ಲೋಕಸಭಾ ಚುನಾವಣೆ : ಮೈತ್ರಿ ಸರ್ಕಾರಕ್ಕೆ 12-14 ಸ್ತಾನ

ಬೆಂಗಳೂರು

        ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ನಡೆಯುವ ಚುನಾವಣೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಪರಿಸ್ಥಿತಿ ಸುಧಾರಿಸಿಕೊಂಡಿದ್ದು 12 ರಿಂದ 14 ಸೀಟುಗಳನ್ನು ಗೆಲ್ಲುವ ಲಕ್ಷಣಗಳು ಕಾಣುತ್ತಿವೆಎಂದು ವಿ.ಎಸ್.ಎಸ್.ವೋಟರ್ಸ್ ಸಂಸ್ಥೆ ಹೇಳಿದೆ.

        ಕಳೆದ ವಾರ ನೀಡಿದ್ದ ವರದಿಯಲ್ಲಿ ಬಿಜೆಪಿಯ ಪರಿಸ್ಥಿತಿ ಸಧೃಢ ಸ್ಥಿತಿಯಲ್ಲಿದೆ ಎಂದು ವರದಿ ನೀಡಿದ ವಿ.ಎಸ್.ಎಸ್. ವೋಟರ್ಸ್ ಸಂಸ್ಥೆ ದಿನಕಳೆದಂತೆ ಮೈತ್ರಿಕೂಟದಲ್ಲಿನ ಬಿಕ್ಕಟ್ಟುಉಪಶಮನವಾಗುತ್ತಿದ್ದುಇದರ ಪರಿಣಾಮವಾಗಿ ಕಳೆದೊಂದು ವಾರದಲ್ಲಿ ಅದು ಗೆಲ್ಲುವ ಸ್ಥಾನಗಳು ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ ಎಂದಿವೆ.

         ಮೈತ್ರಿಕೂಟದಲ್ಲಿನ ಬಿಕ್ಕಟ್ಟು ಬಿಗಡಾಯಿಸಿದ್ದರ ಹಿನ್ನೆಲೆಯಲ್ಲಿ ಕಳೆದ ವಾರದ ಪರಿಸ್ಥಿತಿ ಬಿಜೆಪಿಗೆ ಹೆಚ್ಚು ಅನುಕೂಲಕರವೆಂಬಂತೆಕಂಡು ಬರುತ್ತಿತ್ತಾದರೂ ಇದೀಗ ಉಭಯ ಪಕ್ಷಗಳಲ್ಲಿ ವೈಮನಸ್ಯದ ವಾತಾವರಣಕಡಿಮೆಯಾಗಿದೆಎಂದುಅದು ಹೇಳಿದೆ.

        ರಾಜಧಾನಿ ಬೆಂಗಳೂರಿನ ಮೂರೂ ಕ್ಷೇತ್ರಗಳಲ್ಲಿ ಈ ಹಿಂದೆ ಬಿಜೆಪಿಯ ಗೆಲುವು ನಿಚ್ಚಳವೆಂಬಂತೆ ಭಾಸವಾಗುತ್ತಿತ್ತಾದರೂ ಇದೀಗ ಮೂರು ಕ್ಷೇತ್ರಗಳ ಪೈಕಿ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣದಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿಕೊಂಡಿದೆ.

        ಬೆಂಗಳೂರು ಉತ್ತರ ಲೋಕಸಭಾಕ್ಷೇತ್ರದಲ್ಲಿ ಬಿಜೆಪಿ ಕ್ಯಾಂಡಿಡೇಟ್ ಡಿ.ವಿ.ಸದಾನಂದಗೌಡರ ಗೆಲುವು ಸುಲಭ ಎಂಬ ಬಾವನೆ ಕ್ರಮೇಣಕಡಿಮೆಯಾಗುತ್ತಿದ್ದುದೇವೇಗೌಡ ಹಾಗೂ ಕುಮಾರಸ್ವಾಮಿ ನಡೆಸಿದ ರಹಸ್ಯಕಾರ್ಯಾಚರಣೆಯ ನಂತರ ಮೈತ್ರಿಕೂಟದಕ್ಯಾಂಡಿಡೇಟ್,ಕಾಂಗ್ರೆಸ್‍ನ ಕೃಷ್ಣ ಭೈರೇಗೌಡಕಠಿಣ ಸ್ಪರ್ಧೆ ನೀಡುವ ಲಕ್ಷಣಗಳು ಹೆಚ್ಚಾಗಿ ಕಾಣುತ್ತಿವೆ.

         ಇದೇರೀತಿ ಬೆಂಗಳೂರು ದಕ್ಷಿಣ ಲೋಕಸಭಾಕ್ಷೇತ್ರದಲ್ಲಿ ಬಿಜೆಪಿ ತೇಜಸ್ವಿನಿ ಅನಂತಕುಮಾರ್‍ಅವರಿಗೆಟಿಕೆಟ್ ನೀಡದ ಪರಿಣಾಮವಾಗಿ,ಮೈತ್ರಿಕೂಟದಕ್ಯಾಂಡಿಡೇಟ್ ಬಿ.ಕೆ.ಹರಿಪ್ರಸಾದ್‍ಅವರಿಗೆಗೆಲ್ಲುವ ಸದವಕಾಶ ಲಭ್ಯವಾಗಿದೆ.

          ಕಳೆದ ಆರು ಚುನಾವಣೆಗಳಲ್ಲಿ ಅನಂತಕುಮಾರ್ ನಿರಾಯಾಸವಾಗಿ ಗೆಲುವು ಗಳಿಸಿದ್ದರೂ ಅವರ ಗೆಲುವಿನ ಹಿಂದೆ ಕೆಲ ಕಾಂಗ್ರೆಸ್ ನಾಯಕರ ಸಹಕಾರವೂಇರುತ್ತಿತ್ತು.ಆದರೆ ಈ ಅಂಶವನ್ನು ಗುರುತಿಸಿದ ಬಿ.ಕೆ.ಹರಿಪ್ರಸಾದ್ ಸದರಿಕಾಂಗ್ರೆಸ್ ನಾಯಕರಜತೆಗಿನ ವೈಮನಸ್ಯವನ್ನು ಪರಿಹರಿಸಿಕೊಂಡಿರುವುದು ಅವರಿಗೆ ಪ್ಲಸ್ ಆಗುವ ಸಾಧ್ಯತೆಗಳು ಹೆಚ್ಚು.

      ಇದೇ ರೀತಿ ಅನಂತಕುಮಾರ್‍ ಅವರ ಕಟ್ಟಾ ಬಳಗ ಒಳಗಿಂದೊಳಗೇ ಬಿಜೆಪಿ ಕ್ಯಾಂಡಿಡೇಟ್ ವಿರುದ್ದ ತಿರುಗಿ ಬಿದ್ದಿದ್ದು ಪರಿಣಾಮವಾಗಿ ಈ ಹಿಂದೆ ನಿರಾಯಾಸವಾಗಿ ಗೆಲುವು ಗಳಿಸುವ ಭರವಸೆ ಮೂಡಿಸಿದ್ದ ಬಿಜೆಪಿ ಕ್ಯಾಂಡಿಡೇಟ್‍ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.

      ಈ ಮಧ್ಯೆ ಹಾಸನದಲ್ಲಿ ಪ್ರಜ್ವಲ್‍ ರೇವಣ್ಣ,ತುಮಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನಿರಾಯಾಸವಾಗಿ ಗೆಲುವು ಗಳಿಸಲಿದ್ದು ಅದ್ದೂರಿ ಪ್ರಚಾರದ ನಡುವೆಯೂ ನಿಖಿಲ್‍ಕುಮಾರಸ್ವಾಮಿಅಲ್ಪಅಂತರದಲ್ಲಿ ಗೆಲುವು ಗಳಿಸುವ ಲಕ್ಷಣಗಳು ಕಾಣಿಸಿಕೊಂಡಿವೆ ಎಂಬುದು ವಿ.ಎಸ್.ಎಸ್.ವೋಟರ್ಸ್ ವರದಿ.

       ಹೀಗೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಈ ಹಿಂದೆದುರ್ಬಲರಂತೆಕಂಡು ಬಂದಿದ್ದ ಮೈತ್ರಿಕೂಟದ ಹಲವು ಅಭ್ಯರ್ಥಿಗಳು ಬದಲಾದ ಸ್ಥಿತಿಯಲ್ಲಿ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದು ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಹನ್ನೆರಡರಿಂದ ಹದಿನಾಲ್ಕು ಸೀಟುಗಳಲ್ಲಿ ಗೆಲುವು ಗಳಿಸಬಹುದುಎಂಬುದು ವಿ.ಎಸ್.ಎಸ್.ವೋಟರ್ಸ್ ಸಮೀಕ್ಷೆ.

        ಇಂತಹ ಬದಲಾವಣೆಗೆ ಹಲವು ಕಾರಣಗಳಿರುವಂತೆಯೇ ಮತ್ತೊಮ್ಮೆ ನರೇಂದ್ರಮೋದಿ ಪ್ರಧಾನಿ ಯಾಕಾಗಬೇಕು?ಎಂದು ಪರಿಣಾಮಕಾರಿಯಾಗಿ ಹೇಳುವಲ್ಲಿ ಬಿಜೆಪಿ ವಿಫಲವಾಗುತ್ತಿದೆ.

      ನೋಟ್ ಬ್ಯಾನ್ ಪ್ರಕರಣದಿಂದಜನಸಾಮಾನ್ಯರು ಹಿಂಸೆ ಅನುಭವಿಸಬೇಕಾಯಿತೇ ಹೊರತು ಕಾಳಧನಿಕರು ಹಾಳಾದ ಕುರುಹುಕಾಣುತ್ತಿಲ್ಲ.ಜಿ.ಎಸ್.ಟಿ ಪರಿಣಾಮವಾಗಿ ಬಡ ಹಾಗೂ ಕೆಳ ಮಧ್ಯಮ ವರ್ಗದಜನರಆರ್ಥಿಕ ಸ್ಥಿತಿ ಶೋಚನೀಯವಾಗಿದೆಎಂಬುದರಿಂದ ಹಿಡಿದು ಹಲವು ಅಂಶಗಳ ಕುರಿತುರಾಜಧಾನಿಯ ಹಲವೆಡೆಜನ ಬಿಜೆಪಿಯ ಪ್ರಚಾರಕರಿಗೆ ಸವಾಲು ಹಾಕುತ್ತಿದ್ದರೆಅದಕ್ಕೆ ಸಮರ್ಪಕಉತ್ತರ ಸಿಗುತ್ತಿಲ್ಲ.

      ಹಿಂದೆ ಕನಿಷ್ಟ ಪಕ್ಷ ನಾವು ನಮ್ಮಆದಾಯದಲ್ಲಿ ಸ್ವಲ್ಪ ಪ್ರಮಾಣದ ಉಳಿತಾಯವನ್ನಾದರೂ ಮಾಡಲು,ಆ ಮೂಲಕ ಭವಿಷ್ಯದ ಬಗ್ಗೆ ಕನಸು ಕಾಣಲುಅವಕಾಶವಿತ್ತು.ಆದರೆ ಈಗ ಉಳಿತಾಯವನ್ನು ಮಾಡುವುದಿರಲಿ,ಸಾಲ ಮಾಡದೆಇರುವುದೇದೊಡ್ಡ ಸವಾಲಾಗಿ ಹೋಗಿದೆಎಂಬುದು ಈ ವರ್ಗದ ಅಳಲು.

       ಇದೇರೀತಿ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹಿಡಿದು ಕೇಬಲ್ ವ್ಯವಸ್ಥೆಯವರೆಗೆಜನಸಾಮಾನ್ಯರ ದಿನನಿತ್ಯದ ಬದುಕನ್ನು ದುಸ್ಥಿರಗೊಳಿಸಲಾಗಿದೆ.ಹೀಗಿರುವಾಗ ಬಿಜೆಪಿಗೇಕೆ ಮತ ಹಾಕಬೇಕು?ಮೋದಿ ಮತ್ತೊಮ್ಮೆ ಏಕೆ ಪ್ರಧಾನಿಯಾಗಬೇಕು?ಎಂಬಂತಹ ಸವಾಲುಗಳು ಕೇಳಿ ಬರತೊಡಗಿವೆ.

      ಇಂತಹ ಕೂಗಿನ ಪರಿಣಾಮವಾಗಿಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಕ್ಯಾಂಡಿಡೇಟುಗಳು ಒಂದು ಮಟ್ಟದಲ್ಲಾದರೂತಮ್ಮ ಬಲ ಹೆಚ್ಚಿಸಿಕೊಂಡಿರುವ ಲಕ್ಷಣಗಳು ಕಾಣಿಸಿಕೊಂಡಿದೆ.ಹೀಗಾಗಿ ಬಿಜೆಪಿಗೆ ಈ ಹಿಂದಿದ್ದ ವಿಪರೀತಆತ್ಮವಿಶ್ವಾಸ ಈಗ ಗೋಚರಿಸುತ್ತಿಲ್ಲಎಂದು ವಿ.ಎಸ್.ಎಸ್.ವೋಟರ್ಸ್ ಹೇಳಿದೆ.

     ಕಳೆದ ವಾರವಿ.ಎಸ್.ಎಸ್.ವೋಟರ್ಸ್‍ತಾನು ನೀಡಿದ ಪ್ರಥಮ ವರದಿಯಲ್ಲಿಕರ್ನಾಟಕದಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಹದಿನೆಂಟರಲ್ಲಿ ಬಿಜೆಪಿ ಹಾಗೂ ಹತ್ತರಲ್ಲಿಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಕ್ಯಾಂಡಿಡೇಟುಗಳು ಗೆಲ್ಲಲಿದ್ದಾರೆಎಂದು ವರದಿ ನೀಡಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link