ಹೂಡಿಕೆ ಮಾಡುವವರಿಗೆ ಎಲ್ಲ ರೀತಿಯ ನೆರವು: ಸಿಎಂ

ಬೆಂಗಳೂರು

     ಕೇಂದ್ರ ಸರ್ಕಾರ ಪ್ರಾದೇಶಿಕ ಸಹಕಾರಆರ್ಥಿಕಒಡಂಬಡಿಕೆ ಸಹಭಾಗಿತ್ವ(ಆರ್‍ಸಿಇಪಿ)ಕ್ಕೆ ಸಹಿ ಹಾಕದ ಹಿನ್ನೆಲೆಯಲ್ಲಿ ಉದ್ದಿಮೆದಾರರು ಮತ್ತು ಬಂಡವಾಳಸ್ಥರು ರಾಜ್ಯದಲ್ಲಿ ಹೂಡಿಕೆ ಮಾಡಿದರೆಎಲ್ಲ ರೀತಿಯ ನೆರವು ನೀಡಲಾಗುವುದುಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಭರವಸೆಕೊಟ್ಟಿದ್ದಾರೆ.ನಗರದ ಅರಮನೆ ಮೈದಾನದಲ್ಲಿ ಇಂದಿನಿಂದಆರಂಭವಾದ 2019ರ ಬೆಂಗಳೂರು ಟೆಕ್ ಸಮಿಟ್ ಶೃಂಗಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ದೇಶದಲ್ಲಿರುವ ರೈತರು, ಕಾರ್ಮಿಕರು ಮಧ್ಯಮ ವರ್ಗದವರು, ಉದ್ಯಮಿಗಳು ಸೇರಿದಂತೆಎಲ್ಲರನ್ನೂಗಮನದಲ್ಲಿಟ್ಟುಕೊಂಡೇ ಪ್ರಧಾನಿ ನರೇಂದ್ರ ಮೋದಿ ಅವರು ಆರ್‍ಸಿಇಪಿ ಒಪ್ಪಂದದಿಂದ ಹಿಂದೆ ಸರಿದರು. ಇದುಕೇಂದ್ರ ಸರ್ಕಾರದ ಬದ್ಧತೆಯನ್ನು ತೋರುತ್ತದೆಎಂದು ಹೇಳಿದರು.
ಆರ್‍ಇಸಿಪಿ ಒಪ್ಪಂದಕ್ಕೆ ಸಹಿ ಹಾಕದಹಿನ್ನೆಲೆಯಲ್ಲಿ ಉದ್ದಿಮೆದಾರರಾಗಲಿ, ಇಲ್ಲವೇ ಬಂಡವಾಳಸ್ಥರು ಆತಂಕಪಡುವಅಗತ್ಯವಿಲ್ಲ. ಕರ್ನಾಟಕದಲ್ಲಿ ನೀವು ಬಂಡವಾಳ ಹೂಡಿಕೆ ಮಾಡಿದರೆ ಸರ್ಕಾರಅಗತ್ಯವಿರುವ ಭೂಮಿ, ವಿದ್ಯುತ್, ನೀರು ಸೇರಿದಂತೆಎಲ್ಲ ಸೌಕರ್ಯಗಳನ್ನು ನೀಡಲಿದೆ. ಉದ್ದಿಮೆದಾರರಿಗೆಕರ್ನಾಟಕಯಾವಾಗಲೂ ರತ್ನಗಂಬಳಿ ಹಾಕುತ್ತದೆಎಂದುಆಶ್ವಾಸನೆಕೊಟ್ಟರು.

     ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಟಾರ್ಟ್‍ಅಪ್ ಯೋಜನೆಯಲ್ಲಿ ಬೆಂಗಳೂರು ಇಂದು 10ನೇ ಸ್ಥಾನದಲ್ಲಿದೆ. ಇಲ್ಲಿ ಬಂಡವಾಳ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. ವಿಶ್ವದ ಮುಂಚೂಣಿಯಲ್ಲಿರುವ ಐಟಿಬಿಟಿ ಕಂಪನಿಗಳು ತಳವೂರಿವೆ. ರಾಜ್ಯ ಸರ್ಕಾರವುಅವರಿಗೆಎಲ್ಲ ರೀತಿಯ ಸಹಕಾರ ನೀಡುತ್ತದೆಎಂದು ತಿಳಿಸಿದರು.

      ಬೆಂಗಳೂರು ಈಗಲೂ ದೇಶದ ಸಿಲಿಕಾನ್ ವ್ಯಾಲಿ ಎಂಬ ಖ್ಯಾತಿ ಪಡೆದಿರುವಜೊತೆಗೆ ಭಾರತದ ಆವಿಷ್ಕಾರದರಾಜಧಾನಿ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ರಾಜ್ಯ ಸರ್ಕಾರವುಕರ್ನಾಟಕತಂತ್ರಜ್ಞಾನಅಭಿವೃದ್ದಿ ಮಂಡಳಿಯನ್ನು ರಚಿಸುವ ಮೂಲಕ ಐಟಿಬಿಟಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆಎಂದರು.

     ಉತ್ತಮವಾದಕೈಗಾರಿಕಾ ನೀತಿ, ಪರಿಪೂರ್ಣತಂತ್ರಜ್ಞಾನ, ನುರಿತತಜ್ಞರು, ಮಾನವಸಂಪನ್ಮೂಲದಜೊತೆಗೆ ನೈಸರ್ಗಿಕ ಸಂಪನ್ಮೂಲವೂ ಯಥೇಚ್ಛವಾಗಿ ನಮ್ಮಲ್ಲಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದುಕರೆ ನೀಡಿದರು.

     ಬಂಡವಾಳ ಹೂಡಿಕೆಗೆಕರ್ನಾಟಕ ಸೂಕ್ತ ತಾಣವೆಂದು ನೀತಿಆಯೋಗದಲ್ಲೂಉಲ್ಲೇಖವಾಗಿದೆ. ನಾನು ಮುಖ್ಯಮಂತ್ರಿಯಾದ ಮೇಲೆ ಹಲವಾರು ಬಾರಿ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಿ, ಸರ್ಕಾರದಿಂದಎಲ್ಲ ನೆರವುಕೊಡುವಆಶ್ವಾಸನೆ ನೀಡಿದ್ದೇನೆ .ಜೊತೆಗೆ ಇತ್ತೀಚೆಗೆಕರ್ನಾಟಕ ಆವಿಷ್ಕಾರ ಪ್ರಾಧಿಕಾರವನ್ನು ನನ್ನ ಅಧ್ಯಕ್ಷತೆಯಲ್ಲಿ ಸ್ಥಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರಇನ್ನಷ್ಟುತ್ವರಿತವಾದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದರು.

     ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ, ಬಯೋಕಾನ್ ಮುಖ್ಯಸ್ಥರಾದಕಿರಣ್ ಮುಜಂದಾರ್ ಮೋಹನ್‍ದಾಸ್ ಪೈ ಸೇರಿದಂತೆ ಅನೇಕ ಉದ್ಯಮಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link