ಹರಿಹರ;
ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ್ ಶ್ರೀಗಳ ಸ್ಮರಣೆ ನಿಮಿತ್ತ ವಕೀಲರು ಸಂಘ ಹಾಗೂ ನ್ಯಾಯಾಲಗಳ ಸಿಬ್ಬಂದಿ ವರ್ಗದಿಂದ ಅನ್ನದಾಸೋಹ ನಡೆಸಲಾಯಿತು. ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಸೋಮವಾರ ಲಿಂಗೈಕ್ಯ ಶ್ರೀಗಳ ಭಾವಚಿತ್ರಕ್ಕೆ ವಕೀಲರು ಹಾಗೂ ನ್ಯಾಯಾಲಗಳ ಸಿಬ್ಬಂದಿ ಪುಷ್ಪಾರ್ಚನೆ ಮಾಡಿದರು. ನಂತರ ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಹಲವಾಗಲು ಮಾತನಾಡಿ, ನಾಡಿನಲ್ಲಿ ತ್ರಿವಿಧ ದಾಸೋಹದ ಕ್ರಾಂತಿಗೆ ಲಿಂಗೈಕ್ಯ ಶ್ರೀಗಳ ಕಾಣಿಕೆ ಅಪಾರವಾಗಿದೆ.
ಅಂತಹ ಮಹಾನ್ ಗುರುವಿನ ಸ್ಮರಣೆ ಮಾಡುವ ಕೆಲಸವನ್ನು ಸಂಘದಿಂದ ಕೈಗೊಳ್ಳಲಾಗಿದೆ. ಪುಷ್ಪಾರ್ಚನೆ ಮಾಡುವುದರ ಜೊತೆಗೆ ಅನ್ನ ದಾಸೋಹವನ್ನು ವ್ಯವಸ್ಥೆ ಮಾಡಲಾಗಿದೆ. ನ್ಯಾಯಾಲಯಕ್ಕೆ ಆಗಮಿಸಿದ್ದ ಕಕ್ಷಿದಾರರು, ಸಾರ್ವಜನಿಕರಿಗೆ ಅನುಕೂಲವಾಗಿದೆ. ಈ ಮೂಲಕ ಮಹಾತ್ಮರ ಮೌಲ್ಯಗಳನ್ನು ಪ್ರಚಾರಪಡಿಸಲಾಗಿದೆ ಎಂದರು.ಸಂಘದ ಉಪಾಧ್ಯಕ್ಷೆ ಶುಭಾ ಕೆ.ಎಸ್., ಕಾರ್ಯದರ್ಶಿ ಎಚ್.ಎಚ್.ಲಿಂಗರಾಜ್, ಪದಾಧಿಕಾರಿಗಳಾದ ಸುರೇಶ್ ಕುಮಾರ್ ವೈ., ರಾಘವೇಂದ್ರ, ಪರಶುರಾಮ ಅಂಬೇಕರ್, ಆಂಜನೇಯ ಕಡೇಮನಿ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








