ರಮೇಶ್ ಅವರ ಆರೋಪ ಸತ್ಯಕ್ಕೆ ದೂರವಾಗಿವೆ : ಕೃಷ್ಣಾರೆಡ್ಡಿ

ಬೆಂಗಳೂರು

    ಸರ್ಕಾರಿ ಭೂಮಿಯನ್ನು ಕಬಳಿಸಲು ತಾವು ನೆರವು ನೀಡಿರುವ ಬಗ್ಗೆ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿರುವ ವಿಧಾನಸಭೆಯ ಉಪಸಭಾಧ್ಯಕ್ಷ ಕೃಷ್ಣರೆಡ್ಡಿ, ಆಧಾರ ರಹಿತ ಆರೋಪ ಮಾಡಿರುವ ಎನ್.ಆರ್.ರಮೇಶ್ ವಿರುದ್ಧ ಹಕ್ಕುಚ್ಯುತಿ ಮಂಡಿಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇನೆ ಎಂದರು.

     ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ತೆವಲಿಗಾಗಿ ಆಧಾರ ರಹಿತ ಆರೋಪ ಮಾಡಿದ್ದಾರೆ.ಆತ ಹುಚ್ಚ, ಈ ರೀತಿ ಮಂಗನಾಟ ಮಾಡುವವರನ್ನು ಬಿಜೆಪಿ ವಕ್ತಾರರನ್ನಾಗಿಸಿಕೊಂಡಿರುವುದು ಆಶ್ಚರ್ಯ ತಂದಿದೆ.ಈತನ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಿ, ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡುತ್ತೇನೆ ಎಂದರು.

     ನಗರದ ಭವಾನಿ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಯ ಕೆಲವರು 25-1-2019 ರಂದು ಅರ್ಜಿಗಳ ಸಲ್ಲಿಕೆಗೆ ಮನವಿ ಸಲ್ಲಿಸಿ ಬನಶಂಕರಿ 3ನೇ ಹಂತದ ಭವಾನಿ ಲೇಔಟ್‍ನಲ್ಲಿ ಮಹಾನಗರ ಪಾಲಿಕೆ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸ.ನಂ. 125 ಮತ್ತು 126 ರಲ್ಲಿ ಉದ್ಯಾನವನ ಮತ್ತು ಮೈದಾನ ಅಭಿವೃದ್ಧಿ ಮಾಡುತ್ತಿದೆ ಎಂದು ಹೇಳಿದರು.

      ಇದನ್ನು ತಾವು ಅಧ್ಯಕ್ಷರಾಗಿರುವ ಅರ್ಜಿ ಸಮಿತಿ ಪರಿಶೀಲಿಸಿ ಸರ್ಕಾರಕ್ಕೆ ಸೂಕ್ತ ಶಿಫಾರಸ್ಸು ಮಾಡುವಂತೆ ಹೇಳಲಾಗಿತ್ತು.ಆದರೆ ಇದುವರೆವಿಗೂ ಅರ್ಜಿ ಸಮಿತಿ ಇನ್ನು ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ಆದರೂ ಕಪೆÇೀಲ ಕಲ್ಪಿತವಾಗಿ ಸರ್ಕಾರಿ ಆಸ್ತಿಯ ಕಬಳಿಕೆಗೆ ನೆಲಗಳ್ಳರಿಗೆ ವಿಧಾನಸಭೆ ಉಪಸಭಾಧ್ಯಕ್ಷರು ಸಹಕಾರ ನೀಡುತ್ತಿದ್ದಾರೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ.ಇವರು ನೀಡಿರುವ ಮಾಹಿತಿಗಳು ಸರಿಯಲ್ಲ ಎಂದರು.

     ಸಾಂವಿಧಾನಿಕ ಹುದ್ದೆಯಲ್ಲಿರುವವರ ಮೇಲೆ ಆರೋಪ ಮಾಡುವಾಗ ಜವಾಬ್ದಾರಿಯಿಂದ ವರ್ತಿಸಬೇಕು.ಎನ್.ಆರ್.ರಮೇಶ್ ಅಜ್ಞಾನಿ, ಅಯೋಗ್ಯ ಎಂದು ಹೇಳಲೇಬೇಕಾಗುತ್ತದೆ ಎಂದರು.ಸರ್ಕಾರಿ ಆಸ್ತಿಯ ಕಬಳಿಕೆಗೆ ತಾವು ನೆರವು ನೀಡಿಲ್ಲ. ಅದರ ಬದಲು ಸರ್ಕಾರಿ ಆಸ್ತಿ ರಕ್ಷಣೆಗೆ ಬದ್ಧವಾಗಿ ಕೆಲಸ ಮಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

ಷಡ್ಯಂತ್ರ

     ಸಮ್ಮಿಶ್ರ ಸರ್ಕಾರ ಪತನವಾದ ನಂತರ ಉಪಸಭಾಧ್ಯಕ್ಷ ಹುದ್ದೆಯಲ್ಲಿರುವ ತಮ್ಮನ್ನು ಕೆಳಗಿಳಿಸಲು ರಾಜಕೀಯ ಷಡ್ಯಂತ್ರ ನಡೆದಿದೆ.ಸದ್ಯಕ್ಕಂತೂ ನನ್ನ ಹುದ್ದೆ ಸೇಫ್ ಆಗಿದೆ.ಮುಂದೆ ಸಮಯ ಸಂದರ್ಭ ನೋಡಿಕೊಂಡು ನಾನು ತೀರ್ಮಾನ ಕೈಗೊಳ್ಳುತ್ತೇನೆ ಎಂದರು.ಮುಂದಿನ ರಾಜಕೀಯ ಸಂದರ್ಭಗಳು ಏನಾಗುತ್ತವೋ ಗೊತ್ತಿಲ್ಲ. ಆಗ ಅಗತ್ಯವಿದ್ದರೆ ಹುದ್ದೆ ಬಿಟ್ಟುಕೊಡುವ ಸನ್ನಿವೇಶ ಸೃಷ್ಠಿಯಾದರೆ ಆ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಮಾಡುತ್ತೇನೆ. ಆದರೆ ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡುತ್ತಿರುವುದು ಸರಿಯಲ್ಲ ಎಂದರು.

ಪಕ್ಷದ ಪರ ಕೆಲಸ

     ಉಪಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡುತ್ತೇನೆ. ಪಕ್ಷ ನೀಡುವ ಜವಾಬ್ದಾರಿ ನಿಭಾಯಿಸುತ್ತೇನೆ. ಜೆಡಿಎಸ್ ಹೊಸಕೇಟೆ ಕ್ಷೇತ್ರ ಬಿಟ್ಟು ಉಳಿದ ಎಲ್ಲ 14 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಹಾಕಲಿದೆ.ಇಂದು ಅಥವಾ ನಾಳೆ ಎಲ್ಲ ಅಭ್ಯರ್ಥಿಗಳನ್ನು ಪಕ್ಷದ ವರಿಷ್ಠರು ಅಂತಿಮಗೊಳಿಸುವರು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap