ದಾವಣಗೆರೆ:
ನಮ್ಮಲ್ಲಿರುವ ಅಜ್ಞಾನ, ಅಂಧಕಾರಗಳ ನಿರ್ಮೂಲನೆಗೆ ಭಾರತೀಯ ಮೂಲ ಭಾಷೆಯಾದ ಸಂಸ್ಕøತವನ್ನು ಪ್ರತಿಯೊಬ್ಬರು ಅಧ್ಯಯನ ಅತ್ಯವಶ್ಯವಾಗಿದೆ ಎಂದು ರಾಮಕೃಷ್ಣ ಮಿಷನ್‍ನ ಪರಮಪೂಜ್ಯ ಶ್ರೀಸ್ವಾಮಿ ತ್ಯಾಗೀಶ್ವರಾನಂದಜೀ ಅಭಿಪ್ರಾಯಪಟ್ಟರು.
ನಗರದ ನಿಟ್ಟುವಳ್ಳಿಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಸಂಸ್ಕೃತ ಭಾರತಿ, ಬೆಂಗಳೂರು ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಹತ್ತು ದಿನಗಳ ಸಂಸ್ಕೃತ ಪ್ರಬೋಧನವರ್ಗದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಂಸ್ಕøತ ಭಾಷೆಯ ಅಧ್ಯಯನದಿಂದ ನಮ್ಮಲ್ಲಿರುವ ಅಜ್ಞಾನ, ಅಂಧಕಾರಗಳು ದೂರವಾಗಲಿವೆ ಎಂದು ಹೇಳಿದರು.
ಮನಸ್ಸು ಮಾತಿಗೆ ನಿಲುಕದ ವಿಷಯ, ಮನಸ್ಸಿನ ನಿಗ್ರಹವನ್ನು ನಿರಂತರ ಸ್ವಾಧ್ಯಾಯಗಳಿಂದ ಪಡೆಯಬಹುದಾಗಿದೆ. ಭಾರತೀಯ ಷಡ್‍ದರ್ಶನಗಳು, ಭಗವದ್ಗೀತೆ, ರಾಮಾಯಣ, ಮಹಾಭಾರತ, ಆಗಮ ಶಾಸ್ತ್ರಗಳು ಸಂಸ್ಕøತ ಭಾಷೆಯಲ್ಲಿ ಲಭ್ಯ ಇವೆ. ನಾನ್ಯಾರು ಎಂದು ತಿಳಿದುಕೊಳ್ಳಲು ಸಂಸ್ಕೃತ ಭಾಷೆಯ ಸ್ವಧ್ಯಾಯವನ್ನು ಮಾಡಬೇಕು ಎಂದರು.
ಅನೇಕ ಮೂಲ ಸಂಸ್ಕøತ ಗ್ರಂಥಗಳಲ್ಲಿ ನಾವು ಮಾಡಬೇಕಾದ ಕರ್ತವ್ಯದ ಸುಳಿವು ಸಿಗುತ್ತದೆ. ಒಳ್ಳೆಯ ವಿಷಯ ಎಲ್ಲಿಂದ ಬಂದರೂ ಸ್ವೀಕರಿಸುವ ಮನೋಭಾವ ನಮ್ಮದಾಗಿರಬೇಕು. ಭಾಷೆಗಳು ನಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತವೆ. ಸಂಸ್ಕøತ ದೇವ ಭಾಷೆ ಎಂದು ತಿಳಿದಿದೆ. ಆದ್ದರಿಂದ ಸಂಸ್ಕøತವನ್ನು ಮಾತನಾಡುವುದರ ಮೂಲಕ ನಮ್ಮ ಪರಂಪರೆಯ ಭವ್ಯತೆಯನ್ನು ವೈಭವೀಕರಿಸೋಣ ಎಂದು ಕಿವಿಮಾತು ಹೇಳಿದರು.
ನವದೆಹಲಿಯ ಅಖಿಲ ಭಾರತ ಸಂಸ್ಕøತ ಸಂಘಟನಾ ಮಂತ್ರಿ ದಿನೇಶ್ ಕಾಮತ್ ಮಾತನಾಡಿ, ಹುಟ್ಟಿದ ಮಗುವಿಗೆ ನಾವು ನಾಮಕರಣವನ್ನು ಮಾಡುತ್ತೇವೆ. ಹೆಸರಿಗೆ ತಕ್ಕಂತೆ ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇವೆಯೋ ಎನ್ನುವುದು ಪ್ರಶ್ನಾರ್ಥಕವಾಗಿರಲಿದೆ. ವಯಸ್ಸು ಕಳೆದು ನಮ್ಮ ಹೆಸರಿನ ಅರ್ಥವನ್ನು ತಿಳಿದಿರುವುದಿಲ್ಲ. ಆದರೆ, ಎಲ್ಲರ ಹೆಸರಿನಲ್ಲಿಯೂ ಸಂಸ್ಕೃತ ಭಾಷೆಯ ಸೊಗಡಿದೆ ಎಂದು ಹೇಳಿದರು.
ಸಂಸ್ಕೃತ ಒಂದು ವಿಶ್ವ ಭಾಷೆ. ಭಾರತೀಯ ಜ್ಞಾನ ಪರಂಪರೆ ಜಗತ್ತಿನ ಯಾವ ದೇಶಗಳಲ್ಲಿಯೂ ಕಾಣಸಿಗುವುದಿಲ್ಲ. ಆದರೆ, ಸಂಸ್ಕøತ ಎಲ್ಲವನ್ನೂ ವಿಶ್ವಕ್ಕೆ ಕೊಟ್ಟಿದೆ. 45 ಲಕ್ಷ ತಾಳೇಗರಿ ಗ್ರಂಥ ಸಂಸ್ಕøತದಲ್ಲಿವೆ. ಸಂಸ್ಕøತ ಜನಮನ ಭಾಷೆಯಾಗಬೇಕಾದರೆ ನಮ್ಮ ಹೃದಯವು ವಿಕಾಸವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವರ್ತಕ ಆರ್.ಆರ್.ರಮೇಶ್‍ಬಾಬು, ರಾಷ್ಟ್ರೋತ್ಥಾನ ವಿದ್ಯಾಲಯದ ಕಾರ್ಯದರ್ಶಿ ಜಯಣ್ಣ ಹೆಚ್, ಶಿಬಿರಾಧಿಕಾರಿ ಮುರುಗೇಂದ್ರಪ್ಪ, ಸಂಸ್ಕೃತ ಭಾರತಿ ಪ್ರಾಂತ ಉಪಾಧ್ಯಕ್ಷ ಹನುಮಂತರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರಾರ್ಥಿ ದುರ್ಗಾಪ್ರಸಾದ್ ಪಾರ್ಥಿಸಿದರು. ಉತ್ತರ ಕರ್ನಾಟಕ ಪ್ರಾಂತ ಸಂಘಟನಾ ಮಂತ್ರಿ ಲಕ್ಷ್ಮೀನಾರಾಯಣ ಪ್ರಾಸ್ತಾವಿಕ ಮಾತನಾಡಿದರು. ದಕ್ಷಿಣ ಕರ್ನಾಟಕ ಪ್ರಾಂಥ ಸಂಘಟನಾ ಮಂತ್ರಿ ಡಾ. ಕುಮಾರ ಬಾಗೇವಾಡಿಮಠ ಸ್ವಾಗತಿಸಿದರು.
ಶಿಬಿರಾರ್ಥಿಗಳಾದ ಕಲ್ಪನಾ, ರೇಷ್ಮಾ, ಮೇಘ, ಪರಮೇಶ್ವರಪ್ಪ, ನೇತ್ರಾ ಇವರುಗಳು ಶಿಬಿರದ ಅನುಭವವನ್ನು ಹಂಚಿಕೊಂಡರು. ರೋಹಿಣಿ ಭಗಿನಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಕøತ ಶಿಕ್ಷಕ ಗಣಪತಿ ಜಿ.ಎಸ್. ವಂದಿಸಿದರು.
ಕೊನೆಯಲ್ಲಿ ‘ತಿಲಕಾಷ್ಟ ಮಹೀಷ ಬಂಧನಂ’ ಎಂಬ ಸಂಸ್ಕøತ ಕಿರುನಾಟಕವನ್ನು ಶಿಬಿರಾರ್ಥಿಗಳು ನಡೆಸಿಕೊಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ