ಅಂಬಿಗರ ಚೌಡಯ್ಯರ ಜಯಂತೋತ್ಸವ

ತುರುವೇಕೆರೆ:

        ಅಂಬಿಕ ಚೌಡಯ್ಯ ಬಗ್ಗೆ ಇನ್ನೋಷ್ಟು ದೀರ್ಘ ಸಂಶೋಧನೆ ಅಗತ್ಯವಿದೆ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು.

       ಪಟ್ಟಣದ ಶ್ರೀ ಸತ್ಯಗಣಪತಿ ಆಸ್ತಾನ ಮಂಟಪದಲ್ಲಿ ತಾಲೂಕು ಆಡಳಿತ, ತಾಲೂಕು ಬೆಸ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ನಿಜ ಶರಣ ಅಂಬಿಗರ ಚೌಡಯ್ಯರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

        ಅಂಬಿಗ ಚೌಡಯ್ಯರಿಗೆ ಕಾಯಕ ನಿಷ್ಟೆ ತುಂಬ ಇತ್ತು ತನ್ನ ದೋಣಿಯಲ್ಲಿ ಜನರನ್ನು ಮಾತ್ರ ನದಿಯ ದಡದಿಂದ ದಡಕ್ಕೆ ಸಾಗಿಸುತ್ತಿರಲಿಲ್ಲ ತನ್ನ ವಚನಗಳ ಮೂಲಕ ಜನರನ್ನು ಜ್ಞಾನದ ದೀವಿಗೆಯನ್ನು ತಿಳಿಸಿಕೊಡುತ್ತಿದ್ದರು. 12 ನೇ ಶತಮಾನ ವಚನ ಯುಗದಲ್ಲಿ ಕಲ್ಯಾಣ ಕ್ರಾಂತಿ ಯುಗವಾಗಿತ್ತು. ಅಂದು ವಚನಗಳನ್ನು ಸಾಮಾನ್ಯರಿಗಾಗಿ ಸಾಮಾನ್ಯರೆ ಬರೆಯುತ್ತಿದ್ದರು. ಅಂದು 350 ವಚನಕಾರರು ವಚನ ಸಾಹಿತ್ಯವನ್ನು ಸಂಮೃದ್ದಗೊಳಿಸಿದ್ದಾರೆ. ಬಸವಣ್ಣ, ಅಕ್ಕ ಮಹದೇವಿಯಂತಹರು ಶಿಷ್ಟಚಾರದಲ್ಲಿ ವಚನಗಳನ್ನು ಬರೆಯುತ್ತಿದ್ದರೆ ಅಂಬಿಗ ಚೌಡಯ್ಯ ವಿಬಿನ್ನವಾಗಿ ನಿಷ್ಟುರ, ಕ್ರಾಂತಿಕಾರಿಯಾಗಿ ವಚನಗಳನ್ನು ಬರೆಯುತ್ತಿದ್ದರು ಎಂದು ತಿಳಿಸಿದರು.

         ತುಮುಲ್ ಜಿಲ್ಲಾಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಮಾತನಾಡಿ ಅಂಬಿಗ ಚೌಡಯ್ಯರ ಕೊಡುಗೆ ಸಾಮಾಜಕ್ಕೆ ಅಪಾರ. ಇಂದಿಗೂ ಸಮುದಾಯ ಪ್ರಾಮಾಣಿಕ, ನಿಷ್ಠೆಯನ್ನು ಉಳಿಸಿಕೊಂಡಿದ್ದಾರೆ. ತಮ್ಮ ಮಕ್ಕಳಿಗೆ ವಿದ್ಯಬ್ಯಾಸ ಕೊಡಿಸಿ ವಿದ್ಯವಂತರನ್ನಾಗಿ ಮಾಡಿರಿ ಎಂದು ಸಲಹೆ ನೀಡಿದರು.

          ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಲಚ್ಚಿಬಾಬು, ಉಪಾಧ್ಯಕ್ಷೆ ತಭಸುಮ್‍ಸುಲ್ತಾನ್, ತಾಲೂಕು ಪಂಚಾಯ್ತಿ ಸದಸ್ಯ ಬೈರಪ್ಪ, ತಹಶೀಲ್ದಾರ್ ನಯೀಂಉನ್ನಿಸಾ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೂಪಾಲಿ, ಗ್ರಾಮ ಪಂಚಾಯ್ತಿ ಸದಸ್ಯ ಜವರಪ್ಪ, ಬಿಜೆಪಿ ಅಧ್ಯಕ್ಷ ದುಂಡರೇಣಕಪ್ಪ, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ಯು.ಬಿ.ಸುರೇಶ್, ಬೆಸ್ತರ ಸಂಘದ ರಾಜ್ಯಾಧ್ಯಕ್ಷ ಮೌಲಾಲ, ಜಿಲ್ಲಾಧ್ಯಕ್ಷ ವಿಶ್ವನಾಥ್, ತಾಲೂಕು ಅಧ್ಯಕ್ಷ ಪಾಂಡು, ಸಮಾಜದ ಮುಖಂಡರಾದ ದಿವಾಕರ್, ಶಂಕರಪ್ಪ, ವಸಂತಕುಮಾರಿ, ಪದ್ಮ, ರವಿ, ಕೃಷ್ಣಪ್ಪ ಸೇರಿದಂತೆ ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap