ಹರಪನಹಳ್ಳಿ
ದೇಶದಲ್ಲಿ ಬೇರೂರಿದ್ದ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಎಲ್ಲರನ್ನೂ ಒಗ್ಗೂಡಿಸಿಕೊಂಡು ಡಾ.ಅಂಬೇಡ್ಕರ ಶ್ರಮಿಸಿದರು ಎಂದು ಅಂಬೇಡ್ಕರ್ ಸಂಘದ ಅಧ್ಯಕ್ಷ ಎಸ್.ಭೀಮಪ್ಪ ಹೇಳಿದರು.
ಡಾ.ಬಾಬು ಜಗಜೀವನರಾಂ ಅವರ ಸಮುದಾಯ ಭವನದಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜಯಂತೋತ್ಸವ ಹಾಗೂ ಬಾಬು ಜಗಜೀವನರಾಂ ಅವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಾಮಾಜಿಕ ಸಮಾನತೆ, ಅಸ್ಪಶ್ಯತೆ ನಿವಾರಣೆಗಾಗಿ ಡಾ.ಬಿ.ಆರ್.ಅಂಬೇಡ್ಕರ ಜೀವನಪೂರ್ತಿ ಹೋರಾಟ ನಡೆಸಿದರು ಅವರ ಸಿದ್ದಾಂತಗಳನ್ನು ಅಳವಡಿಸಿಕೊಂಡು ಸಮಾನತೆಗೆ ಹೆಚ್ಚು ಒತ್ತು ನೀಡಬೇಕು.
ಅಗಾದವಾದ ಜ್ಞಾನ ಹೊಂದಿದ ಡಾ.ಅಂಬೇಡ್ಕರ ಅವರು ಸಂವಿಧಾನ ರಚನೆ ಬಹುಮುಖ್ಯ ಪಾತ್ರ ವಹಿಸಿದ್ದರು. ಸಮ ಸಮಾಜದ ಕಲ್ಪನೆ ಅವರ ಪ್ರಮುಖ ಸಿದ್ಧಾಂತವಾಗಿತ್ತು ಎಂದು ಹೇಳಿದರು.
ಕಾರ್ಯದರ್ಶಿ ಓ.ಮಾಂಹತೇಶ್ ಮಾತನಾಡಿ, ದೇಶದ ಹಸಿರು ಕ್ರಾಂತಿಯ ಅಭಿವೃದ್ಧಿಯ ಹರಿಕಾರು. ಅವರ ಸಾಮಾಜಿಕ ಕಳಕಳಿ ಎಲ್ಲರಿಗೂ ಸ್ಫೂರ್ತಿ ನೀಡುವಂತದ್ದು. ಅವರ ತತ್ವ ಆರ್ದಶಗಳನ್ನು ಈಗಿನ ಯುವ ಜನತೆ ಅಳವಡಿಸಿಕೊಂಡು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳು ಸಹಕಾರಿಯಾಗಲಿದೆ ಎಂದರು.
ಮುಖಂಡರಾದ ಗೌರಿಹಳ್ಳಿ ಮಂಜುನಾಥ, ಪುರಸಭೆ ಮಾಜಿ ಸದಸ್ಯ ಡಿ.ರಾಜಕುಮಾರ, ಎ.ನಿಂಗಪ್ಪ, ಕೆ.ಕುಬೇರಪ್ಪ, ಕುಂಚೂರು ವಿಶ್ವನಾಥ, ತಿಮ್ಮಲಾಪುರದ ನಾಗರಾಜ, ಬಾಗಳಿ ಸುಭಾಷ್, ಹೆಚ್.ಮಂಜುನಾಥ, ಜಿ.ವೆಂಕಟೇಶ್ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
