ಎಂ ಎನ್ ಕೋಟೆ
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಯಕ್ಕಲ್ಲಕಟ್ಟೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಆಂಜನೇಯಸ್ವಾಮಿಯ ಬ್ರಹ್ಮ ರಥೋತ್ಸವವು ಭಾನುವಾರ ಸಾವಿರಾರು ಭಕ್ತರ ನಡುವೆ ವೈಭವದಿಂದ ನಡೆಯಿತು.
ಬೆಳಗ್ಗೆಯಿಂದ ದೇವಾಲಯದಲ್ಲಿ ಸ್ವಾಮಿಯವರಿಗೆ ಅಭಿಷೇಕ, ಸುಪ್ರಭಾತಸೇವೆ, ಪಂಚಾಮೃತ ಸೇವೆ ನಡೆದು, ಮಧ್ಯಾಹ್ನ 1 ಗಂಟೆಗೆ ಸ್ವಾಮಿಯ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ನಡುವೆ ನಡೆಯಿತು. ಸುಡು ಬಿಸಿಲು ಲೆಕ್ಕಿಸದೆ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತರು ಜಯ ಘೋಷಗಳನ್ನು ಕೂಗುತ್ತ ರಥವನ್ನು ಎಳೆದರು.
ಬರುವ ಭಕ್ತರಿಗೆ ಅಲ್ಲಲ್ಲಿ ಕೊಪ್ಪಲುಗಳನ್ನು ನಿರ್ಮಿಸಿ ಪಾನಕ ಫಲಾಹಾರವನ್ನು ವಿತರಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ಸ್ವಾಮಿಯ ದರ್ಶನ ಪಡೆದರು. ಯಾವುದೇ ಅಹಿತರ ಘಟನೆ ನಡೆಯದಂತೆ ಚೇಳೂರು ಪಿಎಸ್ಐ ವಿಜಯ್ ಕುಮಾರ್ ಹಾಗೂ ಅವರ ಸಿಬ್ಬಂದಿ ಸೂಕ್ತ ಬಂದೂಬಸ್ತ್ ವಹಿಸಿದ್ದರು. ಭಕ್ತಾದಿಗಳಿಗೆ ದಾಸೋಹ ಏರ್ಪಡಿಸಲಾಗಿತ್ತು.ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಿತ್ರಲಿಂಗಯ್ಯ, ಗುಡಿಗೌಡ ಗೌಡಯ್ಯ, ಪ್ರಧಾನ ಅರ್ಚಕ ರಾಧಾಕೃಷ್ಠ,ಶಿವಲಿಂಗಯ್ಯ ಹಾಗೂ ಭಕ್ತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ