ಚಿತ್ರದುರ್ಗ
ಚಿತ್ರದುರ್ಗದ ಬಹುತೇಕ ಎಲ್ಲಾ ಕಡೆಯೂ ಸಿಮೆಂಟ್ ರಸ್ತೆ ನಿರ್ಮಿಸಲಾಗುತ್ತಿದೆ. ಮುಂದಿನ ಒಂದುವರೆ ವರ್ಷದೊಳಗೆ ಎಲ್ಲಾ ಪ್ರಮುಖ ರಸ್ತೆಗಳು ಸಿಮೆಂಟ್ ರಸ್ತೆಗಳಾಗಲಿವೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರುಚಿತ್ರದುರ್ಗ ನಗರದ ಡಿಸಿಸಿ ಬ್ಯಾಂಕ್ ಪಕ್ಕದಲ್ಲಿನ ಪೋಲಿಸ್ ಕವಾಯತ್ ಮೈದಾನದ ಸಿಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಈ ರಸ್ತೆಯ ಜೊತೆಗೆ ವಿವಿಧಡೆ ಸುಮಾರು 8 ಕೋಟಿ ರೂಪಾಯಿ ಮೊತ್ತದಲ್ಲಿ ರಸ್ತೆ ಅಭಿವೃದ್ದಿ ಪಡಿಸುವ ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು
ಚಿತ್ರದುರ್ಗ ನಗರದ ವಿವಿಧೆಡೆಗಳಲ್ಲಿ ಸುಮಾರು 8 ಕೋಟಿಯಷ್ಟು ಅನುದಾನದಲ್ಲಿ ಸಿಸಿ ರಸ್ತೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ, ಈಗ ಗಾಂಧಿ ನಗರದಲ್ಲಿ 1 ಕೋಟಿ, ಯಂಗಮ್ಮನ ಕಟ್ಟೆಯಲ್ಲಿ 1.50 ಕೋಟಿ, ಆರ್ಯವೇದಿಕ್ ಮೆಡಿಕಲ್ ಕಾಲೇಜು ಮುಂಭಾಗದಲ್ಲಿ 1.50 ಕೋಟಿ, ಡಿಸಿಸಿ ಬ್ಯಾಂಕ್ ಪಕ್ಕದಲ್ಲಿ 50 ಲಕ್ಷ, ಸಿ.ಕೆ.ಪುರದಲ್ಲಿ 1 ಕೋಟಿ ಹಾಗೂ ಭೂವಿ ಕಾಲೊನಿ ಮತ್ತು ಸಂಪಿಗೆ ಸಿದ್ದೇಶ್ವರ ಶಾಲೆಯ ಪಕ್ಕದಲ್ಲಿ 1 ಕೋಟಿ ರೂ.ಗಳನ್ನು ನೀಡುವುದರ ಮೂಲಕ ಅಲ್ಲಿ ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಈ ರಸ್ತೆ ಕಾಮಗಾರಿ ನಿರ್ಮಾಣದಿಂದ ಇಲ್ಲಿನ ಪೋಲಿಸ್ ವಸತಿ ಗೃಹಗಳಲ್ಲಿ ವಾಸವಾಗಿರುವವರಿಗೆ ಮತ್ತು ತುರುವನೂರು ರಸ್ತೆಗೆ ಹೊಂದಿಕೊಂಡಂತೆ ಇರುವುದರಿಂದ ಗ್ರಂಥಾಲಯಕ್ಕೆ ಬರುವವರಿಗೆ ಅನುಕೂಲ ವಾಗಲಿದೆ ಅಲ್ಲದೆ ಸಂಚಾರ ದಟ್ಟಣೆಯೂ ಸಹಾ ಈ ರಸ್ತೆ ನಿರ್ಮಾಣದಿಂದ ಕಡಿಮೆಯಾಗಲಿದೆ, ಅಲ್ಲದೆ ಪೋಲಿಸರು ಪ್ರತಿದಿನ ಕವಾಯತ್ ಮಾಡಲು ಹೋಗಲು ಸಹಾ ಅನುಕೂಲವಾಗಲಿದೆ ಎಂದ ಶಾಸಕಸರು, ಡಿ.ಸಿಸಿ. ಬ್ಯಾಂಕ್‍ನಿಂದ ಗ್ರಂಥಾಲಯದವರೆಗೂ ಅಕ್ಕ-ಪಕ್ಕದಲ್ಲಿ ಕೆಲವು ಮರಗಳನ್ನು ತೆರವು ಮಾಡುವುದರ ಮೂಲಕ ರಸ್ತೆಯನ್ನು ಆಗಲ ಮಾಡಲು ಸಹಾ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಮರಗಳನ್ನು ತೆಗೆಯುವ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸುವಂತೆ ನಿರ್ದೇಶನ ನೀಡಲಾಯಿತು.
ಈಗಾಗಲೇ ಜಿಲ್ಲಾ ಗ್ರಂಥಾಲಯದಿಂದ ರಾ.ಹೆ.13ರವರೆಗೆ ರಸ್ತೆಯನ್ನು ಆಗಲ ಮಾಡಲು ಹಣವನ್ನು ನೀಡಲಾಗಿದೆ, ಈಗ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ವಸತಿ ಗೃಹದಿಂದ ಗಾಯತ್ರಿ ವೃತ್ತದವರೆಗೆ ರಸ್ತೆಯನ್ನು ಈಗಾಗಲೇ ಆಗಲ ಮಾಡಲಾಗಿದೆ. ಇದರೊಂದಿಗೆ ವಾಸವಿ ವೃತ್ತ ಮತ್ತು ಗಾಯತ್ರಿ ವೃತ್ತದಲ್ಲಿ ಆಗುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಅಕ್ಕ-ಪಕ್ಕದಲ್ಲಿ ಸ್ವಲ್ಪ ಜಾಗವನ್ನು ಪಡೆಯುವುದರ ಮೂಲಕ ವೃತ್ತವನ್ನು ಆಗಲ ಮಾಡಲಾಗುತ್ತದೆ.
ಇದರೊಂದಿಗೆ ಈ ಹಿಂದೆ ಆನುದಾನ ಕಡಿಮೆ ಇತ್ತು ಎಂದು ಹೊರಪೇಟೆಯಲ್ಲಿ ಕೆಲವು ರಸ್ತೆಗಳನ್ನು ಬಿಡಲಾಗಿತ್ತು ಅದನ್ನು ಈಗ ನಿರ್ಮಾಣ ಮಾಡಲಾಗುತ್ತದೆ ಎಂದು ಶಾಸಕರು ಹೇಳಿದರು.ಈಗಾಗಲೇ ನಗರದ ವಿವಿಧೆಡೆಗಳಲ್ಲಿ ರಸ್ತೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ ಮುಂದಿನ ಎಲ್ಲಾ ರಸ್ತೆಗಳು ಸಿಸಿ ರಸ್ತೆಗಳಾಗಿರುತ್ತವೆ ಕೆಲವಡೆ ಮಾತ್ರ ಡಾಂಬರ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತದೆ ರಸ್ತೆ ನಿರ್ಮಾಣದಲ್ಲಿ ಕಡಿದು ಹಾಕಲಾಗುವ ಮರಗಳಿಗೆ ಬದಲಾಗಿ ಈಗಾಗಲೇ ಹಲವಡೆಗಳಲ್ಲಿ ಸಸಿಗಳನ್ನು ನೆಡುವುದರ ಮೂಲಕ ಅವುಗಳನ್ನು ಬೆಳಸಲಾಗುತ್ತಿದೆ ಎಂದು ತಿಳಿಸಿದ ತಿಪ್ಪಾರೆಡ್ಡಿ, ಚಳ್ಳಕೆರೆ ಗೇಟ್ ನಿಂದ ಪ್ರವಾಸಿಮಂದಿರ, ಗಾಂಧಿ ವೃತ್ತದಿಂದ ಜೆಎಂಐಟಿ ವೃತ್ತ, ಸಂತೇಪೇಟೆ ವೃತ್ತದಿಂದ ಮಾಳಪ್ಪನಹಟ್ಟಿಯವರೆಗೂ ರಸ್ತೆಗಳನ್ನು ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ