ಹುಳಿಯಾರು:
ಹುಳಿಯಾರು ಹೋಬಳಿಯ ಹೊಯ್ಸಲಕಟ್ಟೆ ಅಂಗನವಾಡಿ ಕಾರ್ಯಕರ್ತೆ ಬಿ.ಲಕ್ಷ್ಮಮ್ಮ (49) ಅವರು ಗುರುವಾರ ನಿಧನರಾದರು.
ಹೊಯ್ಸಲಕಟ್ಟೆ ಸಮೀಪದ ಬೋರನಕಣಿವೆ ಗ್ರಾಮದಲ್ಲಿ ವಾಸವಿದ್ದ ಮೃತರಿಗೆ ಬಹುಅಂಗಾಂಗ ವೈಪಲ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಕಲಾರಿಯಾಗದೆ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಮೃತರು 29 ವರ್ಷಗಳ ಕಾಲ ಹೊಯ್ಸಲಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತಿ ತಾಯಿ, ತಮ್ಮಂದಿರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ತಾಯಿಯ ತೋಟದಲ್ಲಿ ಜರುಗಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








