಯದೇ ಆಕ್ರಮಗಣಿಗಾರಿಕೆ ನಡೆದುಕೊಂಡು ಬಂದಿದೆ ಎಂಬ ಹಾಲೇಕಲ್ ಗ್ರಾಮಸ್ಥರು ದೂರಿನ ಮೇರೆಗೆ ತಹಶಿಲ್ದಾರ್ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಈ ಅಕ್ರಮ ಬಯಲಾಗಿದೆ.

        ಗ್ರಾಮದ ಸರ್ವೆ ನಂಬರ್ 74 ರಲ್ಲಿ ಸರ್ಕಾರದ ಗೋಮಾಳ ಜಮಿನಿನಲ್ಲಿ ಕಂದಾಯ ಇಲಾಖೆ , ಭೂ ಮತ್ತು ಗಣಿ ವಿಜ್ಞಾನ ಇಲಾಖೆ , ಜಿಲ್ಲಾಧಿಕಾರಿಗಳ ಇಲಾಖೆ ವತಿಯಿಂದ ಯಾವುದೇ ಅನುಮತಿ ಪಡೆಯದೆ ‘‘ಭಾರತ್ ಫರಿಕ್ ಕೋ’’ ಬೆಂಗಳೂರು ಎಂಬ ಹೆಸರಿನಲ್ಲಿ ಗಣಿಗಾರಿಕರ ನೆಡೆಸುತಿತ್ತು ಎನ್ನಲಾಗಿದೆ.

        ಸುಮಾರು 50ರಿಂದ 60ಎಕರೆ ಸರಕಾರಿ ಜನಮಿನಿನಲ್ಲಿ 200 ಅಡಿ ಅಗಲ ಮತ್ತು 200 ಅಡಿ ಅಳದವರೆಗೂ ಭೂಮಿಯನ್ನು ಅಗೆದಿದ್ದು ಅಗೆದ ಮಣ್ಣನ್ನು ಸರ್ವೆ ನಂಬರ್ 121 ಬಸವರಾಜಪ್ಪ ಜಯ್ಯಮ್ಮ ಎಂಬುವವರಿಗೆ ಸೇರಿದ ಪಟ್ಟದ ಜಮೀನಿನಲ್ಲಿ ತ್ಯಾಜ್ಯ ಮಣ್ಣನ್ನು ಗುಡ್ಡದ ರೀತಿಯಲ್ಲಿ ಸುರಿದಿದ್ದಾರೆ. ಇದರಿಂದ ರೈತರು ಊಳಿಮೆ ಮಾಡದೇ ಇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ತಹಶಿಲ್ದಾರ್ ಸ್ಥಳಕ್ಕೆ ಹೋದ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ಬರದಿಂದ ನಡೆಯುತ್ತಿತ್ತು. ಜೆಸಿಪಿಯಿಂದ ಲಾರಿಗಳಿಗೆ ಮಣ್ಣನ್ನು ತುಂಬಿ ಜಮೀನು ಜಾಗದಲ್ಲಿ ಸಂಗ್ರಹ ಮಾಡುತ್ತಿದ್ದರು.

         ತಹಶಿಲ್ದಾರ್ ತಿಮ್ಮಪ್ಪ ಉಜ್ಜಿನಿ ಪತ್ರಿಕೆಯೊಂದಿಗೆ ಮಾತನಾಡಿ ಮ್ಯಾಂಗನೀಸ್, ಅಲ್ಯೂಮಿನಿಯಂ, ಕಾಫರ್ ನಂತ ಮೂರು ರೀತಿಯ ಬೆಲೆ ಬಾಳುವ ಅಧಿರು ದೊರೆಯುತ್ತಿದ್ದು ಇದರ ಮೌಲ್ಯ ಸಮಾರು ನೂರಾರು ಕೋಟಿ ದಾಟಲಿದೆ ಎಂದು ತಿಳಿಸಿದರು.

         ಬಳ್ಳಾರಿ ಗಣಿಗಾರಿಕೆಯನ್ನೆ ಮೀರಿಸುತ್ತಿದೆ, ಇಲ್ಲಿ ಕೆಲಸ ಮಾಡುವವರು ಹೇಳುವಂತೆ ಸರ್ವೆ ನಂಬರ್ 74 ರಲ್ಲಿ ಯಾವುದೆ ಅನುಮತಿ ಪಡೆದಿಲ್ಲ. ಇವರ ಹತ್ತಿರ ಯಾವುದೇ ರೀತಿಯ ಪೂರಕ ದಾಖಲೆಗಳಿಲ್ಲ ದಾಖಲೆ ನೀಡುವಂತೆ 4 ದಿನ ಕಾಲವಕಾಶ ನಿಡಿದ್ದೇನೆ ದಾಖಲೆಗಳು ನೀಡದೆ ಇದ್ದಾರೆ ಗಣಿಯನ್ನು ಸರಕಾರದ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗುವುದು ಎಂದು ತಹಶಿಲ್ದಾರ್ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link