ಕುಣಿಗಲ್
ನಾಲ್ಕು ಮನೆಗಳ ಬೀಗ ಮುರಿದು ಲಕ್ಷಾಂತರ ರೂಗಳ ಒಡವೆ ಮತ್ತು ಹಣವನ್ನು ದೋಚಿಕೊಂಡು ಹೋಗಿರುವ ಘಟನೆ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಸೋಮವಾರ ರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ ಕಳ್ಳತನ ಆಗಿರುವ ನಾಲ್ಕುಮನೆಗಳಲ್ಲಿಯಾರೊಬ್ಬರೂ ಇಲ್ಲದೇ ಇರುವ ಸಮಯವನ್ನು ನೋಡಿಕೊಂಡು ಕೆಎಸ್ ಆರ್ ಟಿಸಿ ನೌಕರ ಶಿವಯೋಗಿ ಅಡಿಗ ಮತ್ತು ಗೋವಿಂದ ರೆಡ್ಡಿ ಮನೆಗಳ ಬೀಗ ಒಡೆದು ಮನೆಯಲ್ಲಿದ್ದ100ಗ್ರಾಂ ಚಿನ್ನ ಹಾಗೂ ನಗದು ಮತ್ತು ಇವರುಗಳ ಮನೆ ಪಕ್ಕದಲ್ಲೇ ಇರುವ ಧನಂಜಯ್ಯ ಎಂಬುವರಿಗೆ ಸೇರಿದ ಮನೆಯಲ್ಲಿ ತೊಂಬತ್ತು ಸಾವಿರ ನಗದು ಮತ್ತು ಕಮಲ್ ತಾಜ್ ಎಂಬುವರ ಮನೆಗೆ ನುಗ್ಗಿ ಮನೆಯಲ್ಲಿದ್ದ ಸಾಮಾನುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದು ಹದಿನೈದು ಸಾವಿರ ನಗದು ಹಾಗೂ ಹದಿನೈದು ಗ್ರಾಂ ಚಿನ್ನದ ಓಲೆ ದೋಚಿಕೊಂಡು ಪರಾರಿಯಾಗಿದಾರೆ
ಕಳ್ಳತನವಾಗಿರುವ ನಾಲ್ಕು ಮನೆಗಳಲ್ಲಿ ಯಾರೂ ಇಲ್ಲದ ಸಮಯವನ್ನು ಹೊಂಚು ಹಾಕಿ ಸರಣಿ ಕಳ್ಳತನ ಮಾಡಿರುವುದು ಪಟ್ಟಣದ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ ಕಳ್ಳತನ ನಡೆದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ಮನೆಗಳಿದ್ದರೂಕಳ್ಳತನವಾಗಿದೆ
ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡು ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ