ಎಲ್ಲಾ ಪ್ರಯಣಿಕರ ರೈಲುಗಳಲ್ಲಿ ವೈದ್ಯಕೀಯ ವ್ಯವಸ್ಥೆ

ಬೆಂಗಳೂರು:

       ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳು ಮತ್ತು ಎಲ್ಲಾ ಪ್ರಯಣಿಕರ ರೈಲುಗಳಲ್ಲಿ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.

      ಅಪಘಾತ ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆಗೆ ಅಗತ್ಯವಾದ ವಸ್ತುಗಳು ಮತ್ತು ಆಕ್ಸಿಜನ್ ಸಿಲಿಂಡರ್ ತಕ್ಷಣ ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ರೈಲ್ವೆ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

      ಪ್ರಥಮ ಚಿಕಿತ್ಸೆ ನಡೆಸಲು ಟಿಕೆಟ್ ತಪಾಸಣಾ ಸಿಬ್ಬಂದಿ, ರೈಲು ಸೂಪರಿಂಟೆಂಡೆಂಟ್‍ಗಳು, ರೈಲ್ವೆ ಗಾರ್ಡ್‍ಗಳು ಮತ್ತು ಸ್ಟೇಷನ್ ಮಾಸ್ಟರ್‍ಗಳಿಗೆ ಸೂಕ್ತ ತರಬೇತಿ ನೀಡಲಾಗುವುದು, ಭಾರೀ ಅಪಘಾತಗಳು ಸಂಭವಿಸಿದಾಗ ಮತ್ತು ಪ್ರಯಾಣಿಕರಿಗೆ ಎದುರಾಗುವ ತುರ್ತು ವೈದ್ಯಕೀಯ ಸಮಸ್ಯೆಗಳಿಗೆ ರೈಲುಗಳಲ್ಲಿ ಪ್ರಯಾಣ ಮಾಡುವ ವೈದ್ಯರ ನೆರವು ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.

ಇಂತಹ ವೈದ್ಯರಿಗೆ ಪ್ರಯಾಣದರದಲ್ಲಿ ರಿಯಾಯಿತಿ ನೀಡಲಾಗುವುದು.ಎಲ್ಲಾ ರೈಲು ಮಾರ್ಗಗಳಲ್ಲಿ ಇಲಾಖೆಯ ಡಾಕ್ಟರ್‍ಗಳು ಮತ್ತು ಖಾಸಗಿ ವೈದ್ಯರು, ರೈಲ್ವೆ ಆಸ್ಪತ್ರೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‍ಗಳು ಹಾಗೂ ಆಂಬುಲೆನ್ಸ್ ಸೇವೆ ಕುರಿತ ಪಟ್ಟಿಯನ್ನು ಸ್ಟೇಷನ್ ಮಾಸ್ಟರ್‍ಗಳಿಗೆ ಒದಗಿಸಲಾಗುವುದು ಎಂದು ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ