ಬೆಂಗಳೂರು
ಯಲಹಂಕದ ವಾಯುನೆಲೆ ಬಳಿ ಸೂರ್ಯಕಿರಣ್ ಜೆಟ್ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಮತ್ತೊಂದು ಬ್ಲ್ಯಾಕ್ ಬಾಕ್ಸ್ಪತ್ತೆಯಾಗಿದ್ದು ಅದನ್ನು ವಾಯುಪಡೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿದ್ದಾರೆ.
2019ರ ಏರ್ ಶೋ ತಾಲೀಮು ವೇಳೆ ಸೂರ್ಯ ಕಿರಣ್ವಿಮಾನ ನಿನ್ನೆ ಅಪಘಾತಕ್ಕೀಡಾಗಿತ್ತು. ಈ ವೇಳೆ ಓರ್ವ ಪೈಲಟ್ ಸಾವನ್ನಪ್ಪಿದ್ದರು ಹಾಗೂ ಇಬ್ಬರು ಗಾಯಗೊಂಡಿದ್ದು ಪ್ರಕರಣದ ತನಿಖೆ ನಡೆಸುತ್ತಿರುವ ವಾಯುಪಡೆ ಅಧಿಕಾರಿಗಳಿಗೆ ಮತ್ತೊಂದು ಬ್ಲ್ಯಾಕ್ ಬಾಕ್ಸ್ಪತ್ತೆಯಾಗಿದೆ.
ವಿಮಾನಗಳು ಪತನಗೊಂಡ ಪ್ರದೇಶ ಸುಟ್ಟು ಕರಕಲಾದ ಹಿನ್ನೆಲೆ ಸೂರ್ಯ ಕಿರಣದ ಮತ್ತೊಂದು ಬ್ಲ್ಯಾಕ್ ಬಾಕ್ಸ್ ತನಿಖಾ ತಂಡಕ್ಕೆ ಸಿಕ್ಕಿರಲಿಲ್ಲ ಪರಿಶೀಲನೆ ನಂತರ ಬ್ಲ್ಯಾಕ್ ಬಾಕ್ಸ್ನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








