ಸರ್ವ ಸದಸ್ಯರ ಸಭೆ

ತುರುವೇಕೆರೆ:

         ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗ ಮಂದಿರದಲ್ಲಿ ಇದೇ ತಿಂಗಳ 30-31 ರಂದು ನೆಡೆಯುವ 4ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕತ ಸಾಹಿತಿ, ವೈಜ್ಞಾನಿಕ ಚಿಂತಕ ಹುಲಿಕಲ್ ನಟರಾಜು ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಮಾಡಲಾಯಿತು.

        ಪಟ್ಟಣದ ಕಸಾಪ ಕಚೇರಿಯಲ್ಲಿ ಮಂಗಳವಾರ ಕಸಾಪ ತಾಲೂಕು ಅಧ್ಯಕ್ಷ ನಂ.ರಾಜು ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತಿರ್ಮಾನಿಸಲಾಯಿತು. ಡಾ.ಹುಲಿಕಲ್ ನಟರಾಜು ತಾಲೂಕಿನವರೇ ಆಗಿದ್ದು ಹುಲಿಕಲ್ ಗ್ರಾಮದ ಕಲ್ಲೇಶಪ್ಪ ಮತ್ತು ಸೌಭಾಗ್ಯಮ್ಮ ದಂಪತಿಗಳ ಸುಪುತ್ರರಾಗಿ ನಂತರ ದೊಡ್ಡಬಳ್ಳಾಪುರದಲ್ಲಿ ಶಿಕ್ಷಕ ವೃತ್ತಿ ಆರಂಬಿಸಿದರು.

        ವೈಜ್ಞಾನಿಕವಾಗಿ ನೆಡೆಯುವ ಕಾರ್ಯಗಳನ್ನು ಮೌಡ್ಯತೆ, ಬೂಟಾಟಿಕೆಯೊಂದಿಗೆ ಅಮಾಯಕರನ್ನು ವಂಚಿಸುವ ಮಾಟ, ಮಂತ್ರ, ರಹಸ್ಯಗಳನ್ನು ವೈಜ್ಞಾನಿಕವಾಗಿ ಭೇದಿಸುವುದರೊಂದಿಗೆ ಪವಾಡ ರಹಸ್ಯ ಬಯಲಿನ ಕಾರ್ಯಕ್ರಮಗಳನ್ನು ನೀಡುವ ಮೂಲಕ ಇಂದಿನ ಯುವ ಜನರಲ್ಲಿ, ವಿದ್ಯಾರ್ಥಿಗಳಲ್ಲಿ ಮೌಡ್ಯತೆಯನ್ನು ಹೋಗಲಾಡಿಸುವ ಪ್ರಯತ್ನ ಇವರದಾಗಿದೆ. ಇಷ್ಟಲ್ಲದೆ ದೇಶ, ವಿದೇಶಗಳಲ್ಲಿಯೂ ಸಹಾ ಪವಾಡ ಬಯಲು ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆದಿದ್ದು ಕನ್ನಡದ ಸಾಹಿತ್ಯ ಬಗ್ಗೆ ಅಪಾರ ಗೌರವ ಹೊಂದಿರು ಇವರು ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಆ ನಿಟ್ಟಿನಲ್ಲಿ 4 ನೇ ತಾಲೂಕು ಮಟ್ಟದ ಸಮ್ಮೇಳನಾಧ್ಯಕ್ಷರಾಗಿ ಹುಲಿಕಲ್ ನಟರಾಜು ಅವರನ್ನು ಆಯ್ಕೆ ಮಾಡಲಾಗಿದ್ದು ಅವರ ಒಪ್ಪಿಗೆಯನ್ನು ಸಹಾ ಪಡೆಯಲಾಗಿದೆ ಎಂದು ಸಮಿತಿ ತಿಳಿಸಿದೆ.

           30 ರಂದು ಬೆಳಿಗ್ಗೆ ಪ್ರವಾಸಿ ಮಂದಿರದಿಂದವಿವಿದ ಜಾನಪದ ಕಲಾಪ್ರಕಾರಗಳೊಂದಿಗೆ ಅದ್ದೂರಿ ಮೆರವಣಿಗೆಯ ಮೂಲಕ ಸಮ್ಮೇಳಾನಾಧ್ಯಕ್ಷರನ್ನು ಕರತರಲಾಗುವುದು, ನಂತರ ಕನ್ನಡ ಭವನ ಉದ್ಘಾಟನೆ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಮಸಾಲ ಜಯರಾಮ್ ಅಧ್ಯಕ್ಷತೆ ಜೊತೆಗೆ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೊಳಿಸಲಾಯಿತು. ವೇದಿಕೆ ಕಾರ್ಯಕ್ರಮದಲ್ಲಿ ಸಾಧಕರನ್ನು, ಗಣ್ಯರನ್ನು ಸನ್ಮಾನಿಸುವುದು, 31ರಂದು ಹಲವಾರು ಸಾಹಿತ್ಯ ಗೋಷ್ಟಿಗಳನ್ನು ನಡೆಸುವುದು ಹಾಗೂ ಸಮ್ಮೇಳನದ ಅಂಗವಾಗಿ ಸ್ಮರಣ ಸಂಚಿಕೆಯನ್ನು ಹೊರತರಲಿದ್ದು ಕಥೆ, ಕವನ ಹಾಗು ಜಾಹಿರಾತುಗಳನ್ನು ಸಾರ್ವಜನಿಕರಿಂದ ಆಹ್ವಾನಿಸಲಾಗಿದೆ.

          ವಿವಿದ ಸಮಿತಿಗಳು: ಆಹಾರ ಮತ್ತು ಹಣಕಾಸು ಸಮಿತಿಗೆ ಮಾಜಿ ಕೃಷಿಮಾರುಕಟ್ಟೆ ಅಧ್ಯಕ್ಷರಾದ ಕೊಂಡಜ್ಜಿ ವಿಶ್ವನಾಥ್ ಹಾಗೂ ನೇಕಾರ ಸಂಘದ ಎಂ.ಡಿ.ಮೂರ್ತಿ, ವೇದಿಕೆ ಸಮಿತಿಗೆ ನಿಕಟಪೂರ್ವ ಕಸಾಪ ಅಧ್ಯಕ್ಷ ಸಾ.ಶಿ.ದೇವರಾಜು, ನೌಕರರ ಸಂಘದ ಪ್ರಹ್ಲಾದ್, ಸಾಂಸ್ಕತಿಕ ವೇದಿಕೆಗೆ ಕಲಾವಿದ ಅಮಾನಿಕೆರೆ ಮಂಜುನಾಥ್, ವಿ.ಬಿ.ಸುರೇಶ್, ಪ್ರಚಾರ ಸಮಿತಿಗೆ ನಿವೃತ್ತ ಅಧಿಕಾರಿ ಮಂಗಿಕುಪ್ಪೆ ಗಂಗಣ್ಣ, ಸತ್ಯನಾರಾಯಣ್, ದುಂಡ ಮಲ್ಲಿಕಾರ್ಜುನ್, ನಾಗಭೂಷಣ್, ಸ್ಮರಣ ಸಂಚಿಕೆ ಸಮಿತಿಗೆ ಪ್ರಧಾನ ಸಂಪಾದಕರುಗಳಾಗಿ ನಂ.ರಾಜು, ಸಾಹಿತಿ ಕೆ.ಭೈರಪ್ಪ, ತುರುವೇಕೆರೆ ಪ್ರಸಾದ್, ಪ್ರೊ.ಪುಟ್ಟರಂಗಪ್ಪ ಒಳಗೊಂಡಂತೆ ಸಮಿತಿ, ಉಪಸಮಿತಿ ಆಯ್ಕೆ ಪ್ರಕ್ರಿಯೆಗಳು ಜನವರಿ 5 ರಿಂದ ಆರಂಭಗೊಳ್ಳಲಿದೆ.

          ಸಭೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ನಂ.ರಾಜು, ಪ್ರೊ. ಪುಟ್ಟರಂಗಪ್ಪ, ಕೊಂಡಜ್ಜಿ ವಿಶ್ವನಾಥ್, ಸಾ.ಶಿ.ದೇವರಾಜು, ಎಸ್.ಎಂ.ಕುಮರಸ್ವಾಮಿ, ದಂಡಿನಶಿವರ ಶಂಕರೇಗೌಡ, ನೌಕರ ಸಂಘದ ಅಧ್ಯಕ್ಷ ಮಂಜಣ್ಣ, ಪ್ರಹ್ಲಾದ್, ಬುಗುಡನಹಳ್ಳಿ ಕೃಷ್ಣಮೂರ್ತಿ, ಚಂದ್ರಯ್ಯ, ಬೋಜೇಗೌಡ, ರಾಮಚಂದ್ರು, ಶಿವಣ್ಣ, ದಿನೇಶ್, ಗುರುಸಿದ್ದಮ್ಮ ಸೇರಿದಂತೆ ಇತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link