ಚಿಕ್ಕನಾಯಕನಹಳ್ಳಿ 

ಕೊರೊನಾ ವೈರಸ್ ತಡೆಗಟ್ಟಲು ಕೂಲಿಕಾರ್ಮಿಕರು, ಅಲೆಮಾರಿಗಳ ಗುಡಿಸಲುಗಳಿಗೆ ಭೇಟಿ ನೀಡಿ, ಜನರಿಗೆ ಈ ವೈರಸ್‍ನ ದುಷ್ಪರಿಣಾಮಗಳು ಮತ್ತು ಅಂತರ ಕಾಯ್ದುಕೊಳ್ಳುವಂತೆ ಹಾಗೂ ಶುಚಿತ್ವ ಕಾಯ್ದುಕೊಳ್ಳುವಂತೆ ನ್ಯಾಯಾಧೀಶರುಗಳು, ವಕೀಲರು ಸಲಹೆ, ಸೂಚನೆ ನೀಡಿದರು.
ಗೃಹ ಬಂಧನದಲ್ಲಿ ಸಿಲುಕಿರುವ ಕೂಲಿ ಕಾರ್ಮಿಕರು, ಅಲೆಮಾರಿ ಜನಾಂಗದವರು ಹಾಗೂ ನಿರ್ಗತಿಕರಿಗೆ ಆಗುತ್ತಿರುವ ಅನನುಕೂಲವನ್ನು ಮನ ಗಂಡ ನ್ಯಾಯಾಧೀಶರುಗಳಾದ ಡಿ.ಕಿರಣ್ ಕುಮಾರ್ ವಡಗೇರಿ, ಪ್ರಮೀಳಾ, ತೆಂಡ್ರಲ್‍ರವರು, ತಾಲ್ಲೂಕು ವಕೀಲರ ಸಂಘದ ಜೊತೆಗೂಡಿ ಗ್ಯಾರೆಹಳ್ಳಿಯಲ್ಲಿನ ಎತ್ತಿನಹೊಳೆ ಕಾಮಗಾರಿಯ ಕೂಲಿ ಕಾರ್ಮಿಕರ ಶೆಡ್, ಯೋಗಮಾಧವ ನಗರದಲ್ಲಿನ ಅಲೆಮಾರಿ ಜನಾಂಗದವರ ಗುಡಿಸಲುಗಳಿಗೆ ಹಾಗೂ ಕಾತ್ರಿಕೆಹಾಳ್ ಬಳಿ ಇರುವ ಸುಡುಗಾಡು ಸಿದ್ದರ ವಾಸ ಸ್ಥಳಗಳಿಗೆ ತೆರಳಿ ಆಹಾರ ಸಾಮಗ್ರಿಗಳನ್ನು ನೀಡಿದರು.
ಚೆಕ್ ಪೋಸ್ಟ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸ್ಯಾನಿಟೈಸರ್, ಮಾಸ್ಕ್‍ಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸಿಪಿಐ ವೀಣಾ, ವಕೀಲ ಸಂಘದ ಅಧ್ಯಕ್ಷ ಎಂ.ಬಿ.ನಾಗರಾಜು, ವಕೀಲ ಶೇಖರ್, ದಿಲೀಪ್, ಮಂಜುನಾಥ್, ಚಿಕ್ಕಣ್ಣ, ಆಡಳಿತ ಸಹಾಯಕಿ ಮಂಜುಳ ಸೇರಿದಂತೆ ಹಲವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
