ಆಂಬಿಡೆಂಟ್ ಕೇಸ್ ಮಾದರಿಯಲ್ಲಿ ಮತ್ತೊಂದು ವಂಚನೆ

ಬೆಂಗಳೂರು

         ಆಂಬಿಡೆಂಟ್ ಕೇಸ್ ಮಾದರಿಯಲ್ಲಿ ಮತ್ತೊಂದು ವಂಚನೆ ಬಯಲಾಗಿದ್ದು, ಅಜ್ಮೀರಾ ಗ್ರೂಪ್ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

         ಪ್ರಕರಣದ ಸಂಬಂಧ ಅಜ್ಮೀರಾ ವ್ಯವಸ್ಥಾಪಕ ನಿರ್ದೇಶಕ ತಬ್ರೇಜ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ತಬ್ರೇಜ್ ಸುಮಾರು 400 ಕೋಟಿ ರೂ. ವಂಚನೆ ಮಾಡಿದ್ದು,ವಂಚನೆಯ ಹಣದಲ್ಲಿ ಚಿನ್ನಾಭರಣ ಮಾಡಿಸಿ ಪತ್ನಿಯ ಮೈಮೇಲೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.

          ಆರೋಪಿ ತಬ್ರೇಜ್ ವಿಚಾರಣೆಯಲ್ಲಿ ವಂಚನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಎಲ್ಲವನ್ನು ವಾಪಸ್ ಕೊಡುವುದಾಗಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.

           ಈ ಹಿಂದೆ ಆಂಬಿಡೆಂಬ್ ಡೀಲ್ ಪ್ರಕರಣ ನಡೆದಾಗ ಇದೇ ರೀತಿಯಲ್ಲಿ ಅನೇಕ ಕಂಪನಿಗಳು ವಂಚನೆ ಮಾಡುತ್ತಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಲಭ್ಯವಾಗಿತ್ತು. ಅದರಲ್ಲಿ ಪ್ರಮುಖವಾಗಿ ಅಜ್ಮೀರಾ ಗ್ರೂಪ್ ಕಂಪನಿ ನೂರಾರು ಕೋಟಿ ಹಗರಣ ಮಾಡಿರುವುದಾಗಿ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಂಬಿಡೆಂಡ್ ಕೇಸ್ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಬಳಿಕ ಸಿಸಿಬಿ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

         ಸಿಸಿಬಿ ಪೊಲೀಸರು ಅಜ್ಮೀರಾ ಕಂಪನಿಯ ಬಗ್ಗೆ ತನಿಖೆ ಮಾಡಿದಾಗ ಬಹುಕೋಟಿ ಹಗರಣದಲ್ಲಿ ಕಂಪನಿ ಎಂಡಿ ತಬ್ರೇಜ್ ಸಿಕ್ಕಿ ಬಿದ್ದಿದ್ದಾನೆ. ಈಗ ಸಿಸಿಬಿ ಪೊಲೀಸರು ತಬ್ರೇಜ್ ಬಂಧಿಸಿ ಹಣ ವಶಪಡಿಸಿಕೊಳ್ಳಲು ತಯಾರಿ ನಡೆಸುತ್ತಿದ್ದು, ಆತನ ಆಸ್ತಿ ಪಾಸ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link