ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ಹೆಮ್ಮೆಯ ಗರಿ..!

ಬೆಂಗಳೂರು:

   ಕರ್ನಾಟಕದ ಹೆಮ್ಮೆ ಎಂದೇ ಪರಿಗಣಿತವಾಗಿರವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈಗ ದೇಶದಲ್ಲಿ ಎರಡನೆ ಅತ್ಯಂತ ಬ್ಯುಸಿಯಾಗಿರುವ ವಿಮಾನ ನಿಲ್ದಾಣ ಎನಿಸಿಕೊಂಡಿದೆ.

   ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇತ್ತೀಚಿಗೆ ಬಿಡುಗಡೆ ಮಾಡಿರುವ ಅಂಕಿಸಂಖ್ಯೆಗಳ ಪ್ರಕಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಧೀರ್ಘ ಕಾಲದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉಳಿಸಿಕೊಂಡಿದ್ದ ಸ್ಥಾನವನ್ನು ಕಿತ್ತುಕೊಂಡಿದ್ದು, ದೇಶದಲ್ಲಿನ ಎರಡನೇಯ ಬ್ಯುಸಿಯಾಗಿರುವ ವಿಮಾನ ನಿಲ್ದಾಣವಾಗಿ ಹೊರಹೊಮ್ಮಿದೆ.

     2020-2021ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿನ ಅಂಕಿಅಂಶಗಳು ಈ ವಾರದ ಆರಂಭದಲ್ಲಿ ಬಿಡುಗಡೆಯಾಗಿದ್ದು,  ಏಪ್ರಿಲ್ ನಿಂದ ಜೂನ್ ವರೆಗೂ 4, 54, 704 ಅಂತಾರಾಷ್ಟ್ರೀಯ ಮತ್ತು ದೇಶಿಯ ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಚರಿಸಿದ್ದರೆ, ಇದೇ ಅವಧಿಯಲ್ಲಿ ಮುಂಬೈಯಲ್ಲಿ 3, 19, 412 ಪ್ರಯಾಣಿಕರು ಹಾಗೂ ಇಂದಿರಾಗಾಂಧಿ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 12, 31, 338 ಪ್ರಯಾಣಿಕರು ಸಂಚರಿಸಿದ್ದಾರೆ. ಕೊಲ್ಕತ್ತಾ ಮುಂಬೈಗಿಂತ ಕಡಿಮೆ ಸ್ಥಾನಕ್ಕೆ ತಳಲ್ಪಟ್ಟಿತ್ತು, ನಾಲ್ಕನೇ ಸ್ಥಾನದಲ್ಲಿದೆ.

     ಕೆಐಎ ಅಧಿಕಾರಿಗಳ ಪ್ರಕಾರ ಜೂನ್ ತಿಂಗಳಲ್ಲಿ 180ರ ಸರಾಸರಿಯಂತೆ ವಿಮಾನಗಳ ಆಗಮನ ಮತ್ತು ನಿರ್ಗಮನವಾಗಿದೆ. ಆಗಸ್ಟ್ ತಿಂಗಳ ಮಾಹಿತಿಯಂತೆ ಒಟ್ಟು 91 ವಿಮಾನಗಳು ಆಗಮಿಸಿದ್ದು, 94 ವಿಮಾನಗಳು ನಿಲ್ದಾಣದಿಂದ ನಿರ್ಗಮಿಸಿವೆ.  ಇದರಲ್ಲಿ ವಂದೇ ಭಾರತ್ ಮಿಷನ್ ವಿಮಾನಗಳು ಕೂಡಾ  ಸೇರಿವೆ.

     ಕೋವಿಡ್-19 ಕಾರಣದಿಂದಾಗಿ ವಿಮಾನಗಳ ಹಾರಾಟ ಸಂಖ್ಯೆಯಲ್ಲಿ ಕಡಿಮೆಯಾಗಿದೆ ಎಂದು ಹಿರಿಯ ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೇ  25 ರಂದು ಕೇಂದ್ರ ಸರ್ಕಾರ ದೇಶಿಯ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಿದ ನಂತರ ರಾಜ್ಯ ಸರ್ಕಾರ ಕೂಡಾ ವಿಮಾನಗಳ ಹಾರಾಟಕ್ಕೆ ಅವಕಾಶ ಕಲ್ಪಿಸಿದ್ದಾಗಿ ಬೆಂಗಳೂರು ವಿಮಾನ ನಿಲ್ದಾಣದ ವಕ್ತಾರರೊಬ್ಬರು ತಿಳಿಸಿದ್ದಾರೆ.

     ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನೀತಿ ಕೈಗೊಳ್ಳುವ  ಸಾಧ್ಯತೆಯಿದೆ. ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಸೋಂಕು ತಗುಲದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶಕ ಅರುಣ್ ಕುಮಾರ್  ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap