ವಾಷಿಂಗ್ಟನ್:

ಉಗ್ರರ ನಿಗ್ರಹದಿಂದ ಆರ್ಥಿಕ ಹಿಂಜರಿತವಾಗುತ್ತಿದೆ ಎಂದು ಪಾಕ್ ಹೇಳಿದ ಬೆನ್ನಲೇ ವಿಶ್ವದ ಒಂದೋಂದೇ ರಾಷ್ಟ್ರಗಳು ಅದರೊಂದಿಗಿನ ಸಂಬಂಧಕ್ಕೆ ತೆರೆ ಎಳೆಯುತ್ತಿವೆ ಇದಕ್ಕೆ ವೇಗ ತುಂಬಿದ್ದು ಮಾತ್ರ ವಿಶ್ವದ ದೊಡ್ಡಣ್ಣ ಅಮೇರಿಕ . ಪಾಕಿಸ್ತಾನಕ್ಕೆ ತಾನು ನೀಡುತ್ತಿದ್ದ ರಕ್ಷಣಾ ಬೆಂಬಲವನ್ನು ಹಿಂತೆಗೆಯುವ ಮೂಲಕ ಪಾಕಿಸ್ತಾನಕ್ಕೆ ಆಘಾತ ನೀಡಿದೆ.

ಉಗ್ರವಾದದ ಯಾವುದೇ ಕಠಿಣ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ಸರ್ಕಾರ ನೀಡುತ್ತಿದ್ದ ಭದ್ರತಾ ನೆರವನ್ನು ಅಮೆರಿಕ ಸರ್ಕಾರ ಸ್ಥಗಿತಗೊಳಿಸಿದೆ.
ಪ್ರತೀ ವರ್ಷ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ನೀಡುತ್ತಿದ್ದ ಸಮಾರು 1.66 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ನೆರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಮರಿಕ ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ರಾಬ್ ಮ್ಯಾನಿಂಗ್ ಹೇಳಿದ್ದಾರೆ.
