ಈ ಜಗತ್ತಿನಲ್ಲಿಯೇ ಬುದ್ಧ, ಬಸವರ ನಂತರದ ಸಾಧಕ ಎಂದರೇ ಡಾ. ಬಿ.ಆರ್.ಅಂಬೇಡ್ಕರ್

ಹಿರಿಯೂರು :

      ಈ ಜಗತ್ತಿನಲ್ಲಿಯೇ ಬದ್ದ-ಬಸವರ ನಂತರದ ಕಾಲಘಟ್ಟದಲ್ಲಿ ತಮ್ಮ ಮೆದುಳು ಮತ್ತು ಹೃದಯವನ್ನು ಏಕಾತ್ರೆಯಿಂದ ಹಿಡಿದಿಟ್ಟುಕೊಂಡ ಏಕೈಕ ಸಾಧಕ ಎಂದರೇ ಡಾ||ಬಿ.ಆರ್.ಅಂಬೇಡ್ಕರ್ ಎಂಬುದಾಗಿ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ.ಧನಂಜಯ ಹೇಳಿದರು.

      ನಗರದ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಈ ಮಾಸ ಮಾತು ಕತೆ ಒಂದು ಮುಕ್ತ ಸಂವಾದ’ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವಿಚಾರಧಾರೆಗಳ ಚಿಂತನ-ಮಂಥನ ವಿಷಯ ಕುರಿತು ಅವರು ಮಾತನಾಡಿದರು.

       ಈ ಸಮಾಜದಲ್ಲಿ ಸಾಮಾಜಿಕನ್ಯಾಯದ ಪರಿಕಲ್ಪನೆ ಮೂಲಕ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣದ ಸಂಕಲ್ಪವನ್ನು ಅಂಬೇಡ್ಕರ್ ಮಾಡಿದ್ದರು. ಪ್ರಸ್ತುತ ಸನ್ನಿವೇಶದಲ್ಲಿ ಅವರ ಆಶಯದಂತೆ ಸರ್ಕಾರಗಳು ಅಳ್ವಿಕೆ ನಡೆಸದಿರುವುದು ನಿಜಕ್ಕೂ ಬೇಸರದ ಸಂಗತಿ ಎಂಬುದಾಗಿ ಅವರು ಹೇಳಿದಲ್ಲದೆ, ಬಹುಸಂಸ್ಕøತಿಯ ನಮ್ಮ ದೇಶದಲ್ಲಿ ಹಲವು ಧರ್ಮೀಯರಿದ್ದು, ಅವರದ್ದೇ ಅದಂತಹ ಪ್ರತ್ಯೇಕ ಧರ್ಮಗ್ರಂಥಗಳನ್ನು ಹೊಂದಿದ್ದಾರೆ. ಆದರೆ ಎಲ್ಲ ಭಾರತೀಯರಿಗೂ ಇರುವ ಶ್ರೇಷ್ಠ ಗ್ರಂಥವೆಂದರೆ ಅಂಬೇಡ್ಕರ್ ರಚಿಸಿರುವ ಸಂವಿಧಾನ ಒಂದೇ ಎಂಬುದಾಗಿ ಅವರು ತಿಳಿಸಿದರು.

        ಪೋ.ಸಿ.ಕೆ.ಮಹೇಶ್ ಮಾತನಾಡಿ, ಬುದ್ಧ ಬಸವ ಅಂಬೇಡ್ಕರ್ ಈ ದೇಶ ಕಂಡಂತಹ ಶ್ರೇಷ್ಠ ವಿಚಾರವಾದಿಗಳು, ಸಮಾಜದಲ್ಲಿ ಸರ್ವರಿಗೂ ಸಾಮಾಜಿಕ ಸಮಾನತೆ ತರುವ ನಿಟ್ಟಿನಲ್ಲಿ ಅವರುಗಳ ಹೋರಾಟ ಚಿರಸ್ಮರಣೀಯ. ಆದ್ದರಿಂದ ಇಂದಿನ ಯುವಜನರು ಡಾ||ಬಿ.ಆರ್.ಅಂಬೇಡ್ಕರ್‍ರ ವಿಚಾರಧಾರೆಗಳನ್ನು ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.

      ಈ ಸಮಾರಂಭದ ಅಧ್ಯಕ್ಷತೆಯನ್ನು ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದ ಮುಖ್ಯಸ್ಥರಾದ ಡಾ.ವಿ.ಬಸವರಾಜ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ.ಸಂಜೀವ್ ಕುಮಾರ್, ಕನ್ನಡ ಪ್ರಾಧ್ಯಾಪಕ ಕುಮಾರ್, ಹಿರಿಯ ಉಪನ್ಯಾಸಕರಾದ ಎಂ.ಬಸವರಾಜ್, ರವಿಕುಮಾರ್, ನಂದೀಶ್, ನಾಗಶ್ರೀ, ತನುಶ್ರೀ, ಗದ್ದಿಗೆಮಠ, ದೊರೇಶ್, ಸತೀಶ್, ಜಗದೀಶ್, ಶಿವಪ್ರಸಾದ್ ಇತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಮಂಜುಳಾ ಸ್ವಾಗತಿಸಿ, ಮರಿಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ರಂಗಧಾಮ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link