ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘ ಸ್ಥಾಪನೆ

ತುರುವೇಕೆರೆ:

           ಜನಾಂಗದ ಹಿತದ್ಥಷ್ಟಿಯಿಂದ ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘ ಸ್ಥಾಪಿಸುತ್ತಿರುವುದಾಗಿ ಸಂಘದ ನೂತನ ಅಧ್ಯಕ್ಷರಾದ ಹಿರೇಡೋಂಕಿಹಳ್ಳಿ ರಾಮಯ್ಯ ತಿಳಿಸಿದರು.

        ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಪತ್ರಿಕಾ ಹೇಳಿಕೆ ಮಾತನಾಡುತ್ತಾ ತಾಲ್ಲೂಕು ಛಲವಾದಿ ಮಹಾಸಭಾ ವತಿಯಿಂದ ಈ ಸಂಘವನ್ನು ಪ್ರಾರಂಭಿಸಲಾಗುತ್ತಿದ್ದು, ಅಂಬೇಡ್ಕರ್ ಆಶ್ರಯ ಪೂರಕವಾಗಿ ಈ ಸಹಕಾರ ಸಂಘ ಅಸ್ತಿತ್ವಕ್ಕೆ ಬರಲಿದೆ. ಸ್ವಾವಲಂಬನೆಯ ಸ್ವಾಭಿಮಾನದ ಭಕ್ತಿಗೆ ಪ್ರೇರಣೆ ಆಗಿದ್ದು, ಅಂಬೇಡ್ಕರ್ ಹೇಳಿರುವ ಸ್ವಾಭಿಮಾನ ಇಲ್ಲದ ಬದುಕು ಜೀವಂತ ಶವವಿದ್ದಂತೆ ಎಂಬ ಸಂದೇಶವನ್ನು ಮನದಲ್ಲಿಟ್ಟುಕೊಂಡು ಪಾಲಿಸುವಂತೆ ಪ್ರಜ್ಞಾ ಪೂರ್ವಕವಾಗಿ ಬದುಕಿಗೆ ಸಹಕಾರಿಯಾಗುವಂತ ಅನುಕೂಲಗಳನ್ನು ಸಂವಿಧಾನ ಅಳವಡಿಸಿ ದುರ್ಬಲರಿಗೆ ಹಲವು ವಿಶೇಷ ಅನುಕೂಲಗಳನ್ನು ದೊರಕಿಸಿಕೊಟ್ಟಿದ್ದಾರೆ.

         ಇಂತಹ ಅನುಕೂಲಗಳನ್ನು ಪಡೆಯುವ ಉದ್ದೇಶದಿಂದ ಸಹಕಾರಿ ಸಂಘ ಅವರ ಹೆಸರಿನಲ್ಲಿ ಸಹಕಾರಿ ಸಂಘವನ್ನು ತೆರೆಯಲಿದ್ದು, ಈಗಾಗಲೇ ಸಹಕಾರಿ ಸಂಘಕ್ಕೆ ಸದಸ್ಯತ್ವದ ಅಭಿಯಾನವನ್ನು ಆರಂಭಿಸಲಾಗಿದೆ. ಈ ಸಹಕಾರಿ ಸಂಘದಲ್ಲಿ ಸದಸ್ಯರಾದವರಿಗೆ ವ್ಯಾಪಾರ ಸಣ್ಣಉದ್ಯಮಿ ಮಾಡಲು ವ್ಯಯಕ್ತಿಕ ಸಾಲ ಸ್ಥಿರಾಸ್ತಿಯ ಮೇಲೆ ಮನೆ ಕಟ್ಟಲು ಸಾಲ ಸೌಲಭ್ಯ ನೀಡಲಾಗುವುದು. ಸದಸ್ಯರಾದವರು ಮನೆ ಹೊಂದಿದಲ್ಲಿ ಮೃತರ ಸದಸ್ಯರ ನಾಮಿನಿ ನಿರ್ದೇಶಕರಿಗೆ ಧನ ಸಹಾಯ ನೀಡಲಾಗುವುದು .

       ಸರ್ಕಾರದ ವಿವಿಧ ಇಲಾಖೆಯ ದೊರೆಕುವ ಸೌಲಭ್ಯಗಳನ್ನು ದೊರಕಿಸಲಾಗುವುದು. ತಾಲ್ಲೂಕಿನಲ್ಲಿರುವ ಸಮಾಜದ ಬಂಧುಗಳು ಸದಸ್ಯತ್ವವನ್ನು ಪಡೆದುಕೊಳ್ಳಬೇಕೆಂದರು. ಸದಸ್ಯತ್ವ ಪಡೆಯಲು ಜಾತಿ ಪ್ರಮಾಣ ಪತ್ರ ಜೆರಾಕ್ಸ್, 3 ಭಾವಚಿತ್ರಗಳು, ಷೇರುಹಣರೂ.1250 ಹಣ ನೀಡಿ ಸಂಘದ ಸದಸ್ಯರಾಗಬೇಕೆಂದರು.’

         ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಹನುಮಂತಯ್ಯ, ಕಾರ್ಯಾಧ್ಯಕ್ಷ ಸೋಮಶೇಖರ್, ಉಪಾಧ್ಯಕ್ಷರಾದ ಶಂಕರಪ್ಪ, ನರಸಿಂಹಯ್ಯ, ಪ್ರದಾನ ಕಾರ್ಯದರ್ಶೀ ಮಹಾದೇವಯ್ಯ, ರಾಮಚಂದ್ರಯ್ಯ, ಖಜಾಂಚಿ ಲಕ್ಷ್ಮೀ ನರಸಿಂಹಯ್ಯ ನಿದೇರ್ಶಕರುಗಳಾದ ಕೃಷ್ಣಮೂರ್ತಿ ,ಲೋಕೇಶ್, ಅಜೆಯ್, ಕೇಶವ ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap