ಹರಪ್ಪನಹಳ್ಳಿ
ಕೊಟ್ಟೂರು ಗುರು ಬಸವೇಶ್ವರ ರಥೋತ್ಸವಕ್ಕೆ ಪಾದ ಯಾತ್ರೆ ಹೊರಟಿರುವ ಭಕ್ತಾದಿಗಳಿಗೆ ಪಟ್ಟಣದ ತೆಗ್ಗಿನಮoದ ಚಂದ್ರಮೌಳೀಶ್ವರ ಸಭಾ ಭವನದಲ್ಲಿ ಮಂಗಳವಾರ ಸ್ಥಳೀಯ ಬಿಎಸ್ ಎನ್ ಎಲ್ ಉದ್ಯೋಗಿ ಕೆ.ಆರ್ .ಸುಧಾಕರ ಅವರು ಅನ್ನ ಸಂತರ್ಪಣೆ ಆಯೋಜಿಸಿದ್ದರು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಇಲ್ಲಿಯ ತೆಗ್ಗಿನಮಠದ ಷ.ಬ್ರ. ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಅವರು ಇಂದಿನ ಒತ್ತಡದ ಜೀವನದಲ್ಲಿ ಭಕ್ತಿಯ ಮಾರ್ಗದಲ್ಲಿ ನಡೆದರೆ ಶಾಂತಿ ನೆಮ್ಮದಿ ದೊರಕುತ್ತದೆ, ಧರ್ಮದ ತಳಹದಿಯಲ್ಲಿ ಜೀವನ ಸಾಗಿಸಬೇಕು ಎಂದರು.
ರಾಗ, ದ್ವೇಷಗಳನ್ನು ತೊರೆದು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡರೆ ಕೊಟ್ಟೂರು ಗುರು ಬಸವೇಶ್ವರರ ಆಶೀರ್ವಾದ ಸದಾ ಇರುತ್ತದೆ ಎಂದು ಹೇಳಿದರು.ತೆಗ್ಗಿನಮಠ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ ನವರು ಮಾತನಾಡಿ ಪ್ರತಿ ವರ್ಷ ಕೊಟ್ಟೂರು ರಥೋತ್ಸವಕ್ಕೆ ತೆರಳುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ಜನರು ಧರ್ಮದ ಮೇಲೆ ಇಟ್ಟಿರುವ ನಂಬಿಕೆ ಹೆಚ್ಚುತ್ತಿದೆ ಎಂಬುದನ್ನು ತೋರಿಸುತ್ತದೆ, ಭಕ್ತರು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಹಾವೇರಿ ಜಿಲ್ಲೆಯ ಹೊಸರಿತ್ತಿ, ಅತ್ತಿಗೇರಿ, ಮೇಡ್ಲೇರಿ, ಮೇಲ್ಮುರಿ, ಹಿರೇಮುಗದೂರು, ಹಂದಿಗನೂರು ಮುಂತಾದ ದೂರದ ಗ್ರಾಮಗಳಿಂದ ಭಕ್ತರು ಕೊಟ್ಟೂರಿಗೆ ಪಾದ ಯಾತ್ರೆ ಹೊರಟಿದ್ದು, ಮಾರ್ಗ ಮದ್ಯೆ ಇಲ್ಲಿ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಅನ್ನ ಸಂತರ್ಪಣೆಯ ದಾನಿಗಳಾದ ಕೆ.ಆರ್ .ಸುಧಾಕರ, ಪತ್ನಿ ಕೆ.ಎಸ. ಮಂಜುಳಾ, ಪುತ್ರರಾದ ಪ್ರದೀಪ, ಸಂದೀಪ, ವಕೀಲ ಗಂಗಾಧರ ಗುರುಮಠ, ವೀರಭದ್ರಯ್ಯ, ಟಿ.ಎಂ.ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
