ಬೆಂಗಳೂರು
ಫ್ರೀಡಂ ಪಾರ್ಕ್‍ನಲ್ಲಿ ಗುರುವಾರ ಸಂಜೆ ಸಿಎಎ ವಿರೋಧಿಸಿ ನಡೆಸಿದ ಪ್ರತಿಭಟನೆ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಅಮೂಲ್ಯ ಲಿಯೋನಾಳ ಘೋಷಣೆಯಿಂದ ಉಂಟಾಗಿರುವ ಆಕ್ರೋಶದ ಬೆನ್ನಲ್ಲೇ ಮತ್ತೊಬ್ಬ ವಿದ್ಯಾರ್ಥಿನಿ ಶುಕ್ರವಾರ ಫ್ರೀ ಕಾಶ್ಮೀರ್ ಎಂಬ ಭಿತ್ತಿಪತ್ರ ಪ್ರದರ್ಶನ ಮಾಡಿ ಜನಾಕ್ರೋಶಕ್ಕೆ ಕಾರಣಳಾಗಿದ್ದಾಳೆ.
ಪಾಕಿಸ್ತಾನ ಜಿಂದಾಬಾದ್ ಘೋಷಣೆಯನ್ನು ಕೂಗಿದ ಲಿಯೋನಾಳ ನಡವಳಿಕೆಯನ್ನು ಖಂಡಿಸಿ ನಗರದ ಟೌನ್‍ಹಾಲ್ ಬಳಿ ಬೆಳಿಗ್ಗೆ ಶ್ರೀರಾಮಸೇನೆ ಹಾಗೂ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು.ಇದಕ್ಕಿದ್ದ ಹಾಗೆ ಅಲ್ಲಿಗೆ ಬಂದ ಯುವತಿ ಪ್ರತಿಭಟನಾಕಾರರ ಹಿಂದೆ ನಿಂತು ಫ್ರೀ ಕಾಶ್ಮೀರ್, ಫ್ರೀ ಮುಸ್ಲಿಂ, ಫ್ರೀ ದಲಿತ್ (ಮುಕ್ತಿ ಕಾಶ್ಮೀರ್, ಮುಕ್ತಿ ದಲಿತ್ ಮುಕ್ತಿ ಮುಸ್ಲಿಂ) ಎಂದು ಬರೆದಿದ್ದ ಭಿತ್ತಿಪತ್ರವನ್ನು ಪ್ರದರ್ಶಿಸಿದ್ದಾಳೆ.
ತಕ್ಷಣವೇ ಎಚ್ಚೆತ್ತುಕೊಂಡ ಪ್ರತಿಭಟನಾನಿರತರು ಆಕೆಯನ್ನು ಪ್ರಶ್ನಿಸಲು ಮುಂದಾಗುತ್ತಿದ್ದಂತೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ. ಕೂಡಲೇ ಪ್ರತಿಭಟನೆಯ ಆಯೋಜಕರು ಆಕೆಯನ್ನು ಸುತ್ತುವರೆದು ಪ್ರಶ್ನಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಪೆÇಲೀಸರು ಯುವತಿಯನ್ನು ರಕ್ಷಣೆ ಮಾಡಿ ಎಸ್.ಜೆ.ಪಾರ್ಕ್ ಪೆÇಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಯುವತಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿಲ್ಲ. ಆಕೆಯ ಕೈಯಲ್ಲಿ ಮುಕ್ತಿ ಕಾಶ್ಮೀರ್, ಮುಕ್ತಿ ಮುಸ್ಲಿಂ, ಮುಕ್ತಿ ದಲಿತ್ ಎಂಬ ಪ್ಲೆ ಕಾರ್ಡ್ ಇತ್ತು. ಆ ಕ್ಷಣದಲ್ಲಿ ಯುವತಿ ಮೇಲೆ ದೊಡ್ಡ ಪ್ರಮಾಣದ ಹಲ್ಲೆ ನಡೆಯುವ ಸಾಧ್ಯತೆ ಇತ್ತು. ಹಾಗಾಗಿ ಆಕೆಯನ್ನು ರಕ್ಷಣೆ ಮಾಡಿ ಕರೆದೊಯ್ಯುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಈಗ ಅವಳು ನಮ್ಮ ವಶದಲ್ಲಿದ್ದಾಳೆ ಎಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್‍ಸಿಂಗ್ ರಾಥೋಡ್ ತಿಳಿಸಿದ್ದಾರೆ
ಬೇರೆ ಸಂಘಟನೆಗಳು, ಬೇರೆ ಸಿದ್ದಾಂತ ಹೊಂದಿರುವವರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಆ ಸ್ಥಳಕ್ಕೆ ಬಂದು ಗೊಂದಲ ಮೂಡಿಸುವ ಪ್ರಯತ್ನವನ್ನು ಯಾರೂ ಮಾಡಬಾರದು. ಒಂದು ವೇಳೆ ಪ್ರತಿಭಟನೆ ನಡೆಸುವ ಅಗತ್ಯವಿದ್ದರೆ ಪೆÇಲೀಸರಿಗೆ ಮನವಿ ಸಲ್ಲಿಸಿ ಪೂರ್ವಾನುಮತಿ ಯೊಂದಿಗೆ ದಿನಾಂಕ ನಿಗದಿಪಡಿಸಿಕೊಳ್ಳಲಿ. ಅದನ್ನು ಬಿಟ್ಟು ಬೇರೆಯವರ ಪ್ರತಿಭಟನೆಯಲ್ಲಿ ಈ ರೀತಿ ಮಾಡಬಾರದು. ಈಕೆಯ ಹಿಂದೆ ಯಾರಿದ್ದಾರೆ? ಎಲ್ಲಿಂದ ಬಂದಳು ಎಂಬುದನ್ನು ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು.
ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನೆಯ ಆಯೋಜಕರೂ ಆಗಿರುವ ಶಿವರಾಮ ಸೇನೆಯ ರಾಜ್ಯ ಕಾರ್ಯದರ್ಶಿ ಹರೀಶ್, ಅಪರಿಚಿತ ಯುವತಿ ಎಲ್ಲಿಂದ ಬಂದಳು, ಏಕೆ ಬಂದಳು ಎಂಬುದು ಗೊತ್ತಿಲ್ಲ. ನಮ್ಮ ಮುಂದೆಯೇ ನಡೆದುಕೊಂಡು ಬಂದು ಎಲ್ಲರ ಹಿಂದೆ ಸೇರಿಕೊಂಡಳು. ಏಕಾಏಕಿ ದೇಶ ವಿರೋಧಿ ಘೋಷಣೆ ಕೂಗಿದ್ದಾಳೆ. ನಾವು ಆಕೆಯನ್ನು ವಿಚಾರಿಸುವ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ, ಆಕೆ ಮಾನಸಿಕ ಅಸ್ವಸ್ಥೆ ಬಿಟ್ಟುಬಿಡಿ ಎಂದು ಹೇಳಿದ್ದಾರೆ, ಆದರೆ ನಾವು ಈ ಪ್ರಕರಣವನ್ನು ಇಲ್ಲಿಗೆ ಕೈಬಿಡುವುದಿಲ್ಲ.
ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.ಈ ನಡುವೆ ಯುವತಿ ನಮ್ಮ ಪ್ರತಿಭಟನೆಯ ನಡುವೆ ಬಂದು ಪಾಕಿಸ್ತಾನ ಜಿಂದಾಬಾದ್ ಎಂಬುದು ಸರಿಯಲ್ಲ.ಅಮೂಲ್ಯ ಲಿಯೋನಾಳ ನಡವಳಿಕೆಯ ನಂತರ ಜನರ ಆಕ್ರೋಶ ತೀವ್ರಗೊಂಡಿದೆ. ಇಂತಹ ಸಂದರ್ಭದಲ್ಲೇ ಇಂದು ಕೂಡ ಅದೇ ಧೋರಣೆ ಮುಂದುವರೆದಿರುವುದು ಖಂಡನೀಯ. ಈ ರೀತಿಯ ಸಂತತಿಯನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಪ್ರತಿಭಟನಾ ಸಂಘಟಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂರು ದಾಖಲು
ಪುರಭವನ ಮುಂಭಾಗ ಹಿಂದೂ ಪರ ಸಂಘಟನೆಗಳು ದೇಶ ವಿರೋಧಿ ಘೋಷಣೆ ಕೂಗಿದವರ ಕಠಿಣ ಮೇಲೆ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಫ್ರೀ ಕಾಶ್ಮೀರ್, ಫ್ರೀ ಮುಸ್ಲಿಂ, ಫ್ರೀ ದಲಿತ್ ಎನ್ನುವ ಭಿತ್ತಿಪತ್ರ ಪ್ರದರ್ಶಿಸಿದಿ ಅರುದ್ರಾ ಎಂಬ ಯುವತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದ್ದು ಕೃತ್ಯಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ
ಚೇತನ್ ಸಿಂಗ್ ರಾಥೋಡ್,ಡಿಸಿಪಿ, ಕೇಂದ್ರ ವಿಭಾಗ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/02/allwyn_210220_ardra1.gif)