ಅಂಬೇಡ್ಕರ್ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ : ಪ್ರೋ. ಸಿ.ಕೆ.ಮಹೇಶ್

ಹಿರಿಯೂರು :

       ಬುದ್ಧ ಬಸವ ಅಂಬೇಡ್ಕರ್ ಈ ನಾಡು ಕಂಡ ಶ್ರೇಷ್ಠ ವಿಚಾರವಾದಿಗಳು. ಸಾಮಾಜಿಕ ಸಮಾನತೆಗಾಗಿ ಅವರುಗಳ ಹೋರಾಟ ಚಿರಸ್ಮರಣೀಯ ಈ ನಿಟ್ಟಿನಲ್ಲಿ ಇಂದಿನ ಯುವಜನತೆ ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಅಧ್ಯಯನ ಮಾಡಿ ಮೈಗೂಡಿಸಿಕೊಳ್ಳಬೇಕು. ಅವರ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತವಾಗಿವೆ ಎಂಬುದಾಗಿ ಪ್ರೊಫೆಸರ್ ಸಿ.ಕೆ.ಮಹೇಶ್ ಅಭಿಪ್ರಾಯಪಟ್ಟರು.

       ಹಿರಿಯೂರಿನ ಜ್ಞಾನ ಭಾರತಿ ಶಿಕ್ಷಣ ಮಹಾವಿದ್ಯಾಲಯದ ಈ ಮಾಸ ಮಾತುಕತೆ ಒಂದು ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

      ಈ ಸಮಾಜದಲ್ಲಿ ಶೋಷಿತರ ಪರವಾಗಿ ನೊಂದವರ ಪರವಾಗಿ ಅಂಬೇಡ್ಕರ್ ಧ್ವನಿಯಾಗಿದ್ದರು ಸರ್ವರಿಗೂ ಸಮಾನ ಹಕ್ಕುಗಳು ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ತಮ್ಮ ಅಗಾಧ ಪಾಂಡಿತ್ಯವನ್ನು ಬಳಸಿಕೊಂಡು ಶ್ರೇಷ್ಠ ಸಂವಿಧಾನ ರಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು ವಿಶೇಷವಾಗಿ ಮಹಿಳೆಯರ ಸಬಲೀಕರಣಕ್ಕಾಗಿ ಅವರ ಹಕ್ಕುಗಳಿಗಾಗಿ ವಿಶೇಷ ಮನ್ನಣೆ ನೀಡಿದರು ಸಾಮಾಜಿಕವಾಗಿ ಧಾರ್ಮಿಕವಾಗಿ ರಾಜಕೀಯವಾಗಿ ಮಹಿಳೆಯರಿಗೆ ಸಂವಿಧಾನದತ್ತವಾದ ಅಧಿಕಾರವನ್ನು ನೀಡಿದ್ದು ಗಮನಾರ್ಹವಾದ ಸಂಗತಿ ಎಂದರು.

       ಆರಂಭದಲ್ಲಿ ಆಶಯ ಭಾಷಣ ಮಾಡಿದ ಪ್ರಾಚಾರ್ಯ ಎಂ.ಧನಂಜಯ್ ಮಾತನಾಡಿ ಇಡೀ ಜಗತ್ತಿನಲ್ಲಿಯೇ ಮಿದುಳು ಮತ್ತು ಹೃದಯವನ್ನು ಏಕಾಗ್ರತೆಯಿಂದ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿದ್ದು ಬುದ್ಧ ಬಸವ ನಂತರ ಅಂಬೇಡ್ಕರರಿಗೆ ಮಾತ್ರ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡಿದ್ದರೂ ಸಾಮಾಜಿಕ ನ್ಯಾಯ ಹಾಗೂ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣದ ಸಂಕಲ್ಪ ಹೊಂದಿದ್ದರೂ ಪ್ರಸ್ತುತ ಸನ್ನಿವೇಶದಲ್ಲಿ ಅವರ ಆಶಯದಂತೆ ಸರಕಾರಗಳು ಆಳ್ವಿಕೆ ನಡೆಸುತ್ತಿಲ್ಲ ಎಂಬುದಾಗಿ ವಿಷಾದ ವ್ಯಕ್ತಪಡಿಸಿದರು.

       ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾಕ್ಟರ್.ವಿ.ಬಸವರಾಜ್ ರವರು ವಹಿಸಿದ್ದರು ಚಿತ್ರದುರ್ಗದ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾಕ್ಟರ್ ಸಂಜೀವ್ ಕುಮಾರ್, ಕನ್ನಡ ಪ್ರಾಧ್ಯಾಪಕ ಕುಮಾರ್ ಹಿರಿಯ ಉಪನ್ಯಾಸಕ ಎಂ.ಬಸವರಾಜ್, ರವಿಕುಮಾರ್, ನಂದೀಶ್, ನಾಗೇಶ್, ತನುಶ್ರೀಗದ್ದಿಗೆ ಮಠ, ದೊರೇಶ್, ಸತೀಶ್, ಜಗದೀಶ್, ಶಿವಪ್ರಸಾದ್ ಸೇರಿದಂತೆ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ಸವಿತಾ, ಪವಿತ್ರಾ ಪ್ರಾರ್ಥಿಸಿದರು, ಮಂಜುಳಾ ಸ್ವಾಗತಿಸಿ, ಕೊನೆಯಲ್ಲಿ ರಂಗಧಾಮ ವಂದಿಸಿದರು ಮರಿಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link