ಬೆಂಗಳೂರು
ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನಾ, ಈ ಹಿಂದೆಯೇ ಆಕೆಯನ್ನು ಪೊಲೀಸರು ಬಂಧಿಸಿ, ಎಚ್ಚರಿಕೆ ನೀಡಿದ್ದ ಅಂಶ ಬೆಳಕಿಗೆ ಬಂದಿದೆ.
ಅಮೂಲ್ಯ ಲಿಯೋನಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಐಟಿ ತಂಡ ತನಿಖೆಯನ್ನು ಚುರುಗೊಳಿಸಿದೆ.
ಈ ಹಿಂದೆ ಯಾವಾಗಲಾದರೂ ಅಮೂಲ್ಯ ವಿರುದ್ಧ ಪೊಲೀಸರು ಕ್ರಮಕೈಗೊಂಡಿದ್ದರೇ, ಎಂಬುದನ್ನು ಪರಿಶೀಲಿಸುತ್ತಿದ್ದಾಗ, ಫೋಟೋ ಸಮೇತ ಮಾಹಿತಿವೊಂದು ಎಸ್ಐಟಿಗೆ ಲಭ್ಯವಾಗಿದೆ.
ಕಳೆದ ಜನವರಿ 7ರಂದು ವಿಧಾನಸೌಧದ ಎದುರುಗಡೆ ನೋ ಎನ್ ಆರ್ ಸಿ ಎಂಬ ಭಿತ್ತಿ ಪತ್ರ ಹಿಡಿದುಕೊಂಡು ಏಕಾಂಗಿಯಾಗಿ ಅಮೂಲ್ಯ ಪ್ರತಿಭಟನೆ ಮಾಡಿರುವ ಫೋಟೋ ಲಭ್ಯವಾಗಿದೆ.ನಿಯಮದ ಪ್ರಕಾರ , ವಿಧಾನ ಸೌಧ ಸುತ್ತಮುತ್ತ ಯಾರೂ ಪ್ರತಿಭಟನೆ ಅಥವಾ ಘೋಷಣೆ ಕೂಗುವಂತಿಲ್ಲ. ಆದರೆ, ಅಮೂಲ್ಯ ಲಿಯೋನ್ ನಿಷೇಧಿತ ಪ್ರದೇಶದಲ್ಲಿ ‘ನೋ ಎನ್ಆರ್ಸಿ’ ಎಂಬ ಬೋರ್ಡ್ ಹಿಡಿದು ವಿಧಾನ ಸೌಧದ ಮುಂದೆ ಧರಣಿ ಕುಳಿತಿದ್ದಳು.
ತಕ್ಷಣವೇ ಸ್ಥಳಕ್ಕೆ ಬಂದ ವಿಧಾನಸೌಧ ಪೊಲೀಸರು ಆಕೆಯನ್ನು ವಶಕ್ಕೆ ಪಡೆಯುವಾಗ ಪೊಲೀಸರ ಜೊತೆಗೆ ನೂಕಾಟ, ತಳ್ಳಾಟ ಮಾಡಿದ್ದಳು ತಿಳಿದು ಬಂದಿದೆ.ಠಾಣೆಗೆ ಕರೆತಂದಿದ್ದ ವಿಧಾನ ಸೌಧ ಪೊಲೀಸರು ಆಕೆಯನ್ನು ವಿಚಾರಣೆ ನಡೆಸಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು ಎಂದು ತಿಳಿದು ಬಂದಿದೆ.ಸದ್ಯ ಎಸ್ಐಟಿ ತಂಡ ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ