ಕೆಂಕೆರೆ : ಅಂಗನವಾಡಿ ಕಟ್ಟಡಕ್ಕೆ ಬೇಕಿದೆ ಕಾಯಕಲ್ಪ

ಹುಳಿಯಾರು:

   ಹುಳಿಯಾರು ಸಮೀಪದ ಕೆಂಕೆರೆ ಗ್ರಾಮದಲ್ಲಿ ನಿರ್ಮಿಸುತ್ತಿರುವ ಹೊಸ ಅಂಗನವಾಡಿ ಕಟ್ಟಡವು ಅರ್ಧಕ್ಕೆ ನಿಂತಿದ್ದು ಈಗ ಹಾಲಿ ಅಂಗನವಾಡಿಯು ಸರ್ಕಾರಿ ಶಾಲೆಯ ಕಟ್ಟಡದಲ್ಲಿ ನಡೆಯುತ್ತಿದ್ದು, ಸದರಿ ಹೊಸ ಕಟ್ಟಡವು ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಸಾರ್ವಜನಿಕರು ಹಾಗೂ ಅಂಗನವಾಡಿ ಮಕ್ಕಳು ಕಾಯುವಂತಾಗಿದೆ.

  ಸದರಿ ಅಂಗನವಾಡಿ ಕಟ್ಟಡದ ಕಾಮಗಾರಿಯು ಸುಮಾರು ಆರೇಳು ತಿಂಗಳುಗಳಿಂದ ನಡೆಯುತ್ತಿದ್ದು ಇತ್ತಿಚೆಗಷ್ಟೆ ಕಟ್ಟಡದ ಕಾಮಗಾರಿಯು ಸ್ಥಗಿತಗೊಂಡಿದೆ. ಅಲ್ಲದೆ ಕೆಂಕೆರೆ ಗ್ರಾಮದಲ್ಲಿರುವ ಗ್ರಂಥಾಲಯ ಕಟ್ಟಡವು ಪಾಳು ಬಿದ್ದಿದ್ದು, ಮಳೆಗೆ ಸೋರುವಂತಾಗಿದೆ. ಈ ಕಟ್ಟಡದ ಮುಂಭಾಗದಲ್ಲಿ ಎಮ್ಮೆ ದನಕರುಗಳನ್ನು ಕಟ್ಟುತ್ತಿದ್ದು, ಯಾರು ಕೇಳದಂತಾಗಿದೆ.

   ಈ ಗ್ರಂಥಾಲಯ ಕಟ್ಟಡವನ್ನೆ ರಿಪೇರಿ ಮಾಡಿಸಿ ಅಂಗನವಾಡಿಯನ್ನಾಗಿ ಪರಿವರ್ತಿಸಬಹುದು, ಇದಕ್ಕೆ ಯಾವುದೇ ಜನಪ್ರತಿನಿಧಿಗಳಾಗಲಿ, ಸ್ಥಳೀಯ ಪಂಚಾಯಿತಿಯವರಾಗಲಿ ಗಮನ ಹರಿಸದೆ ನಿರ್ಲಕ್ಷ್ಯಿಸಿದ್ದಾರೆ. ಸುಮಾರು ವರ್ಷಗಳಿಂದ ದುರಸ್ತಿ ಕಾಣದಾಗಿದ್ದ ಅಂಗನವಾಡಿ ಕಟ್ಟಡಕ್ಕೆ ಸಚಿವರಾದ ಮಾಧುಸ್ವಾಮಿ ಅವರೇ ಖುದ್ದು ಆಸಕ್ತಿ ವಹಿಸಿ ಹೊಸ ಅಂಗನವಾಡಿ ನಿರ್ಮಾಣಕ್ಕೆ ಭೂಮಿ ಪ್ರಜೆ ಮಾಡಿ ಹೋಗಿದ್ದರು. ಆದರೆ ಸಚಿವರ ಸೂಚನೆ ಮೇರೆಗೆ ನಡೆಯುತ್ತಿರುವ ಕಾಮಗಾರಿಯೇ ಸ್ಥಗಿತಗೊಂಡಿದ್ದು ಟೀಕೆಗೆ ಗುರಿಯಾಗಿದೆ.

   ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಅಂಗನವಾಡಿ ಕಟ್ಟಡದ ಕಾಮಗಾರಿಗೆ ಚುರುಕು ಮುಟ್ಟಿಸಿ ಶೀರ್ಘ ಕಾಮಗಾರಿ ಮುಗಿಸಿ ಸಚಿವರಿಂದಲೇ ಉದ್ಘಾಟನೆ ಮಾಡಿಸಿ ಪುಟ್ಟಾಣಿ ಮಕ್ಕಳ ಪೂವರ್ಚ ಪ್ರಾಥಮಿಕ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap