ಡಾ:ಬಿ.ಆರ್.ಅಂಬೇಡ್ಕರ್ ಮತ್ತು ಡಾ:ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮ

ಗುಬ್ಬಿ

         ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಸಾಮಾಜಿಕ ಸಮಾನತೆಯ ಜೊತೆಗೆ ಸಂವಿದಾನಾತ್ಮಕವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವಂತಹ ಮಹತ್ವದ ಚಿಂತನೆಯನ್ನು ಸಂವಿದಾನ ಶಿಲ್ಪಿ ಡಾ:ಬಿ.ಆರ್.ಅಂಬೇಡ್ಕರ್ ಮಾಡಿದ್ದರು ಪ್ರಸ್ತುತ ದಿನಗಳಲ್ಲಿ ಅವರ ಆದರ್ಶ ಮತ್ತು ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಢಿಸಿಕೊಂಡಾಗ ಸುಸಂಸ್ಕತ ಸಮಾಜ ನಿರ್ಮಾಣ ಸಾಧ್ಯ ಎಂದು ನ್ಯಾಯವಾದಿ ಪ್ರೊರವಿವರ್ಮಕುಮಾರ್ ತಿಳಿಸಿದರು

          ಪಟ್ಟಣದ ಖಾಸಗಿ ಹೋಟೆಲ್‍ನಲ್ಲಿ ವಿವಿಧ ದಲಿತ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ಡಾ:ಬಿ.ಆರ್.ಅಂಬೇಡ್ಕರ್ ಮತ್ತು ಡಾ:ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತದ ಸಂವಿದಾನಕ್ಕೆ ಮಹತ್ವದ ಸ್ಥಾನವಿದ್ದು ಅಂತಹ ಸಂವಿದಾನವನ್ನೆ ಬದಲಾಯಿಸುವ ಬಗ್ಗೆ ಮಾತನಾಡುತ್ತಿರುವವರ ಬಗ್ಗೆ ಎಚ್ಚರಿಕೆಯಿಂದಿರಬೇಕಾಗಿದೆ ಎಂದು ತಿಳಿಸಿದರು.

           ನಮ್ಮ ಕಾನೂನುಗಳನ್ನು ಹೇಗೆ ಬೇಕೋ ಹಾಗೆ ತಿದ್ದುಪಡಿ ಮಾಡುವ ಮೂಲಕ ಪುರೋಹಿತ ಶಾಹಿ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಮೋದಿ ಸರ್ಕಾರ ಮುಂದಾಗಿದೆ. ದಲಿತರು.ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರು ಎಲ್ಲಿಯವರೆಗೆ ಪುರೋಹಿತ ಶಾಹಿಯಿಂದ ಬಿಡುಗಡೆಯಾಗುವುದಿಲ್ಲವೋ ಅಲ್ಲಿಯವರೆಗೆ ಉದ್ದಾರವಾಗಲು ಸಾಧ್ಯವೆ ಇಲ್ಲ ಎಂದ ಅವರು

           ಕೇವಲ 48 ಗಂಟೆಗಳಲ್ಲಿ ಸಂವಿದಾನ ತಿದ್ದುಪಡಿ ಮಾಡಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ10 ಮೀಸಲಾತಿ ಎಂದು ಘೋಷಿಸಿದ್ದಾರೆ ಇದು ಆರ್.ಎಸ್.ಎಸ್ ನೇತೃತ್ವದ ಬ್ರಾಹ್ಮಣರನ್ನು ರಕ್ಷಿಸಿ ಬಹುಮುಖಿ ಸಮಾಜವನ್ನು ಒಡೆಯುವ ಕೆಲಸವಾಗಿದೆ ಈದೇಶದ ಕಾನೂನಿನ ವ್ಯವಸ್ಥೆಯನ್ನು ಬಲಾಢ್ಯರು ಅಧಿಕಾರದಲ್ಲಿಟ್ಟುಕೊಂಡು ಮೆರೆಯಲು ಕೊರಟಿದ್ದಾರೆ. ಚೌಕಿದಾರ್‍ರನ್ನು ಇಟ್ಟಿಕೊಳ್ಳುವವರು ಕಳ್ಳಸಂಪತ್ತನ್ನು ರಕ್ಷಿಸಿಕೊಳ್ಳುವ ಖದೀಮರು ದೇಶದ ರೈತರು ಚೌಕಿದಾರ್‍ನನ್ನು ಇಟ್ಟುಕೊಂಡಿಲ್ಲ ನಮ್ಮ ದೇಶದ ಚೌಕಿದಾರ್ ನರೇಂದ್ರಮೋದಿ, ಅಂಬಾನಿ, ಅದಾನಿ, ವಿಜಯಮಲ್ಯ, ನೀರವ್ ಮೋದಿಯಂತಹವರು ಗಳಿಸಿದ ಸಂಪತ್ತು ರಕ್ಷಿಸುವ ಚೌಕಿದಾರ್ ನರೇಂದ್ರಮೋದಿ ಆಢಳಿತದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

           ಮುಖಂಡ ಕೆ.ದೊರೈರಾಜು ಮಾತನಾಡಿ ಸಂವಿದಾನ ಶಿಲ್ಪಿ ಡಾ:ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕಾಟಾಚಾರಕ್ಕೆ ಆಚರಿಸಲಾಗುತ್ತಿದೆ ಇದಕ್ಕೆ ಚುನಾವಣಾ ಆಯೋಗವೆ ಹೊಣೆ ಈಚುನಾವಣೆ ಡಾ:ಬಿ.ಆರ್.ಅಂಬೇಡ್ಕರ್ ಜಯಂತಿಗೆ ಕುತ್ತು ತಂದಿದೆ ಭಾರತದ ಸಂವಿದಾನಕ್ಕೆ ಧಕ್ಕೆ ಬಂದಿರುವ ಕಾಲಘಟ್ಟದಲ್ಲಿ ಜಯಂತಿಯನ್ನು ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

         ಮನುವಾದಿಗಳು ಭಾರತದ ಸಂವಿದಾನವನ್ನೆ ಬದಲು ಮಾಡುವುದಾಗಿ ಹೇಳಿಕೆ ನೀಡುವುದರಲ್ಲಿ ಅರ್ಥವಿಲ್ಲ ಪ್ರಸ್ತುತ ಚುನಾವಣೆ ಸೈದ್ದಾಂತಿಕ ಸಂಘರ್ಷದ ಚುನಾವಣೆಯಾಗಿದೆ. ಮನುವಾದಿಗಳ ಕೈಗೆ ಅಧಿಕಾರ ಸಿಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಇಂತಹ ಸಂದರ್ಭದಲ್ಲಿ ದಲಿತರು. ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರು ಎಚ್ಚರಿಕೆಯಿಂದಿರುವುದು ಒಳ್ಳೆಯದು ಎಂದು ತಿಳಿಸಿದ ಅವರು ಡಾ:ಬಿ.ಆರ್.ಅಂಬೇಡ್ಕರ್ ಅವರ ತತ್ವಾಧರ್ಶಗಳನ್ನು ಪಾಲಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವತ್ತ ಮುಂದಾಗಬೇಕಿದೆ ಎಂದು ತಿಳಿಸಿದರು.

         ಕಾರ್ಯಕ್ರಮದಲ್ಲಿ ಮುಖಂಡರಾದ ಯೋಗಾನಂದಕುಮಾರ್, ವಕೀಲ ವೆಂಕಟೇಶ್, ಕೆ.ಸಿ.ಕೃಷ್ಣಮೂರ್ತಿ, ವಿ.ವೀರಭದ್ರಯ್ಯ, ಜಿ.ವಿ.ಮಂಜುನಾಥ್, ಜಿ.ಸಿ.ನಾಗರಾಜು, ತಿಮ್ಮೇಗೌಡ, ಮಾರುತಿಪ್ರಸಾದ್, ಸಲೀಂಪಾಷಾ, ಯೋಗೀಶ್ ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link