ರಾಷ್ಟ್ರ, ರಾಜ್ಯದ ಪ್ರಗತಿಗೆ ನಿರಂತರ ಶ್ರಮಿಸಿದ ಧೀಮಂತ ವ್ಯಕ್ತಿತ್ವದ ರಾಜಕಾರಣಿ ಅನಂತಕುಮಾರ್

ಚಳ್ಳಕೆರೆ

          ಭಾರತೀಯ ಜನತಾ ಪಕ್ಷದ ಪ್ರಭಾವಿ ಮುಖಂಡ, ಕೇಂದ್ರದ ರಾಸಾಯನಿಕ ಹಾಗೂ ಸಂಸದೀಯ ಖಾತೆ ಸಚಿವ ಎಚ್.ಎನ್.ಅನಂತಕುಮಾರ್ (59) ಸೋಮವಾರ ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅನಂತಕುಮಾರ್ ಚಿಕ್ಕವಯಸ್ಸಿನಲ್ಲೇ ಅತಿ ಹೆಚ್ಚಿನ ಜವಾಬ್ದಾರಿಯಿಂದ ರಾಜ್ಯ ಹಾಗೂ ರಾಷ್ಟ್ರದ ಪ್ರಗತಿಗೆ ಶ್ರಮಿಸಿದ ಧೀಮಂತನಾಯಕನೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಶಿವಪುತ್ರಪ್ಪ ತಿಳಿಸಿದರು.

          ಅವರು, ಸೋಮವಾರ ಇಲ್ಲಿನ ಪಕ್ಷದ ಕಾರ್ಯಾಲಯದಲ್ಲಿ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ದಿವಂಗತ ಎಚ್ . ಎನ್ . ಅನಂತಕುಮಾರ್‍ರವರ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. 1984ರಿಂದ ಎಬಿವಿಪಿ ರಾಜ್ಯ ಕಾರ್ಯದರ್ಶಿಯಾಗಿ ಸಾರ್ವಜನಿಕರ ಕ್ಷೇತ್ರದಲ್ಲೇ ಗುರುತಿಸಿಕೊಂಡ ಅನಂತಕುಮಾರ್ 1994ರಲ್ಲಿ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ 1998-99 ಹಾಗೂ 2014ರಲ್ಲಿ ವಾಜಪೇಯಿ ಮತ್ತು ನರೇಂದ್ರಮೋದಿಯವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ವಿವಿಧ ಖಾತೆಗಳಲ್ಲಿ ಯಶಸ್ಸಿಯಾಗಿ ನಿರ್ವಹಿಸಿದ ಕೀರ್ತಿ ಅವರದ್ದು. ಭಾರತೀಯ ಜನತಾ ಪಕ್ಷದ ಆದಮ್ಯ ಶಕ್ತಿಯಾಗಿದ್ದರು ಎಂದರು.

            ಹಿರಿಯ ಸಹಕಾರಿ ದುರೀಣ ಸಿ.ಬಿ.ಆದಿಭಾಸ್ಕರಶೆಟ್ಟಿ ಮಾತನಾಡಿ, ಬಿಜೆಪಿ ಎದುರಿಸುವ ಯಾವುದೇ ಚುನಾವಣೆ ಇರಲಿ, ಆ ಚುನಾವಣೆಯ ಮುಂಚೂಣಿ ನಾಯಕತ್ವವನ್ನು ಪಕ್ಷದ ಆದೇಶದ ಮೇರೆಗೆ ಒಪ್ಪಿಕೊಂಡ ನಂತರ ಪ್ರತಿಯೊಂದು ಹಂತದಲ್ಲೂ ಗೆಲುವಿಗಾಗಿ ಕಾರ್ಯನಿರ್ವಹಿಸುತ್ತಿದ್ದರು. ಅನಂತಕುಮಾರರ ವಿಶೇಷವೆಂದರೆ ವಿವಿಧ ಪಕ್ಷಗಳ ಮುಖಂಡರಲ್ಲಿಯೂ ಸಹ ಸ್ನೇಹ ಭಾವ ಹೊಂದಿದ್ದರು. ಎಂದಿಗೂ ಸಹ ಅನಗತ್ಯ ಟೀಕೆಗಳನ್ನು ಮಾಡುತ್ತಿರಲಿಲ್ಲ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದವರು. ಇವರ ನಿಧನದಿಂದ ಕೇವಲ ಬಿಜೆಪಿ ಅಲ್ಲದೆ ರಾಜ್ಯದ ಪ್ರಗತಿಗೂ ಸಹ ಹಿನ್ನಡೆ ಉಂಟಾಗುತ್ತದೆ. ಇವರ ಸಾವು ತುಂಬಲಾರದ ನಷ್ಟವೆಂದರು.

           ಶ್ರದ್ದಾಂಜಲಿ ಸಭೆಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಜೆಎಂಸಿ ವೀರೇಶ್, ಹಿರಿಯ ದುರೀಣ ಜೆ.ಕೆ.ವೀರಣ್ಣ, ಯುವ ಮೋರ್ಚಾ ಘಟಕದ ಅಧ್ಯಕ್ಷ ಮಾತೃಶ್ರೀ ಎನ್.ಮಂಜುನಾಥ, ತಾಲ್ಲೂಕು ಉಪಾಧ್ಯಕ್ಷ ಹೊಟ್ಟೆಪ್ಪನಹಳ್ಳಿ ಮಂಜುನಾಥ, ಸಂತೋಷ, ಕ್ಯಾತಪ್ಪ, ಚಿದಾನಂದ, ಈಶ್ವರನಾಯಕ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link