ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ : ಶ್ರೀಗಳು

ಕುಣಿಗಲ್

        ನಾಡಪ್ರಭು ಕೆಂಪೆಗೌಡರು ನಿರ್ಮಿಸಿದ ಪರಂಪರೆಯ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಬೆಟ್ಟದ ತಪ್ಪಲಲ್ಲಿರುವ ಬೆಟ್ಟಹಳ್ಳಿ ಮಠದ ಶ್ರೀ ಉರಿಗದ್ದಿಗೇಶ್ವರ ಕ್ಷೇತ್ರದಲ್ಲಿ ಶ್ರೀ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಸ್ಮರಣಾರ್ಥ ಡಿ.3 ರಂದು ನೀಲಕಂಠಶ್ರೀ ಪ್ರಶಸ್ತಿ ಹಾಗೂ ಶ್ರೀಗುರುರಕ್ಷೆ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಶ್ರೀ ಚಂದ್ರಶೇಖರ ಶಿವಾಚಾರ್ಯಸ್ವಾಮೀಜಿ ತಿಳಿಸಿದರು.
ಅವರು ಪಟ್ಟಣದ ಅಟವಿಸ್ವಾಮಿ ದೇವಾಲಯದಲ್ಲಿ ಪತ್ರಿಕಾಗೋಷ್ಠಿನ್ನುದ್ದೇಶಿಸಿ ಶನಿವಾರ ಮಾತನಾಡುತ್ತ, ಇದೇ ಡಿಸೆಬರ್ 3ರ ಸೋಮವಾರ ಬೆಟ್ಟಹಳ್ಳಿ ಮಠದಲ್ಲಿ ಹಲವಾರು ಸಾಧಕರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದರು.

       ಸಾಂಪ್ರಾದಾಯಿಕವಾಗಿ ಪ್ರತಿ ವರ್ಷದಂತೆ ಕಾರ್ತಿಕಮಾಸದ ಡಿಸೆಂಬರ್ ಸೋಮವಾರ ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತರು ಸ್ಥಳೀಯ ಗ್ರಾಮದವರ ಜೊತೆ ಸೇರಿ ಲಕ್ಷದೀಪಗಳನ್ನು ಶ್ರೀ ಮಠದ ಅಂಗಳದಲ್ಲಿ ಬೆಳಗಿಸಲಿದ್ದು ಬಡವ-ಬಲ್ಲಿದ, ಜಾತಿ-ಧರ್ಮದ ಸೋಂಕಿಲ್ಲದೆ ಭಾಗವಹಿಸುವರು. ಶ್ರೀಮಠದಲ್ಲಿ ಗುರು ಉರಿಲಿಂಗೇಶ್ವರ ದೇವಾಲಯದ ಶಿಖರ ಗೋಪುರದ ಕಳಸ ಸ್ಥಾಪನೆ ಹಾಗೂ ಕುಂಭಾಭಿಷೇಕ ನಡೆಯಲಿದೆ. ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಮಾಗಡಿ, ಕನಕಪುರ, ಮಂಡ್ಯ, ತುಮಕೂರು, ಹಾಸನ ಸೇರಿದಂತೆ ಹಲವಾರು ಭಾಗಗಳಿಂದ ಬರುವ ಭಕ್ತರಿಗಾಗಿ ಸಾಂಸ್ಕತಿಕ ಕಾರ್ಯಕ್ರಮದ ಜೊತೆಗೆ ಕುಡಿಯುವ ನೀರು, ಪ್ರಸಾದ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲಾಗಿದೆ ಎಂದರು.

       ರಾಜಕಾರಣಿಗಳಲ್ಲಿ ನೈತಿಕತೆ ಮರೆಯಾಗುತ್ತಿದೆ. ಸಮಾಜಮುಖಿಯಾಗಿ ಕೆಲಸ ಮಾಡುವವರು ಬಹಳ ಕಡಿಮೆ. ಅತಿ ವೇಗವಾಗಿ ಬೆಳೆಯುತ್ತಿರುವ ದೇಶದಲ್ಲಿ ಮೂಲ ಸಮಸ್ಯೆಗಳನ್ನು ಅರಿತು ಉತ್ತಮ ಸಮಾಜ ಕಟ್ಟುವವರಿಗೆ ಜಾತಿ, ಮತ, ಪಕ್ಷಗಳನ್ನು ಮರೆತು ಮತ ನೀಡಿ. ಇಂದು ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ಬೇರು ಮಟ್ಟದಿಂದ ನಿಮೂರ್ಲನೆ ಮಾಡದ ಹೊರತು, ದೇಶ ಅಭಿವೃದ್ದಿ ಕಾಣಲು ಸಾಧ್ಯವಿಲ್ಲ ಎಂದು ಶ್ರೀ ಚಂದ್ರಶೇಖರ ಶಿವಾಚಾರ್ಯಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

       ದೇಶ ನಾಗರಿಕತೆ ಕಂಡಂತೆಲ್ಲ ರಾಜಕೀಯ ಕಲುಷಿತವಾಗುತ್ತಿದೆ. ಬಹುಪಾಲು ರಾಜಕಾರಣಿಗಳು ಭ್ರಷ್ಟರಾಗುತ್ತಿದ್ದಾರೆ. ಹಲವರು ಅಕ್ರಮವಾಗಿ ಆಸ್ತಿ ಗಳಿಸುವ ಪ್ರಯತ್ನದಲ್ಲಿದ್ದಾರೆ. ಇದನ್ನು ತಡೆಯಬೇಕಾದರೆ ಅಭ್ಯರ್ಥಿಗಳಿಂದ ಹಣ ಪಡೆದು ಭ್ರಷ್ಟಾಚಾರಕ್ಕೆ ಪ್ರೇರೇಪಿಸುವ ಮತದಾರರನ್ನು ತಡೆಯಬೇಕಾಗಿದೆ. ಅದಕ್ಕಾಗಿ ಸಂಘಸಂಸ್ಥೆಗಳು ಮತ್ತು ಪತ್ರಕರ್ತರು ಎಚ್ಚೆತ್ತುಕೊಂಡು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಅಂತಹ ಕಾರ್ಯಕ್ರಮ ರೂಪಿಸಿದರೆ ನಾನು ನಿಮ್ಮೊಟ್ಟಿಗೆ ಬರುತ್ತೇನೆ ಎಂದರು.

     ಈ ಸಂದರ್ಭದಲ್ಲಿ ಟೌನ್ ವೀರಶೈವ ಸಮಾಜದ ಅಧ್ಯಕ್ಷ ಕಿರಣ್‍ಬಾಬು, ಸೂಳೆಕುಪ್ಪೆ ಪಾಪಣ್ಣ, ಹಿರಿಯ ವೀರಶೈವ ಸಮಾಜದ ಮುಖಂಡ ಎಸ್.ಆರ್.ಚಂದ್ರಶೇಖರಪ್ಪ ಪಟ್ಟಣದ ಅಟವಿಸ್ವಾಮಿ ದೇವಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link