ಉಪಚುನಾವಣೆಯಲ್ಲಿ “ತೆನೆಹೊತ್ತ ಮಹಿಳೆಯ ಮೇಲುಗೈ”

ಬೆಂಗಳೂರು:
ಮೈತ್ರಿ ಸರ್ಕಾರದ ಪ್ರತಿಷ್ಟೆಯ ಪ್ರಶ್ನೆಯಾಗಿದ್ದ 5 ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೈತ್ರಿ ಸರ್ಕಾರ 4 ಕ್ಷೇತ್ರಗಳನ್ನು ತನ್ನ ವಶ ಮಾಡಿಕೊಳ್ಲುವುದರ ಮೂಲಕ ತನ್ನ ಶಕ್ತಿಯನ್ನು ಮತ್ತೆ ನಿರೂಪಿಸಿ ತಮ್ಮ ಶಕ್ತಿಯೇನು ಎಂಬುದನ್ನು ತಮ್ಮ ವಿರೋಧಿಗಳಿಗೆ ತೋರಿಸಿದೆ   
ಬಳ್ಳಾರಿಯನ್ನು ಬಿಜೆಪಿಯ ಭದ್ರಕೋಟೆ ಎಂದೇ ಬಿಂಣಬಿಸಲಾಗಿತ್ತಾದರು  ಕಾಂಗ್ರೆಸ್ ನ ಚಾಣಕ್ಯ ೆಂದೇ ಕರೆಯಲಾಗುವ ಡಿ ಕೆ ಶಿವಕುಮಾರ್ ಮಾಡಿದ ಪ್ರಚಾರ ತಂತ್ರಕ್ಕೆ ಬಿಜೆಪಿ ಬಳ್ಳಾರಿ ಧೂಳಾಗಿ ಹೋಗಿದೆ ಇದರಿಂದ ಕಾಂಗ್ರೇಸ್ ನ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ದಾಖಲೆ ರೀತಿಯಲ್ಲಿ 5,83,873  ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯಬೇರಿ ಬಾರಿಸಿಸುವ ಮೂಲಕ  ಬಿಜೆಪಿ ಕೋಟೆಯನ್ನು ಚಿಧ್ರಗೊಳಿಸಿದ್ದಾರೆ .
ಮಂಡ್ಯದಲ್ಲಿ  ಮೈತ್ರಿ ಸರ್ಕಾರದ ಅಭ್ಯರ್ಥಿ ಎಲ್. ಆರ್. ಶಿವರಾಮೇಗೌಡ 4,94,728 ಮತಗಳನ್ನು ಪಡೆದು  ಭರ್ಜರಿ ಗೆಲುವು ಸಾಧಿಸಿದ್ದು,  ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಸೋಲಿಗೆ ಶರಣಾಗಿದ್ದಾರೆ.
ಮಲೆನಾಡು ಶಿವಮೊಗ್ಗದಲ್ಲಿ  ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಭಾರಿ ಅಂತರದಲ್ಲಿ ಸೋಲಿಸಿ ಜಯಶಾಲಿಯಾಗಿದ್ದಾರೆ 
ರಾಮನಗರದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ, 1.25. 043 ಮತಗಳನ್ನು ಪಡೆದು  ಭರ್ಜರಿ ಗೆಲುವು ಸಾಧಿಸಿದರೆ, ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೊನೆಗೆ ಕಾಂಗ್ರೆಸ್ ಸೇರಿದ ಎಲ್. ಚಂದ್ರಶೇಖರ್ 13 ಸಾವಿರದ 249 ಮತಗಳನ್ನು ಪಡೆದು ಸೋಲಿಗೆ ಶರಣಾಗಿದ್ದಾರೆ.
ಜಮಖಂಡಿ ವಿಧಾನಸಭಾ  ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮೇಗೌಡ 97.013 ಮತಗಳನ್ನು ಪಡೆದು ಜಯಬೇರಿ ಬಾರಿಸಿದ್ದಾರೆ.  ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣೀ ಸೋಲಿಗೆ ಶರಣಾಗಿದ್ದಾರೆ.  ತಮ್ಮ ತಂದೆಯ ಕೆಲಸ ಹಾಗೂ ಅನುಕಂಪದ ಹಿನ್ನೆಲೆಯಲ್ಲಿ ತಾವು ಗೆಲುವು ಸಾಧಿಸಿರುವುದಾಗಿ ಆನಂದ್ ನ್ಯಾಮೇಗೌಡ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link