ಅನಧಿಕೃತ ಹಂದಿ ಬೇಟೆಗಾರರ ಬಗ್ಗೆ ಮುಂಜಾಗೃತಾ ಕ್ರಮವಹಿಸಲು ಒತ್ತಾಯ

ಜಗಳೂರು:

       ಯುಗಾದಿ ಹಬ್ಬದದಂದು ಅನಧಿಕೃತವಾಗಿ ಕಾಡು ಹಂದಿ ಭೇಟೆ ಜೊತೆಗೆ ಇತರೆ ಪ್ರಾಣಿಗಳ ಭೇಟೆಯಾಡುವುದನ್ನು ಖಂಡಿಸಿ ಕರವೇ ಹಾಗೂ ಪ್ರಗತಿಪರ ಸಂಘಟನೆಗಳ ಪಧಾದಿಕಾರಿಗಳು ಗುರುವಾರ ಜಗಳೂರು ಪೋಲೀಸ್ ಠಾಣೆಗೆ ಆಗಮಿಸಿದ್ದ ಜಿಲ್ಲಾ ವರಿಷ್ಠಾಧಿಕಾರಿ ಚೆತನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

       ತಾಲೂಕಿನಲ್ಲಿ ಅರಣ್ಯ ಪ್ರದೇಶವೇ ಹೆಚ್ಚಾಗಿದ್ದು ಹಲವು ಪ್ರಾಣಿ ಸಂಕುಲಗಳ ತವರೂರಾಗಿದೆ.ಇಂದು ಮಾನವನ ಸ್ವಾರ್ಥಕ್ಕೆ ಪ್ರಾಣಿಗಳು ಅಳಿವಿನಂಚಿನಲ್ಲಿದ್ದು ಮನುಷ್ಯನ ಅತಿಯಾಸೆಯಿಂದ ಪರಿಸರ ನಾಶದ ಜೊತೆ ಕಾಡು ಹಂದಿ,ಕೊಂಡಕುರಿ,ಮೊಲ,ಸೇರಿದಂತೆ ಇತರೆ ಪ್ರಾಣಿಗಳನ್ನು ತನ್ನ ಆಹಾರಕ್ಕಾಗಿ ನಾಶಮಾಡುತ್ತಿದ್ದಾರೆ.

        ಅಂತರ್ಜಲದ ಕೊರತೆಯಿಂದ ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಪರಿಣಾಮವಾಗಿ ನದಿ ಹಳ್ಳ ಕೊಳ್ಳಗಳಲ್ಲಿನ ನೀರಿನ ತೇವಾಂಶವೂ ವಿಸ್ಮಯವಾಗಿದೆ ಅಲ್ಲದೇ ಪರಿಸರ ನಾಶದಿಂದ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ಆಹಾರ,ನೀರು ವಸತಿಗಾಗಿ ಸೂಕ್ತ ವಾತಾವರಣ ಮರೀಚಿಕೆಯಾಗಿದ್ದು ಕೆಲ ಪ್ರಾಣಿಗಳು ಜನವಸತಿ ಪ್ರದೇಶದೆಡೆಗೆ ಬೀಡುಬಿಟ್ಟಿವೆ ಇದನ್ನೆ ಸದುಪಯೋಗಮಾಡಿಕೊಂಡ ಕೆಲ ಭೇಟೆಗಾರರು ತಮ್ಮ ಆಹಾರಕ್ಕಾಗಿ ಪ್ರಾಣಿಭೇಟೆಯಾಡುತ್ತಿರುವುದನ್ನು ನಿಲ್ಲಿಸಬೇಕು.

          ಇದರಮಧ್ಯೆತಾಲೂಕಿನಪ್ರಮುಖಕಾಯ್ದಿರಿಸಿದಅರಣ್ಯಪ್ರದೇಶವಾದರಂಗಯ್ಯನದುರ್ಗ,ಗುರುಸಿದ್ದಾಪುರ,ಕೊಂಡಕುರಿ ಧಾಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಅಕ್ರಮ ಪ್ರವೇಶಮಾಡುವ ಮೂಲಕ ಕೊಂಡಕುರಿ,ಹಂದಿ ಸೇರಿದಂತೆ ಕೆಲ ಪಕ್ಷಿಗಳನ್ನು ಭೇಟೆಯಾಡಿ,ನಿಶ್ಚಿಂತವಾಗಿರುವ ಪ್ರಾಣಿಪಕ್ಷಿಗಳ ಸ್ವಚ್ಛಂದ ಬದುಕಿಗೆ ಹಾನಿಮಾಡುತ್ತಿರುವುದು ಸರಿಯಲ್ಲ ಇಂತಹ ಅಕ್ರಮ ಭೇಟೆಗಾರರ ವಿರುದ್ಧ ಮುಂಜಾಗೃತೆಯಿಂದ ಸೂಕ್ತ ಕ್ರಮವಹಿಸಬೇಕು. ಸಂಬಂಧಿಸಿದ ಅರಣ್ಯ ಇಲಾಖೆಯವರು ಕಾಯ್ದಿರಿಸದ ಅರಣ್ಯ ಪ್ರದೇಶದಲ್ಲಿ ವಾಸಮಾಡುತ್ತಿರುವ ಪ್ರಾಣಿಗಳಿಗೆ ಸೂಕ್ತ ಭದ್ರತೆ ಒದಗಿಸಿ ಸಂರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

        ಜಗಳೂರು ತಾಲೂಕಿನ ಸಂಬಂಧಿಸಿದ ಅರಣ್ಯ ಇಲಾಖೆಯವರಿಂದ ಮಾಹಿತಿ ಸಂಗ್ರಹಿಸಿ ಬೇಟೆಯಾಡುವುದು ಕಂಡುಬಂದರೆ ಅಂತಹವರ ವಿರುದ್ದ ನಿರ್ದಾಕ್ಷೀಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮನವಿ ಸ್ವೀಕರಿಸಿ ಪೊಲೀಸ್ ವರಿಷ್ಠಾದಿಕಾರಿ ಚೇತನ್ ಕುಮಾರ್ ಎಚ್ಚರಿಕೆ ನೀಡಿದರು.

         ಈ ಸಂದರ್ಭದಲ್ಲಿ ಕರವೇ ಸಂಘಟನೆಯ ತಾ.ಅಧ್ಯಕ್ಷ ಮಹಾಂತೇಶ ಉಪಾಧ್ಯಕ್ಷ ಜಗದೀಶ್ ಗೌರವಾಧ್ಯಾಕ್ಷ ಸುರೇಶ ಸಂಗೊಳ್ಳಿ ಪದಾಧಿಕಾರಿಗಳಾದ ಕಲ್ಲೇಶ್, ತಿಪ್ಪಮ್ಮ, ಲಿಂಗರಾಜ್, ರಘುಧಮಾನಿ, ವಕೀಲ ಆರ್ ಓಬಳೇಶ್, ಹಫೀಜ್, ದಲಿತ ಮುಖಂಡ ನಾಗಲಿಂಗಪ್ಪ ಸೇರಿದಂತೆ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap