ಬೆಂಗಳೂರು:
ಕೆಲದಿನಗಳ ಹಿಂದೆ ಪಾಕ್ ಪರ ಘೋಷಣೆ ಕೂಗಿ ಬಂಧನಕ್ಕೊಳಗಾಗಿದ್ದ ಅಮೂಲ್ಯ ಅವರದ್ದು ವಿಶ್ವಮಾನವ ತತ್ವ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಸಿಎಎ ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನಾ ವಿಶ್ವಮಾನವ ತತ್ವ ಇಟ್ಟುಕೊಂಡಿದ್ದಾಳೆ. ಆ ಹೆಣ್ಣು ಮಗಳು ಏನೋ ಹೇಳುವುದಕ್ಕೆ ಹೊರಟ್ಟಿದ್ದಳೋ ಅವಳನ್ನು ತಡೆದಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಅಮೂಲ್ಯಳ ಹಳೆಯ ವಿಡಿಯೋಗಳನ್ನು ನೋಡಿದ್ದೇನೆ. ಅವಳದ್ದೆ ಆದ ತತ್ವವನ್ನು ಆಕೆ ಹೊಂದಿದ್ದಾಳೆ. ಆದರೆ ಅವಳ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಇದು ದೇಶದ ವಿಚಾರ. ನಮ್ಮ ದೇಶವನ್ನು ಅಗೌರವದಿಂದ ಕಾಣುವುದು. ಬೇರೆ ದೇಶದ ಪರವಾಗಿ ನಿಂತುಕೊಳ್ಳುವಂತದ್ದಲ್ಲ. ಯಾರು ಅದಕ್ಕೆ ಪ್ರೋತ್ಸಾಹ ಕೊಡಬಾರದು. ಆದರೆ ಕೆಲ ವಿಷಯಗಳ ಪರವಾಗಿ ಧ್ವನಿ ಎತ್ತುವುದನ್ನು ಮೊಟಕುಗೊಳಿಸಬಾರದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ