ಅಕ್ಷರದಾಸೋಹ ಅಡುಗೆ ಕಾರ್ಯಕರ್ತೆಯರ ತರಬೇತಿ ಕಾರ್ಯಾಗಾರ

ಹಿರಿಯೂರು:

         ಜೀವನದಲ್ಲಿ ಮನುಷ್ಯನಿಗೆ  ಅನ್ನ ಬಹಳ ಮುಖ್ಯ. ಒಂದು ಕಡೆ ಗುರುಗಳು ಮಕ್ಕಳಿಗೆ  ನೀಡಿದರೆ ಮತ್ತೊಂದೆಡೆ ತಾಯಿಸ್ಥಾನದಲ್ಲಿ ನಿಂತು ಅಡುಗೆ ಕಾರ್ಯಕರ್ತೆಯರು ಮಕ್ಕಳಿಗೆ ಬಿಸಿಯೂಟ ನೀಡುವುದು ಪುಣ್ಯದ ಕೆಲಸ. ಅಂತಹ ಪುಣ್ಯದ ಕೆಲಸವನ್ನು ಅಡುಗೆ ಕಾರ್ಯಕರ್ತಯರು ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂಬುದಾಗಿ ಕ್ಷೇತ್ರದ ಶಾಸಕಿ ರ್ಪೂಣಿಮಾಶ್ರೀನಿವಾಸ್ ಹೇಳಿದರು.
ನಗರದ ಗುರುಭವನದಲ್ಲಿ ಅಕ್ಷರದಾಸೋಹ ಯೋಜನೆಯಡಿಯಲಿ ತಾಲೂಕಿನ ಬಿಸಿಯೂಟ ಅಡಿಗೆ ಕಾರ್ಯರ್ತೆಯರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಕಾರ್ಯಕರ್ತೆಯರು ಇಲಾಖೆ ಹಾಗೂ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಸ್ವಚ್ಛತೆ, ಗುಣಮಟ್ಟದ ಆಹಾರಕ್ಕೆ ಆದ್ಯತೆ ನೀಡಬೇಕು .ಪ್ರತಿ ಶಾಲೆಯನ್ನು ಒಂದು ಕುಟುಂಬವೆಂದು ಭಾವಿಸಿ ಶುದ್ದವಾದ ಆಹಾರ ನೀಡಬೇಕು ಎಂದರು.

        ಬಿಸಿಯೂಟ ಕಾರ್ಯಕರ್ತೆಯರು ಕಾಯಕದ ಜೊತೆಯಲ್ಲಿ ಸಮಾಜಸೇವೆ ಮಾಡುತ್ತಿದ್ದಾರೆ. ನಿಮ್ಮ ವೇತನ ಪರಿಷ್ಕರಣೆ ಕುರಿತು ವಿಧಾನಸಭೆಯಲ್ಲಿ ಸಂಬಂಧಪಟ್ಟ ಇಲಾಖೆ ಸಚಿವರ ಗಮನ ಸೆಳೆಯಲಾಗುತ್ತದೆ ಎಂದು ಭರವಸೆ ನೀಡಿದರು.

         ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ.ನಟರಾಜ್, ಅಕ್ಷರದಾಸೋಹ ಸಹಾಯಕ ನಿರ್ದೇಶಕ ನಾಗರಾಜಾಚಾರಿ, ಸರ್ಕಾರಿ ಪ.ಪೂ ಕಾಲೇಜಿನ ಉಪಪ್ರಾಂಶುಪಾಲಕ ರಾಮಚಂದ್ರಪ್ಪ, ಸಿಆರ್‍ಪಿಗಳು ಇಸಿಒಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap