ಪಾವಗಡ
ಏಷ್ಯಾಖಂಡದಲ್ಲಿಯೇ ಅತಿ ದೊಡ್ಡ ಸೊಲಾರ್ ಪಾರ್ಕ ಪಾವಗಡ ತಾಲ್ಲೂಕಿನ ತಿರುಮಣಿ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವುದು ಸರಿಯಷ್ಟೆ ಆದರೇ ಇಲ್ಲಿ ನಿರ್ಮಾಣ ಮಾಡುತ್ತಿರುವ ಸೋಲಾರ್ ಕಂಪನಿಗಳು ರೈತರನ್ನು ಶೋಷಣೆಗೊಳಪಡಿಸಿ,ದಬ್ಬಾಳಿಕೆ ನಡೆಸುತ್ತಿರುವುದು ಅಗಾಗ್ಗೆ ಕೇಳಿ ಬಂದಿದ್ದು, ನ್ಯಾಯಾಲಯದಲ್ಲಿ ದಾವೇ ಇರುವ ಜಮೀನಲ್ಲಿ ಪೋಟೀಸ್ ಎಂಬ ಸೋಲಾರ್ ನಿರ್ಮಾಣದ ಕಂಪನಿ ಪೋಲೀಸರ ಬೆಂಬಲದಿಂದ ಜಮೀನಿಗೆ ಬೇಲಿ ಹಾಕಿರುವ ಘಟನೆ ಬುಧವಾರ ವಳ್ಳೂರು ಗ್ರಾಮದಲ್ಲಿ ಜರುಗಿದೆ.
ವಳ್ಳೂರು ಗ್ರಾಮದ ಸರ್ವೇ ನಂ 207 ರಲ್ಲಿ 15 ಎಕರೇ ಜಮೀನು ದಿವಂಗತ ಪಾಳ್ಳೂರುರಾಮಯ್ಯ ಎನ್ನುವರು ಗ್ರಾಮದ ಜೆ.ಡಿ.ಎಸ್.ಮುಖಂಡ ಚೆನ್ನಕೇಶವರೆಡ್ಡಿ ಎನ್ನುವರಿಗೆ ಮಾರಾಟದ ಆಗ್ರಿಮೆಂಟ್ ಮಾಡಿದ್ದು, ರಾಮಯ್ಯ ಮಕ್ಕಳಾದ ರವಿ, ಮತ್ತು ವೆಂಕಟಸ್ವಾಮಿ ಎನ್ನುವರು ಸಹಿ ಮಾಡಿದ್ದಾರೆ, ಇವರ ಹೆಸರಿಗೆ ಖಾತೆ ಮಾಡಿಸಿರಲಿಲ್ಲ, ಆದರೇ ಇದೇ ಜಮೀನನ್ನು 2013 ರಲ್ಲಿ ಆಂಧ್ರದ ರಾಮಪ್ಪ ಎನ್ನುವರಿಗೆ 2 ನೇ ಬಾರಿಗೆ ಮಾರಾಟ ಮಾಡಿದ್ದು,
ಇವರ ಹೆಸರಿಗೂ ಖಾತೆ ಮಾಡಿಸಿಕೊಟ್ಟಿಲ್ಲ ಹೀಗಿರುವಾಗ ಪಾಳ್ಳೂರುರಾಮಯ್ಯ ಪುತ್ರ ವೆಂಕಟಸ್ವಾಮಿ ಈ 15 ಎಕರೆ ಜಮೀನನ್ನು ಸೋಲಾರ್ ಪಾರ್ಕ ನಿರ್ಮಾಣಕ್ಕೆ ಲೀಸ್‍ಗೆ ನೀಡಿದ್ದು, ಇದನ್ನು ಪ್ರಶ್ನಿಸಿ ಚೆನ್ನಕೇಶವರೆಡ್ಡಿ, ಮತ್ತು ರಾಮಪ್ಪ ಪಾವಗಡದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನ್ಯಾಯಾಲಯದಿಂದ ಪ್ರಕರಣ ಇತ್ಯರ್ಥವಾಗುವವರೆಗೂ ಜಮೀನಿಗೆ ಯಾರು ಪ್ರವೇಶಿಸುವಂತಿಲ್ಲ ಎಂಬುದಾಗಿ ನ್ಯಾಯಾಲಯದ ಆದೇಶ ಇದ್ದರೂ ಸಹ ಬುದುವಾರ ಫೋಟೀಸ್ ಕಂಪನಿಯವರು ಸುಮಾರು 150 ಪೋಲೀಸರನ್ನು ಕರೆಯಿಸಿ ರೈತ ಚಿನ್ನರಾಮಪ್ಪನ ಮಕ್ಕಳಾದ ಕೃಷ್ಣಪ್ಪ ಮತ್ತು ಪ್ರಭಾಕರ್‍ರವರನ್ನು ಜಮೀನಿಂದ ಹೊರದಬ್ಬಿ ಬೇಲಿ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಯನ್ನು ಖಂಡಿಸಿ ಜೆ.ಡಿ.ಎಸ್.ಮುಖಂಡ ಚೆನ್ನಕೇಶವರೆಡ್ಡಿ ಮತ್ತು ಬಾಧಿತ ರಾಮಪ್ಪ ಜಮೀನಿನ ಬಳಿ ಗುರುವಾರ ಹಾಜರಾಗಿ ಬೇಲಿ ಹಾಕಿರುವುದನ್ನು ಖಂಡಿಸಿದ್ದಾರೆ.
ಜೆ.ಡಿ.ಎಸ್. ಮುಖಂಡ ಚೆನ್ನಕೇಶವರೆಡ್ಡಿ ಈ ಬಗ್ಗೆ ಪತ್ರೀಕಾಗೋಷ್ಠಿ ನಡೆಸಿ, ಈ ಪ್ರಕರಣಕ್ಕೆ ಸಂಬಂದಿಸಿದಂತೆ ನ್ಯಾಯಾಲಯ ಅದೇಶವನ್ನು ಪಾಲಿಸಬೇಕು ಎಂದು ಡಿ.ಜಿ.ಪಿ.ರವರು ಪೋಲೀಸರಿಗೆ ಪತ್ರ ಬರೆದಿದ್ದರೂ ಸಹ ಸಚಿವ ವೆಂಕಟರವಣಪ್ಪ ಕುಮ್ಮಕ್ಕಿನಿಂದ ರವಿ, ಮತ್ತು ವೆಂಕಟಸ್ವಾಮಿ, ಸುಮಾರು 150 ಪೋಲೀಸರನ್ನು ಕರೆತಂದು ಜಮೀನಿಗೆ ಬುದುವಾರ ಬೇಲಿಹಾಕಿಸಿದ್ದಾರೆ,ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ತಿರ್ಮಾನವಾಗುವವರೆಗೂ ಜಮೀನಲ್ಲಿ ಯಾವುದೇ ಕೆಲಸ ಮಾಡಬಾರದು ಎಂಬ ಆದೇಶ ಇದ್ದರೂ ಸಹ,ನ್ಯಾಯಾಲಯದ ಆದೇಶವನ್ನು ದಿಕ್ಕರಿಸಿ ಬೇಲಿ ಹಾಕಿರುವುದರಿಂದ ಬಡ ರೈತನಿಗೆ ಅನ್ಯಾಯವಾಗಿದೆ,ರಾಜ್ಯದ ಮುಖ್ಯಮಂತ್ರಿ ಕುಮಾರಸಾಮಿ ಗಮನಹರಸಿ ಅನ್ಯಾಯವಾಗಿರುವ ರೈತನಿಗೆ ನ್ಯಾಯವದಗಿಸಿಕೊಡಬೇಕು, ಇಲ್ಲವಾದ ಪಕ್ಷದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲಾಗುವುದು,ಮುಂದೆ ಏನಾದರು ಕಾನೂನು ಸುವ್ಯವಸ್ಥೆಗೆ ದಕ್ಕೆ ಆದರೆ ಅದಕ್ಕೆ ಪಾವಗಡ ತಾಲ್ಲೂಕಿನ ಪೋಲೀಸರೆ ಕಾರಣ,
ಈ ಜಮೀನಲ್ಲಿ ಸೋಲಾರ್ ಕಾಮಗಾರಿ ಮುಂದುವರೆದರೆ ಸುತ್ತಮುತ್ತಲಿನ ನಾಲ್ಕಾರು ಗ್ರಾಮಸ್ಥರು ಫೋಟೀಸ್ ಕಂಪನಿ ವಿರುದ್ದ ದಂಗೆ ಎಳುತ್ತಾರೆ, ಕೂಡಲೆ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳು ಮದ್ಯ ಪ್ರವೇಶಿಸಿ ಈ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಒತ್ತಾಯಿಸಿದ್ದು,ಇಲ್ಲವಾದ ಪಕ್ಷದಲ್ಲಿ ಅನಿರ್ದಿಷ್ಠಾವದಿ ಧರಣಿ ಮತ್ತು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರವನ್ನು ಹೆಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಬಾಧಿತ ರೈತ ರಾಮಪ್ಪ, ಕೃಷ್ಣಪ್ಪ, ರೈತರಾದ ಚಂದ್ರಮೋಹನ್,ವೆಂಕಟೇಶ್, ಜಗನ್ನಾಥ್,ನರಸಿಂಹ, ರಾಮರೆಡ್ಡಿ ಮತ್ತಿತರರು ಹಾಜರಿದ್ದರು.
ಸೋಲಾರ್ ವ್ಯಾಪ್ತಿಯ 5-6 ಗ್ರಾಮದ ರೈತರು ಸೋಲಾರ್ ಕಂಪನಿಯವರ ದೌರ್ಜನ್ಯದಿಂದ ಬೇಸತ್ತಿದ್ದು,ಕೆಲ ರೈತರ ಜಮೀನುಗಳು ನ್ಯಾಯಲದಲ್ಲಿ ಇದ್ದರು ಸಹ ಲೆಕ್ಕಸಿದೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ. ಸೋಲಾರ್ ಕಂಪನಿಗಳಿಗೆ ಮಾತ್ರ ಇಲ್ಲಿನ ಪೋಲೀಸರು ಕೆಲಸ ಮಾಡುತ್ತಿದ್ದಾರೋ ಗೊತ್ತಿಲ್ಲ,ರೈತರಿಗೆ ಏನಾದರು ಅನ್ಯಾಯವಾಗಲಿ ರೈತರ ಪರ ನ್ಯಾಯ ದೊರಿಕಿಸುವ ಅಧಿಕಾರಿಗಳು ದೌರ್ಜನ್ಯವಾಗಿ ರೈತರನ್ನು ಲೆಕ್ಕಿಸದೆ ಕನೂನು ವಿರುದ್ದವಾಗಿ ಕೆಲಸ ನಿರ್ವಹಿಸುತ್ತಿದ್ದು,ತುಮಕೂರು ಜಿಲ್ಲಾ ವರೀಷ್ಠಾಧಿಕಾರಿಗಳು ರೈತರ ಮೇಲೆ ಎಸಗಿದ ದೌರ್ಜನ್ಯ ಬಗ್ಗೆ ಚರ್ಚೆ ನಡೆಸಿ ಬಡರೈತರಿಗೆ ನ್ಯಾಯ ಕೊಡಿಸಲು ಚನ್ನಕೇಶವರೆಡ್ಡಿ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







